Home Breaking Entertainment News Kannada ಅಕ್ಕಂದು ಬೆಳಿಗ್ಗಿನ ಯೋಗ, ಬಾವಂದು ರಾತ್ರಿಯ ಭೋಗ | ಶಿಲ್ಪಾ ಶೆಟ್ಟಿ ತಂಗಿ ಶಮಿತಾ...

ಅಕ್ಕಂದು ಬೆಳಿಗ್ಗಿನ ಯೋಗ, ಬಾವಂದು ರಾತ್ರಿಯ ಭೋಗ | ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿನ ಟ್ರೋಲ್ ಮಾಡಿ ಜಗ್ಗಾಡುತ್ತಿರುವ ಟ್ರೋಲಿಗರು

Hindu neighbor gifts plot of land

Hindu neighbour gifts land to Muslim journalist

ಬ್ಲೂಫಿಲ್ಮ್ ದಂಧೆಯಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ಅವರನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ರಾಜ್​ ಕುಂದ್ರಾ ಮಾಡಿದ ತಪ್ಪಿನಿಂದಾಗಿ ಅವರ ಇಡೀ ಕುಟುಂಬವೇ ಮುಜುಗರ ಅನುಭವಿಸುವಂತಾಗಿದೆ. ಇದೀಗ ಶಿಲ್ಪಾ ಶೆಟ್ಟಿ ಅವರ ತಂಗಿ ಶಮಿತಾ ಅವರನ್ನು ನೆಟ್ಟಿಗರು ಎಳೆತಂದು ಸಖತ್ ಟ್ರೋಲ್ ಮಾಡುತ್ತಿದ್ದಾರೆ. ಅದಕ್ಕೆ ಕಾರಣವೂ ಇಲ್ಲದಿಲ್ಲ.

ನಿನ್ನೆ ಶಿಲ್ಪಾ ಶೆಟ್ಟಿ ಅಭಿನಯದ ಹಂಗಾಮಾ 2 ಓಟಿಟಿ ಡಿಸ್ನಿ ಪ್ಲಸ್​ ಹಾಟ್​ಸ್ಟಾರ್​ ಮೂಲಕ ರಿಲೀಸ್​ ಆಗಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಕ್ಕನಿಗೆ ಶಮಿತಾ ಶೆಟ್ಟಿ ಶುಭ ಕೋರಿದ್ದಾರೆ.
’14 ವರ್ಷಗಳ ನಂತರ ನಿನ್ನ ನಟನೆಯ ಹಂಗಾಮಾ 2 ರಿಲೀಸ್​ ಆಗುತ್ತಿದೆ. ನಿನಗೆ ಶುಭವಾಗಲಿ. ನೀನು ಇದಕ್ಕಾಗಿ ಸಾಕಷ್ಟು ಪರಿಶ್ರಮ ಪಟ್ಟಿದ್ದೀಯ ಎನ್ನುವುದು ಗೊತ್ತು. ನಾನು ನಿನ್ನ ಜತೆ ಸದಾ ಇರುತ್ತೇನೆ. ನೀನು ಜೀವನದಲ್ಲಿ ಸಾಕಷ್ಟು ಏರಿಳಿತ ಕಂಡಿದ್ದೀಯ. ಪ್ರತಿ ಬಾರಿ ಮತ್ತಷ್ಟು ಸ್ಟ್ರಾಂಗ್​ ಆಗುತ್ತಿದ್ದೀಯ. ಈ ಕಷ್ಟವೂ ಕಳೆದು ಹೋಗುತ್ತದೆ. ಹಂಗಾಮಾ 2 ತಂಡಕ್ಕೆ ಆಲ್​ ದಿ ಬೆಸ್ಟ್​’ ಎಂದು ಶಮಿತಾ ಬರೆದುಕೊಂಡಿದ್ದಾರೆ.

ಆದರೆ ಆ ಪೋಸ್ಟ್​ಗೆ ಕಮೆಂಟ್​ ಮಾಡಿರುವ ಬಹುತೇಕರು ರಾಜ್​ ಕುಂದ್ರಾ ವಿಚಾರವನ್ನು ಎಳೆದು ತಂದಿದ್ದಾರೆ. ಶಮಿತಾ ಶೆಟ್ಟಿ ನ ಟ್ರೊಲ್ ಮಾಡಲು ಕಾರಣ ರಾಜ್ ಕುಂದ್ರಾ, ತನ್ನ ಪತ್ನಿಯ ತಂಗಿಯನ್ನೇ ಹಾಟ್ ಶಾಟ್ ವಿಡಿಯೋ ಮಾಡಲು ಕರೆದಿದ್ದ. ಆ ಥರದ ವಿಡಿಯೋ ಮಾಡಲು ಆಕೆಯ ಜತೆ ಪ್ಲಾನ್ ಆಗಿತ್ತು ಎನ್ನುವ ಮಾಹಿತಿ ಸಿಕ್ಕಿದ ನಂತರ ಶಮಿತಾ ಶೆಟ್ಟಿ ಬಗ್ಗೆ ತುಂಬ ಕಟುವಾಗಿ ಟ್ರೋಲ್​ ಮಾಡಿದ್ದಾರೆ. ಅಂತಹ ಕೆಲವು ಕಮೆಂಟ್​ಗಳು ಈಗ ಸಖತ್​ ವೈರಲ್​ ಆಗುತ್ತಿದೆ.

‘ನಿಮ್ಮ ಅಕ್ಕ ಬೆಳಗ್ಗಿನ ಯೋಗ ಪೋಸ್​ಗಳನ್ನು ಕಲಿಸಿಕೊಡುತ್ತಾರೆ. ಆದರೆ ನಿಮ್ಮ ಭಾವ ರಾತ್ರಿಯ ಯೋಗ (ಭೋಗ) ಪೋಸ್​ಗಳನ್ನು ಕಲಿಸಿಕೊಡುತ್ತಾರೆ’ ಎಂದು ನೆಟ್ಟಿಗರೊಬ್ಬರು ಕಮೆಂಟ್​ ಮಾಡಿದ್ದಾರೆ.

ಈ ಕಾಮೆಂಟ್ ಈಗ ಬಹಳಷ್ಟು ವೈರಲ್ ಆಗಿದ್ದು, ಈ ಕಾಮೆಂಟ್ ಗೆ ಬಹಳಷ್ಟು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.