ವಿಶ್ವ ಕುಸ್ತಿ ಚಾಂಪಿಯನ್ ಶಿಪ್: ಭಾರತದ ಕುಸ್ತಿ ಪಟು ಪ್ರಿಯಾ ಮಲಿಕ್‌ಗೆ ಚಿನ್ನದ ಗರಿ

Share the Article

ವಿಶ್ವ ಕುಸ್ತಿ ಚಾಂಪಿಯನ್ ಶಿಪ್‌ನಲ್ಲಿ ಭಾರತದ ಕುಸ್ತಿ ಪಟು ಪ್ರಿಯಾ ಮಲಿಕ್ ಅವರು ವಿಜೇತರಾಗಿ, ಬಂಗಾರದ ಪದಕ ಪಡೆಯುವ ಮೂಲಕ ದೇಶದ ಹಿರಿಮೆಯನ್ನು ಹೆಚ್ಚಿಸಿದ್ದಾರೆ.

ಬುಡಾಫೆಸ್ಟ್‌ನಲ್ಲಿ ನಡೆದ ವಿಶ್ವ ಕುಸ್ತಿ ಚಾಂಪಿಯನ್ ಶಿಪ್‌ನ 73 ಕೆಜಿ ವಿಭಾಗದಲ್ಲಿ ಪ್ರಿಯಾ ಮಲಿಕ್ ಈ ಸಾಧನೆ ಮೆರೆದಿದ್ದಾರೆ.

ಪ್ರಿಯಾ ಮಲಿಕ್ ಅವರ ಈ ಸಾಧನೆಗೆ ಪ್ರಶಂಸೆಗಳ ಸುರಿಮಳೆಯೇ ಹರಿದು ಬರುತ್ತಿದೆ. ನಿನ್ನೆಯಷ್ಟೇ ಟೊಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತದ ಮೀರಾಬಾಯ್ ಚಾನು ಅವರು ವೈಯ್ಟ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಪಡೆಯುವ ಮೂಲಕ ದೇಶದ ಹಿರಿಮೆಯನ್ನು ಎತ್ತಿ ಹಿಡಿದಿದ್ದರು. ಇದೀಗ ವಿಶ್ವ ಕುಸ್ತಿ ಚಾಂಪಿಯನ್ ಶಿಪ್‌ನಲ್ಲಿ ಪ್ರಿಯಾ ಮಲ್ಲಿಕ್ ಗೋಲ್ಡ್ ಮೆಡಲ್ ಪಡೆದು ಭಾರತದ ಬಂಗಾರದ ಹುಡುಗಿ ಎಂಬ ಕೀರ್ತಿ‌ಗೆ ಭಾಜನರಾಗಿದ್ದಾರೆ.

Leave A Reply