

ಕಾಪು: ಕಾಂಗ್ರೆಸ್ ಮುಖಂಡ, ಕೆಎಂಎಫ್ ಮಾಜಿ ನಿರ್ದೇಶಕ ಕಾಪು ದಿವಾಕರ ಶೆಟ್ಟಿಯವರ ಮನೆಗೆ ನಿನ್ನೆ (ಗುರುವಾರ) ರಾತ್ರಿ ಕಳ್ಳರು ನುಗ್ಗಿದ್ದಾರೆ. ಕುಟುಂಬ ಸಮೇತರಾಗಿ ದಿವಾಕರ ಶೆಟ್ಟಿ ಅವರು ಶುಭ ಕಾರ್ಯಕ್ಕೆಂದು ಮುಂಬಯಿಗೆ ಹೋಗಿದೆ. ಇದನ್ನು ನೋಡಿ ಮಧ್ಯರಾತ್ರಿಯ ನಂತರ ಮನೆಯ ಒಳ ಪ್ರವೇಶಿಸಿ ಮನೆಯನ್ನು ಜಾಲಾಡಿದ್ದಾರೆ.
ಮುಖ್ಯ ದ್ವಾರದ ದಾರಂದ ಮುರಿದು ಒಳ ನುಗ್ಗಿದ ಕಳ್ಳರು ಮನೆಯಲ್ಲಿ ಜಾಲಾಡಿದ್ದು, ಸಿಸಿ ಕೆಮರಾದ ದಿಕ್ಕನ್ನು ಬದಲಿಸಿರುವ ಕಳ್ಳರು ಡಿವಿಆರ್ ಕೊಂಡೊಯ್ದಿದ್ದಾರೆ. ಮೇಲಿನ ಮಹಡಿಯಲ್ಲಿ ಓರ್ವ ಮಲಗಿದ್ದು, ಕಳ್ಳತನ ನಡೆದ ಕುರಿತು ಅವರ ಗಮನಕ್ಕೆ ಬಂದಿಲ್ಲ.
ಕಳವಾದ ಸೊತ್ತುಗಳ ಕುರಿತು ಇನ್ನಷ್ಟೇ ವಿವರ ತಿಳಿಯಬೇಕಿದೆ. ಡಿವೈಎಸ್ಪಿ ಡಿ.ಟಿ.ಪ್ರಭು, ವೃತ್ತ ನಿರೀಕ್ಷಕ ಅಜ್ಮತ್ ಅಲಿ, ಎಸ್ಸೈ ತೇಜಸ್ವಿ, ಬೆರಳಚ್ಚು ವಿಭಾಗದ ಇನ್ಸ್‌ಪೆಕ್ಟರ್ ಮೋಹಿನಿ ಕುಮಾರ್ ಸೇರಿ ಕಾಪು ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ.












