Home News ವಿವಿಧ ರೈಲುಗಳ ಟರ್ಮಿನಲ್ ಬದಲಾವಣೆ

ವಿವಿಧ ರೈಲುಗಳ ಟರ್ಮಿನಲ್ ಬದಲಾವಣೆ

Mangaluru Bengaluru Trains

Hindu neighbor gifts plot of land

Hindu neighbour gifts land to Muslim journalist

ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್‌ಆರ್) ರೈಲು ನಿಲ್ದಾಣ ದಲ್ಲಿ ಪಿಟ್‌ಲೈನ್ ಪುನರ್ ನಿರ್ಮಾಣ ಕಾಮಗಾರಿ ಕೈಗೊಂಡಿರುವ ಹಿನ್ನೆಲೆಯಲ್ಲಿ ಜ.13ರಿಂದ ಮಾ.11ರ ವರೆಗೆ ವಿವಿಧ ಮಾರ್ಗಗಳಿಗೆ ಸಂಚರಿಸುವ ಕೆಲ ರೈಲುಗಳ ಟರ್ಮಿನಲ್ ಬದಲಾವಣೆ ಮತ್ತು ಸಂಚಾರ ಭಾಗಶಃ ರದ್ದಾಗಿದೆ.

ಎರ್ನಾಕುಲಂ ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್‌ ರೈಲು (12678) ಸಂಚಾರವನ್ನು ಜ.13ರಿಂದ ಮಾ.10ರ ವರೆಗೆ ಭಾಗಶಃ ರದ್ದುಗೊಳಿಸಲಾಗಿದೆ. ಈ ರೈಲು ಕೆಎಸ್‌ಆರ್ ಟರ್ಮಿನಲ್ ಬದಲಿಗೆ ಕಂಟೋನ್ವೆಂಟ್ ನಿಲ್ದಾಣವರೆಗೆ ಮಾತ್ರ ಸಂಚರಿಸಲಿದೆ. ಜ.17ರಿಂದ ಮಾರ್ಚ್ 11ರವರೆಗೆ ಬೆಂಗಳೂರಿನಿಂದ ಎರ್ನಾ ಕುಲಂವರೆಗೆ ಸಂಚರಿಸುವ 12677 ಸಂಖ್ಯೆಯ ರೈಲು ಕೆಎಸ್‌ಆ‌ರ್ ಬದಲಿಗೆ ಕಂಟೋನ್ಮಂಟ್ ನಿಲ್ದಾಣದಿಂದ ಹೊರಡುತ್ತದೆ.

ಜ.16ರಿಂದ ಮಾರ್ಚ್ 10ರವರೆಗೆ ಹುಜೂರ್‌ಸಾಹಿಬ್ ನಾಂದೇಡ್ ನಿಂದ ಬೆಂಗಳೂರು ತಲುಪುವ (16594) ಎಕ್ಸ್‌ಪ್ರೆಸ್ ರೈಲು ಸಂಚಾರವು ಕೆಎಸ್‌ಆರ್ ಬದಲಿಗೆ ಯಶವಂತಪುರ ನಿಲ್ದಾಣದಲ್ಲಿ ಕೊನೆಗೊಳ್ಳಲಿದೆ. ಅದೇ ರೀತಿ ಜ.17ರಿಂದ ಮಾರ್ಚ್ 11ರವರೆಗೆ ಬೆಂಗಳೂರಿನಿಂದ ಹುಜೂರ್ ಸಾಹಿಬ್ ನಾಂದೇಡ್ ತಲುಪುವ ಎಕ್ಸ್‌ಪ್ರೆಸ್ ರೈಲು(16593) ಕೆಎಸ್‌ಆರ್ ಬದಲಿಗೆ ಯಶವಂತಪುರದಿಂದ ರಾತ್ರಿ 11.55ಕ್ಕೆ ಹೊರಡಲಿದೆ. ಈ ರೈಲುಗಳು ಯಲಹಂಕ ಮಾರ್ಗವಾಗಿ ಸಂಚರಿಸಲಿದ್ದು, ಕಂಟೋನ್ವೆಂಟ್ ಮತ್ತು ಕೆಎಸ್‌ಆರ್‌ಗೆ ನಿಲುಗಡೆ ಹೊಂದಿರುವುದಿಲ್ಲ.

ಜ.16 ರಿಂದ ಮಾ.11ರವರೆಗೆ ಕಣ್ಣೂರಿನಿಂದ ಬೆಂಗಳೂರು ತಲುಪುವ ಎಕ್ಸ್ಪ್ರೆಸ್ ರೈಲು (16512) ಸಂಚಾರ ಕೆಎಸ್‌ಆರ್ ಬದಲಿಗೆ ಎಸ್ಎಂವಿಟಿಗೆ ಕೊನೆಯಾಗಲಿದೆ. ಬೆಂಗಳೂರು-ಕಣ್ಣೂರು (16511) ಎಕ್ಸ್‌ಪ್ರೆಸ್ ರೈಲು ಕೆಎಸ್ ಆರ್ ಬದಲಿಗೆ ಎಸ್‌ಎಂವಿಟಿಯಿಂದ ರಾತ್ರಿ 8ಕ್ಕೆ ರೈಲುಗಳು ಹೊರಡಲಿವೆ. ಬಾಣಸವಾಡಿ, ಹೆಬ್ಬಾಳ ಮಾರ್ಗವಾಗಿ ಸಂಚರಿಸಲಿವೆ ಎಂದು ಬೆಂಗಳೂರು ವಿಭಾಗೀಯ ರೈಲ್ವೆ ಪ್ರಕಟಣೆ ತಿಳಿಸಿದೆ.