ಅನಿವಾಸಿ ಉದ್ಯಮಿ ಡಾ.ಬಿ.ಆರ್. ಶೆಟ್ಟಿ ಎನ್.ಎಂ.ಸಿ ಸಂಸ್ಥೆ ಮುಖ್ಯಸ್ಥ ಸ್ಥಾನಕ್ಕೆ ರಾಜಿನಾಮೆ! ಷಡ್ಯಂತ್ರಕ್ಕೆ ಒಳಗಾದರಾ?

ಮಂಗಳೂರು:ಅನಿವಾಸಿ‌ ಭಾರತೀಯ ಉದ್ಯಮಿ ಬಿಆರ್ ಶೆಟ್ಟಿ ಅವರು ತಾನೇ ಸ್ಥಾಪಿಸಿದ ಎನ್.ಎಂ.ಸಿ. ಹೆಲ್ತ್ ಆಸ್ಪತ್ರೆ ಯ ಮುಖ್ಯಸ್ಥ ನ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ

ಕೇವಲ 517₹ ಹಿಡಕೊಂಡು 1973ರಲ್ಲಿ ಉಡುಪಿಯಿಂದ ಯುಎಇಗೆ ತೆರಳಿದ ಬಿ.ರಘುರಾಮ ಶೆಟ್ಟಿ ಮೆಡಿಕಲ್ ರೆಪ್ರಸೆಂಟೇಟಿವ್ ಆಗಿ ಕೆಲಸ ಮಾಡುತ್ತಿದ್ದರು.

ನಂತರ ಒಂದೊಂದೇ ಮೆಟ್ಟಿಲೇರುತ್ತ ಅಬುಧಾಬಿಯಲ್ಲಿ ಎನ್​ಎಂಸಿ ಹೆಲ್ತ್​​ ಆಸ್ಪತ್ರೆ ಸ್ಥಾಪಿಸಿದ ಬಿ.ಆರ್. ಶೆಟ್ಟಿ ವಿಶ್ವದ ಬಿಲಿಯನೇರ್​ಗಳಲ್ಲಿ ಒಬ್ಬರಾಗಿದ್ದ ಇದೀಗ ಅವರು ತಾನೇ ಸ್ಥಾಪಿಸಿದ ಸಂಸ್ಥೆಯ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಕರಾವಳಿ ಮೂಲದ ಬಾವಗುತ್ತು ರಘುರಾಮ ಶೆಟ್ಟಿ (ಬಿ.ಆರ್‌.ಶೆಟ್ಟಿ) ಸಮೂಹ ಸಂಸ್ಥೆಗಳ ಷೇರು ಗಳ ಮೌಲ್ಯ ಭಾರಿ ಪ್ರಮಾಣದಲ್ಲಿ ಕುಸಿದಿರುವ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ ಎನ್ನಲಾಗುತ್ತದೆ. ಮುಖ್ಯಸ್ಥನ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು ಫೆಬ್ರವರಿ ಎರಡನೇ ವಾರದಲ್ಲಿ ನಡೆದ ಸಭೆಯಲ್ಲಿ ಒತ್ತಾಯಿಸಿದ್ದರು.

ಆನಂತರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಜತೆಗೆ ಆಡಳಿತ ಮಂಡಳಿಯಿಂದ ಇನ್ನೂ ಮೂವರು ಸದಸ್ಯರು ರಾಜೀನಾಮೆ ನೀಡಿದ್ದಾರೆ. ಎನ್‌ಎಂಸಿ ಹೆಲ್ತ್‌ ಸಂಸ್ಥೆಯ ಹಣಕಾಸು ವ್ಯವಹಾರ ಪಾರದರ್ಶಕವಾಗಿಲ್ಲ ಮತ್ತು ಸಾಕಷ್ಟು ಅವ್ಯವಹಾರ ನಡೆದಿದೆ ಎಂದು ಷೇರು ಹೂಡಿಕೆ ಸಲಹಾ ಸಂಸ್ಥೆ ‘ಮಡ್ಡಿ ವಾಟರ್ಸ್‌’ 2019ರ ಡಿಸೆಂಬರ್‌ನಲ್ಲಿ ವರದಿ ಪ್ರಕಟಿಸಿತ್ತು.

ಆನಂತರ ಬಿ.ಆರ್‌.ಶೆಟ್ಟಿ ಅವರ ಕಂಪನಿಗಳ ಷೇರುಗಳ ಮೌಲ್ಯವು ಶೇ 40 ಕ್ಕೂ ಹೆಚ್ಚು ಕುಸಿತ ಕಂಡಿದ್ದವು. ಕಂಪನಿಯ ಸ್ವತ್ತುಗಳ ಮೌಲ್ಯವನ್ನು ಹೆಚ್ಚು ಎನ್ನುವಂತೆ ತೋರಿಸಲಾಗಿದೆ. ಆದರೆ, ಅವುಗಳ ಮೌಲ್ಯ ಕಡಿಮೆ ಇದೆ. ಬೇರೆ ಆಸ್ಪತ್ರೆಗಳನ್ನು ಮಾರುಕಟ್ಟೆ ಮೌಲ್ಯಕ್ಕಿಂತ ಬಾರಿ ಅಧಿಕ ಬೆಲೆಯಲ್ಲಿ ಖರೀದಿಸಲಾಗಿದೆ. ಸಾಲ ಪಡೆಯಲು ಕಂಪನಿಯ ಷೇರುಗಳನ್ನು ವಿವಿಧ ಬ್ಯಾಂಕ್‌ಗಳಲ್ಲಿ ಅಡಮಾನ ಇಡಲಾಗಿದೆ.

ಆದರೆ, ಸಾಲ ಮತ್ತು ಷೇರುಗಳನ್ನು ಅಡಮಾನ ಇಟ್ಟಿರುವ ವಿಚಾರವನ್ನು ಮುಚ್ಚಿಡಲಾಗಿದೆ ಎಂದು ಮಡ್ಡಿ ವಾಟರ್ಸ್‌ ವರದಿ ಮಾಡಿತ್ತು. ಕಂಪನಿಯ ಲೆಕ್ಕಪರಿಶೋಧನಾ ವರದಿಯೂ, ಅವ್ಯವಹಾರದ ಬಗ್ಗೆ ಸುಳಿವು ನೀಡಿತ್ತು. ಇದರ ಬೆನ್ನಲ್ಲೇ ಅವರ ರಾಜೀನಾಮೆಗೆ ಆಡಳಿತ ಮಂಡಳಿ ಸದಸ್ಯರು ಒತ್ತಾಯಿಸಿದ್ದರು. ಎನ್‌ಎಂಸಿ ಹೆಲ್ತ್‌ ಷೇರುಗಳನ್ನು ಅಡಮಾನ ಇರಿಸಿಕೊಂಡಿದ್ದ ಫರ್ಸ್ಟ್ ಅಬುದಾಭಿ ಬ್ಯಾಂಕ್‌, ಅವುಗಳನ್ನು ಈಚೆಗೆ ಮಾರಾಟ ಮಾಡಿದೆ.

ಆದರೆ ಒಂದು ಮೂಲದ ಪ್ರಕಾರ ವ್ಯವಸ್ಥಿತ ಸಂಚಿಗೆ ಗುರಿಯಾಗಿ ತನ್ನದೇ ಸಂಸ್ಥೆಗೆ ರಾಜಿನಾಮೆ ನೀಡುವಂತಾಗಿದೆ ಎನ್ನಲಾಗಿದೆ.

Leave A Reply

Your email address will not be published.