Home News Mary Kom: ಬಾಕ್ಸರ್, ಒಲಂಪಿಕ್ ಸ್ಟಾರ್ ಮೇರಿ ಕೋಮ್ ಗೆ ಅಕ್ರಮ ಸಂಬಂಧ?! ಪತಿ ಗಂಭೀರ...

Mary Kom: ಬಾಕ್ಸರ್, ಒಲಂಪಿಕ್ ಸ್ಟಾರ್ ಮೇರಿ ಕೋಮ್ ಗೆ ಅಕ್ರಮ ಸಂಬಂಧ?! ಪತಿ ಗಂಭೀರ ಆರೋಪ

Hindu neighbor gifts plot of land

Hindu neighbour gifts land to Muslim journalist

 

Mary Kom: ಸುಮಾರು 18 ವರ್ಷಗಳ ದಾಂಪತ್ಯಕ್ಕೆ 2023ರಲ್ಲಿ ಡಿವೋರ್ಸ್ ಮೂಲಕ ಅಂತ್ಯವಾಡಿದ್ದ ಭಾರತದ ಪ್ರಸಿದ್ದ ಬಾಕ್ಸರ್ ಮತ್ತು ಒಲಿಂಪಿಕ್ ಪದಕ ವಿಜೇತೆ ಮೇರಿ ಕೋಮ್(Mary Kom) ಗೆ ಅಕ್ರಮ ಸಂಬಂಧವಿರುವ ಬಗ್ಗೆ ಇದೀಗ ಅವರ ಮಾಜಿ ಪತಿ ಕರುಂಗ್ ಓನ್ಖೋಲರ್ ಸಾಬೀತುಪಡಿಸಿದ್ದಾರೆ ಎನ್ನಲಾಗಿದೆ.

ಹೌದು, ಭಾರತೀಯ ಬಾಕ್ಸರ್ ಮತ್ತು ಒಲಿಂಪಿಕ್ ಚಾಂಪಿಯನ್ ಮೇರಿ ಕೋಮ್ (Mary Kom) ವಿರುದ್ಧ ಅವರ ಮಾಜಿ ಪತಿ ಓನ್ಲರ್ ಕೋಮ್ ( Karung Onkholer) ಆಘಾತಕಾರಿ ಆರೋಪ ಮಾಡಿದ್ದಾರೆ. ಕಳೆದ ಕೆಲವು ದಿನಗಳಿಂದ, ಮೇರಿ ಕೋಮ್ ತಮ್ಮ ಪತಿ ವಿರುದ್ಧ ಗಂಭೀರ ಆರೋಪಗಳನ್ನು ಮಾಡುತ್ತಿದ್ದಾರೆ. ಆದರೆ ಆ ಎಲ್ಲಾ ಆರೋಪಗಳನ್ನ ತಿರಸ್ಕರಿಸುತ್ತಾ ಬಂದಿದ್ದ ಓನ್ಲರ್, ಇದೀಗ ಮೇರಿ ಕೋಮ್ ಅವರ ವೈಯಕ್ತಿಕ ಜೀವನದ ಬಗ್ಗೆ ಆಘಾತಕಾರಿ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ. ಮೇರಿ ಕೋಮ್​ ಪರ ಪುರುಷರೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದರೆಂದು ಆರೋಪಿಸಿದ್ದಾರೆ.

ಮೇರಿ, ‘ ಒನ್ಲರ್‌ ನನ್ನ ಹೆಸರಲ್ಲಿ ಸಾಲ ಪಡೆಯುತ್ತಿದ್ದರು. ನನ್ನ ಆಸ್ತಿಯನ್ನೆಲ್ಲ ಅವರ ಹೆಸರಿಗೆ ವರ್ಗಾಯಿಸಿಕೊಂಡು, ಅದನ್ನು ಅಡವಿಟ್ಟು ಸಾಲ ಪಡೆದಿದ್ದರು. ರೌಡಿಗಳನ್ನು ಬಿಟ್ಟು ನನ್ನಿಂದ ಭೂಮಿ ಬರೆಸಿಕೊಂಡಿದ್ದರು’ ಎಂದು ಇತ್ತೀಚೆಗೆ ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಒನ್ಲರ್‌, ‘2013ರಿಂದಲೂ ಆಕೆ ಅನೈತಿಕ ಸಂಬಂಧ ಹೊಂದಿದ್ದಳು. ಮೊದಲು ಜೂನಿಯರ್‌ ಬಾಕ್ಸರ್‌. ಇದಾದ ಬಳಿಕ 2017ರಲ್ಲಿ ಅಕಾಡೆಮಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬನ ಜತೆ ಸಂಬಂಧ ಇಟ್ಟುಕೊಂಡಿದ್ದಳು. ಇದಕ್ಕೆಲ್ಲ ನನ್ನ ಬಳಿ ಪುರಾವೆಯಿದೆ. ಆದರೂ ಇಷ್ಟು ದಿನ ನಾನು ಮೌನವಾಗಿದ್ದೆ’ ಎಂದಿದ್ದಾರೆ.

ಮೇರಿಕೋಮ್ ಮತ್ತು ಮೇರಿಕೋಮ್ ಬಾಕ್ಸಿಂಗ್ ಅಕಾಡೆಮಿಯಲ್ಲಿ ಕೆಲಸ ಮಾಡುವ ವ್ಯಕ್ತಿಯ ನಡುವೆ ಅಕ್ರಮ ಸಂಬಂಧವಿದೆ. ಇದನ್ನ ನಿರೂಪಿಸಲು ನನ್ನ ಬಳಿ ಅವರಿಬ್ಬರ ವಾಟ್ಸಾಪ್ ಚಾಟ್‌ಗಳು ಮತ್ತು ದೃಢವಾದ ಪುರಾವೆಗಳಿವೆ. ಆಕೆ ಸಂಬಂಧ ಹೊಂದಿದ್ದ ವ್ಯಕ್ತಿಯ ಹೆಸರು ಸೇರಿದಂತೆ ನನ್ನ ಬಳಿ ಪುರಾವೆಗಳಿವೆ. ಈ ಸಂಬಂಧ ಇಬ್ಬರ ನಡುವೆ ಗಲಾಟೆಯಾಗಿ ಎರಡೂ ಕುಟುಂಬಗಳು ರಾಜಿ ಮಾಡಿ, ಸಂಸಾರವನ್ನು ಮುಂದುವರೆಸಿಕೊಂಡು ಹೋಗಲು ತಿಳಿಸಿದ್ದರು. ಕುಟುಂಬದವರ ಮಾತಿಗೆ ನಾನು ಸುಮ್ಮನಾಗಿದ್ದೆ, ಮುಂದೆ ಇದು ಸಾಧ್ಯವಿಲ್ಲ ಅನ್ನಿಸಿದಾಗ ನಾವು ಡಿವೋರ್ಸ್ ಪಡೆದಿದ್ದೇವೆ. ಅವರು ಸೆಲೆಬ್ರೆಟಿ, ನಾನು ಸಾಮಾನ್ಯ ಮನುಷ್ಯ. ಅವರು ತಮ್ಮ ಜೀವನವನ್ನು ಮುಂದುವರೆಸಲು ನಾನು ಅಡ್ಡಿಪಡಿಸಲ್ಲ. ಆದರೆ ವಿನಾಕಾರಣ ನನ್ನ ಮೇಲೆ ಆರೋಪ ಮಾಡೋದು ಬೇಡ ಎಂದು ಹೇಳಿದ್ದಾರೆ.