ಪುತ್ತೂರು| ಗೆಜ್ಜೆಗಿರಿ ಬ್ರಹ್ಮಕಲಶ- ಇತಿಹಾಸ ಸೃಷ್ಟಿಸಿದ ಹೊರೆಕಾಣಿಕೆ ಮೆರವಣಿಗೆ
ಪುತ್ತೂರು: ಗೆಜ್ಜೆ ಗಿರಿ ಕ್ಷೇತ್ರದ ಬ್ರಹ್ಮಕಲಶ ದ ಅಂಗವಾಗಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ದವಠಾರದಿಂದ ಹೊರಟ ಹೊರೆಕಾಣಿಕೆ ಮೆರವಣಿಗೆ ಹೊಸ ಇತಿಹಾಸ ಸೃಷ್ಟಿ ಸಿದೆ.
ಕೋಟಿ ಚೆನ್ನಯ್ಯ ಬಾಳಿ ಬದುಕಿದ ಗೆಜ್ಜೆಗಿರಿ ನಂದನ ವಿತ್ತಲ್ ಕ್ಷೇತ್ರವು ಗಡಿ ಭಾಷೆಗಳನ್ನು ಮೀರಿ ನಿಂತ ಐತಿಹಾಸಿಕ ಧಾರ್ಮಿಕ ಕ್ಷೇತ್ರವಾಗಿದೆ ಎಂಬುದಕ್ಕೆ ಇವತ್ತು ಪುತ್ತೂರಿನಲ್ಲಿ ನಮಗೆ ಕಾಣಸಿಕ್ಕ ಹೊರೆಕಾಣಿಕೆಯ ಮೆರವಣಿಗೆಯೇ ಸಾಕ್ಷಿ.
ನ ಭೂತೋ ನ ಭವಿಷ್ಯತಿ ಎಂಬಂತೆ ದ.ಕ., ಉಡುಪಿ, ಕಾಸರಗೋಡು, ಬೆಂಗಳೂರು, ಗೋವಾ, ಮಡಿಕೇರಿ, ಚಿಕ್ಕಮಗಳೂರು ಹೀಗೆ ನಾನ ಕಡೆಗಳಿಂದ ಹೊರೆಕಾಣಿಕೆ ಶ್ರೀಕ್ಷೇತ್ರ ಪುತ್ತೂರಿನಿಂದ ಗೆಜ್ಜೆಗಿರಿಗೆ ವೈವಭದ ಮೆರವಣಿಗೆಯಲ್ಲಿ ತೆರಳಿದರು.
ಗೆಜ್ಜೆಗಿರಿ ಬ್ರಹ್ಮಕಲಶದ ಹೊರೆಕಾಣಿಕೆ ಮೆರವಣಿಗೆ ಹೊಸ ಇತಿಹಾಸ ಸೃಷ್ಟಿಗೆ ಸಾಕ್ಷಿಯಾಗಿದೆ.
Good news