Home Death ಐಟಿ ಉದ್ಯೋಗಿಗಳ ನಡುವೆ ಬಿಯರ್‌ ಕುಡಿಯುವ ಸವಾಲು: ಇಬ್ಬರು ಸಾವು

ಐಟಿ ಉದ್ಯೋಗಿಗಳ ನಡುವೆ ಬಿಯರ್‌ ಕುಡಿಯುವ ಸವಾಲು: ಇಬ್ಬರು ಸಾವು

Death News

Hindu neighbor gifts plot of land

Hindu neighbour gifts land to Muslim journalist

ತಿರುಪತಿ: ಸಂಕ್ರಾಂತಿ ರಜೆಗೆ ಮನೆಗೆ ಬಂದಿದ್ದ ಇಬ್ಬರು ಸಾಫ್ಟ್‌ವೇರ್ ಎಂಜಿನಿಯರ್‌ಗಳು ಶನಿವಾರ ತಡರಾತ್ರಿ ಅನ್ನಮಯ್ಯ ಜಿಲ್ಲೆಯ ಕಂಬಂವರಿಪಲ್ಲೆ ಮಂಡಲದಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವುದು ಕಂಡುಬಂದಿದೆ. ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯಲ್ಲಿ ಇಬ್ಬರು ಯುವ ಸಾಫ್ಟ್‌ವೇರ್ ಎಂಜಿನಿಯರ್‌ಗಳು ಬಿಯರ್ ಕುಡಿಯುವ ಸವಾಲು ಒಡ್ಡಿ ಬೆಟ್ಟಿಂಗ್‌ನಲ್ಲಿ ಸಾವನ್ನಪ್ಪಿದ್ದಾರೆ.

ಪೊಲೀಸರ ಪ್ರಕಾರ, ಬಂದವಂತಿಪಲ್ಲೆ ಗ್ರಾಮದ ಆರು ಯುವಕರು ಮದ್ಯ ಸೇವಿಸಲು ಗ್ರಾಮದ ಹೊರವಲಯಕ್ಕೆ ಹೋಗಿದ್ದರು. ಆ ಸಮಯದಲ್ಲಿ, ಸ್ನೇಹಿತರೆಲ್ಲ ಒಂದು ಕಡೆ ಸೇರಿದ್ದು, ಮನರಂಜನೆಗೆಂದು ಬಿಯರ್‌ ಕುಡಿಯುವ ಸ್ಪರ್ಧೆಯನ್ನು ಆರಂಭ ಮಾಡಿದ್ದಾರೆ. ಇದರಲ್ಲಿ ಮಣಿ, ಪುಷ್ಪರಾಜ್‌ ಪರಸ್ಪರ ಸ್ಪರ್ಧಿಸಿದ್ದು, ಸ್ಪರ್ಧೆಯ ಸಂದರ್ಭ ಇಬ್ಬರೂ ಒಟ್ಟಾರೆ 19 ಟಿನ್‌ ಬಿಯರ್‌ ಕುಡಿದಿದ್ದಾರೆ ಎನ್ನಲಾಗಿದೆ. ಮದ್ಯಪಾನದ ಅತಿ ಸೇವನೆಯಿಂದ ಇಬ್ಬರಿಗೂ ಅಸ್ವಸ್ಥತೆ ಕಾಣಿಸಿಕೊಂಡಿದೆ.

ಅವರಲ್ಲಿ ಇಬ್ಬರು, ಮಣಿ (35) ಮತ್ತು ಪುಷ್ಪರಾಜ್ (27) ಅಸ್ವಸ್ಥರಾಗಿದ್ದರು ಎಂದು ವರದಿಯಾಗಿದೆ. ಅವರ ಸ್ನೇಹಿತರು ತಕ್ಷಣ ಅವರನ್ನು ಪಿಲೆರುವಿನ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಿದರು.  ಅಲ್ಲಿ ವೈದ್ಯರು ಅವರನ್ನು ತಲುಪುವಾಗಲೇ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.

ಮಣಿ ಚೆನ್ನೈನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರೆ, ಪುಷ್ಪರಾಜ್ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಮಣಿ ಅವರ ಪತ್ನಿ ಮತ್ತು ಒಬ್ಬ ಚಿಕ್ಕ ಮಗ ಇದ್ದು, ಪುಷ್ಪರಾಜ್ ಅವಿವಾಹಿತರಾಗಿದ್ದರು. ಕುಟುಂಬ ಸದಸ್ಯರು ಈ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. ಅನುಮಾನಾಸ್ಪದ ಸಾವಿನ ಪ್ರಕರಣ ದಾಖಲಾಗಿದ್ದು, ಸಾವಿಗೆ ನಿಖರವಾದ ಕಾರಣವನ್ನು ಕಂಡುಹಿಡಿಯಲು ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.