ಇತಿಹಾಸಕ್ಕೆ ಮುನ್ನುಡಿ ಬರೆದ ಮುರುಳ್ಯ ಪ್ರೋ ಕಬಡ್ಡಿ ಪಂದ್ಯಾಟ.
ಇತಿಹಾಸಕ್ಕೆ ಮುನ್ನುಡಿ ಬರೆದ ಮುರುಳ್ಯ ಪ್ರೋ ಕಬಡ್ಡಿ ಪಂದ್ಯಾಟ… ಹೌದು.. ಒಂದು ಆಟದಂತೆ ಮತ್ತೊಂದಲ್ಲ..ಬದಲಾಗುವ ಆಟಗಳು ವ್ಯತ್ಯಸ್ಥ ತಂಡಗಳು..ಪಂದ್ಯಾಟದ ಆರಂಭದಲ್ಲಿ ವೇದಿಕೆ ಹತ್ತುವ ಮುಂಚಿತವಾಗಿ ಗಣ್ಯ ಅತಿಥಿಗಳು. ಇದು ಸುಳ್ಯ ತಾಲೂಕಿನ ಎಣ್ಮೂರು ಗ್ರಾಮದ ಮುರಳ್ಯದಲ್ಲಿ ನಡೆದ ಕಾರ್ಯಕ್ರಮ.
ತಾಯಿ ಭಾರತಾಂಭೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಈ ಮಣ್ಣು ನಿನ್ನದೇ, ಸಮಯ ಕೂಡ ನಿನ್ನದೆ..ಆಟ ಮಾತ್ರ ನಮ್ಮದು, ಈ ಮಣ್ಣಲ್ಲಿ ನೋಯಿಸಬೇಡ ತಾಯಿ ಎಂಬ ನಿಲುವಿನೊಂದಿಗೆ ಪಂದ್ಯಾಟ ವನ್ನು ಉದ್ಘಾಟಿಸಿದರು.
ಪಂದ್ಯಾಟ ದಲ್ಲಿ ಬಲಿಷ್ಠ ಅರು ತಂಡಗಳ ಸೆಣಸಾಟದಲ್ಲಿ ಯಾವುದೇ ವಾದ ವಿವಾದಗಳಿಲ್ಲದೆ, ಹಾಗೂ ತಂಡದ ಎಲ್ಲ ಮಾಲಕರು ಕೂಡ ಅತ್ಯಂತ ತಾಳ್ಮೆಯಿಂದ ತಂಡದ ಆಟಗಾರರನ್ನು ಹುರುದುಂಬಿಸುವುದನ್ನು ಕಂಡವನಿದ್ದೇನೆ..ಸೆಣಸಾಡಿ ಸೋಲನ್ನು ಕಂಡು ನಿರ್ಗಮಿಸಿದ ತಂಡವೊಂದರ ಮಾಲಕರು ಬರುವ ವರ್ಷ ಮತ್ತೆ ತಂಡದ ಮಾಲಕತ್ವವನ್ನು ವಹಿಸುತ್ತೇನೆ ಈಗಲೇ ಬರೆದಿಟ್ಟುಕೊಳ್ಳಿ ಎಂದು ಹೇಳುತ್ತಿರುವುದನ್ನು ಕಂಡಾಗ ನಿಮ್ಮ ಕ್ರೀಡಾ ಪ್ರೇಮವನ್ನು ಹಾಗೂ ಸಂಸ್ಥೆ ಯೊಂದಿಗಿರುವ ಬಾಂಧವ್ಯದ ಬೆಸುಗೆಯನ್ನು ಕಂಡು ಎಲ್ಲರಿಗೂ ಖುಷಿ ಅನಿಸಿದ್ದು ನೈಜ.
ಶಾಂತಿ ಸೌಹಾರ್ಧತೆಯನ್ನು ಪಾಲಿಸಿಕೊಂಡು ಬರುತ್ತಿರುವ ಶ್ರೀರಾಮ ಫ್ರೆಂಡ್ಸ್ ಮುರುಳ್ಯ ಭವ್ಯ ವೇದಿಕೆಯಲ್ಲಿ ಸರ್ವಧರ್ಮದ ಅತಿಥಿಗಳು ವೇದಿಕೆಯನ್ನು ಹಂಚಿಕೊಂಡಿರುವುದು ಹಾಗೂ ಏಕಕಾಲದಲ್ಲಿ ಸರ್ವಧರ್ಮದ ಸಾಧಕರನ್ನು ಗುರುತಿಸುವ ಪ್ರಯತ್ನ ಮಾಡಿರುವುದು ಎಲ್ಲರೂ ಮೆಚ್ಚುವಂತದ್ದೆ.
ಫೈನಲ್ ಪಂದ್ಯಾಟಕ್ಕೂ ಮುನ್ನ ರಾಷ್ಟ್ರಗೀತೆಯನ್ನು ಮೊಳಗಿಸುವುದರ ಮೂಲಕ ಕ್ರೀಡಾಪಟುಗಳು ಹಾಗೂ ಕ್ರೀಡಾಭಿಮಾನಿಗಳ ಹೃದಯದಲ್ಲಿ ದೇಶಪ್ರೇಮವನ್ನು ಸಾರಿದರು. ಶ್ರೀ ರಾಮನ ಆದರ್ಶಗಳನ್ನು ಪಾಲಿಸಿಕೊಂಡು ಬರುತ್ತಿರುವ ನಮ್ಮ ಯುವಕರನ್ನು ಇನಷ್ಟು ಪ್ರೋತ್ಸಾಹಿಸೋಣ…ಮತ್ತೋಮ್ಮೆ ಇಂತಹ ಸೌಹಾರ್ದ ಕಾರ್ಯಕ್ರಮವನ್ನು ನಿರೀಕ್ಷಿಸೋಣ…ಮುರುಳ್ಯ ಸಮಹಾದಿಯಲ್ಲಿ ಏಕಮನಸ್ಸಿನೊಂದಿಗೆ ಸಮಾನ ಹಾದಿಯಲ್ಲಿ ಸಾಗಾಲಿ ಎಂದು ಆಶಿಸೋಣ…
✍️ ದಿನೇಶ್ ಪೈಕ, ದೀಪಾ ಸೌಂಡ್ಸ್ & ಲೈಟ್ಸ್ ಪುಣ್ಚತ್ತಾರು