Home Crime 29 ವರ್ಷಗಳಿಂದ ತಲೆಮರೆಸಿಕೊಂಡಿದ್ದ ದಂಡುಪಾಳ್ಯ ಗ್ಯಾಂಗ್‌ನ ಕುಖ್ಯಾತ ಆರೋಪಿಯನ್ನು ಬಂಧನ ಮಾಡಿದ ಉರ್ವಾ ಪೊಲೀಸರು

29 ವರ್ಷಗಳಿಂದ ತಲೆಮರೆಸಿಕೊಂಡಿದ್ದ ದಂಡುಪಾಳ್ಯ ಗ್ಯಾಂಗ್‌ನ ಕುಖ್ಯಾತ ಆರೋಪಿಯನ್ನು ಬಂಧನ ಮಾಡಿದ ಉರ್ವಾ ಪೊಲೀಸರು

Hindu neighbor gifts plot of land

Hindu neighbour gifts land to Muslim journalist

ಮಂಗಳೂರು: 1997 ರಲ್ಲಿ ಉರ್ವಾ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದ ಜೋಡಿ ಕೊಲೆ ಪ್ರಕರಣಕ್ಕೆ ಕುರಿತಂತೆ ಕುಖ್ಯಾತ ʼದಂಡುಪಾಳ್ಯ ಗ್ಯಾಂಗ್‌ʼ ಸದಸ್ಯ 29 ವರ್ಷಗಳಿಂದ ತಲೆಮರೆಸಿಕೊಂಡಿದ್ದಾತನನ್ನು ಮಂಗಳೂರು ಉರ್ವಾ ಪೊಲೀಸರು ಆಂಧ್ರಪ್ರದೇಶದಲ್ಲಿ ಬಂದಿಸಿದ್ದಾರೆ.

ಬಂಧಿತ ವ್ಯಕ್ತಿಯನ್ನು ಚಿಕ್ಕ ಹನುಮ @ ಚಿಕ್ಕ ಹನುಮಂತಪ್ಪ @ ಕೆ.ಕೃಷ್ಣಪ್ಪ @ ಕೃಷ್ಣ (55) ಎಂದು ಗುರುತಿಸಲಾಗಿದೆ.

ಬೆಂಗಳೂರು ಜಿಲ್ಲೆಯ ಹೊಸಕೋಟೆ ತಾಲೂಕು ದಂಡುಪಾಳ್ಯ ಗ್ರಾಮದ ನಿವಾಸಿಯಾಗಿದ್ದು, ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ಮದನಪಳ್ಳಿಯ ವಿಜಯನಗರ ಕಾಲೋನಿಯಲ್ಲಿ ತಲೆಮರೆಸಿಕೊಂಡಿದ್ದನು. ಉರ್ವಾ ಠಾಣಾ ಪೊಲೀಸರು ಆರೋಪಿಯನ್ನು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

1997 ರ ಅಕ್ಟೋಬರ್‌ 11 ರಂದು ಮಧ್ಯರಾತ್ರಿ ಉರ್ವಾ ಮಾರಿಗುಡಿ ಕ್ರಾಸ್‌ ಸಮೀಪದ ಅನ್ವರ್‌ ಮಹಲ್‌ ಮನೆಗೆ ನುಗ್ಗಿದ ದಂಡುಪಾಳ್ಯ ಗ್ಯಾಂಗ್‌ ಸದಸ್ಯರು ಮನೆಯಲ್ಲಿದ್ದ 80 ವರ್ಷದ ಶ್ರೀಮತಿ ಲೂವಿಸ್‌ ಡಿಮೆಲ್ಲೋ ಹಾಗೂ 19 ವರ್ಷದ ರಂಜಿತ್‌ ವೇಗಸ್‌ ನನ್ನು ಹತ್ಯೆ ಮಾಡಿ ಚಿನ್ನಾಭಾರಣಗಳನ್ನು ದೋಚಿ ಪರಾರಿಯಾಗಿದ್ದರು.

ಪ್ರಕರಣ ಸಂಬಂಧಪಟ್ಟಂತೆ ಇತರೆ ಆರೋಪಿಗಳ ವಿರುದ್ಧ ತನಿಖೆ ಪೂರ್ಣಗೊಳಿಸಿ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಲಾಗಿತ್ತು. ಬೆಂಗಳೂರಿನ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹ ಆವರಣದಲ್ಲಿರುವ 34ನೇ ಅಪರ ನಗರ ಸಿವಿಲ್‌ ಮತ್ತು ಸೆಷನ್‌ ನ್ಯಾಯಾಲಯವು ವಿಚಾರಣೆ ನಡೆಸಿ ದೊಡ್ಡ ಹನುಮ ಸೇರಿ ಐದು ಆರೋಪಿಗಳನ್ನು ದೋಷಿಗಳೆಂದು ಘೋಷಿಸಿತ್ತು.

ಆದರೆ ಆರೋಪಿ ಚಿಕ್ಕ ಹನುಮ ತನ್ನ ಹೆಸರನ್ನು ಬದಲಾಯಿಸಿದ್ದು, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ಆಂಧ್ರಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದನು. ಕರ್ನಾಟಕ ರಾಜ್ಯದಲ್ಲಿ ಈತನ ಮೇಲೆ ಸುಮಾರು 13 ಕೊಲೆ ಹಾಗೂ ದರೋಡೆ ಪ್ರಕರಣಗಳು ದಾಖಲಾಗಿರುವ ಮಾಹಿತಿ ಇದೆ. 2010 ರಲ್ಲಿ ಮಂಗಳೂರು JMFC 2 ನೇ ನ್ಯಾಯಾಲಯವು LPC ವಾರೆಂಟ್‌ ಹೊರಡಿಸಿತ್ತು.