Home News Shocking : ಮೊಣಕಾಲು ನೋವು ಎಂದ ಬಾಲಕನಿಗೆ ನಡೆಯಿತು ಶಸ್ತ್ರ ಚಿಕಿತ್ಸೆ – ಎಚ್ಚರವಾಗುತ್ತಿದ್ದಂತೆ ಮಾತನಾಡಿದ್ದು...

Shocking : ಮೊಣಕಾಲು ನೋವು ಎಂದ ಬಾಲಕನಿಗೆ ನಡೆಯಿತು ಶಸ್ತ್ರ ಚಿಕಿತ್ಸೆ – ಎಚ್ಚರವಾಗುತ್ತಿದ್ದಂತೆ ಮಾತನಾಡಿದ್ದು ವಿದೇಶಿ ಭಾಷೆ, ಪೋಷಕರ ಗುರುತು ಇಲ್ಲ

Hindu neighbor gifts plot of land

Hindu neighbour gifts land to Muslim journalist

Shocking:  ಮೊಣಕಾಲು ನೋವು ಎಂದು ಆಸ್ಪತ್ರೆಗೆ ದಾಖಲಾಗಿದ್ದ ಯುವಕನಿಗೆ ಶಸ್ತ್ರಚಿಕಿತ್ಸೆ ನಡೆದಿದೆ. ಶಸ್ತ್ರಚಿಕಿತ್ಸೆ ಬಳಿಕ ಬಾಲಕನು ಯಾವುದೋ ವಿದೇಶಿ ಭಾಷಾ ಮಾತನಾಡಿ ಎಲ್ಲರನ್ನೂ ಬೆರಗುಗೊಳಿಸಿದ್ದಾನೆ. ಅಷ್ಟೇ ಅಲ್ಲದೆ ಆತ ತನ್ನ ಹೆತ್ತವರನ್ನು ಕೂಡ ಗುರುತು ಹಿಡಿಯಲಿಲ್ಲ.

ಹೌದು, ನೆದರ್​ಲ್ಯಾಂಡ್​ನಲ್ಲಿ ಅಚ್ಚರಿಯ ಪ್ರಕರಣವೊಂದು ನಡೆದಿದೆ.  17 ವರ್ಷದ ಹುಡುಗ ಫುಟ್ಬಾಲ್ ಆಡುವಾಗ ಗಾಯಗೊಂಡು ಮೊಣಕಾಲಿನ ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿತ್ತು ಮತ್ತು ಸುರಕ್ಷಿತವಾಗಿತ್ತು ಮತ್ತು ತಕ್ಷಣ ಯಾವುದೇ ತೊಂದರೆಯಾಗಲಿಲ್ಲ. ಆತನ ಮಾತೃಭಾಷೆ ಡಚ್. ಆದರೆ ಎಚ್ಚರವಾದಾಗ ಅವನು ಶಾಲೆಯಲ್ಲಿ ಪ್ರಾಥಮಿಕವಾಗಿ ಬಳಸುತ್ತಿದ್ದ ಇಂಗ್ಲಿಷ್ ಭಾಷೆಯನ್ನು ಮಾತ್ರ ಮಾತನಾಡುತ್ತಿದ್ದ. ಪೋಷಕರ ಗುರುತನ್ನೂ ಹಿಡೀಲಿಲ್ಲ, ಇದು ಆತಂಕವನ್ನುಂಟು ಮಾಡಿತ್ತು.

ಬಳಿಕ ಪರೀಕ್ಷಿಸಿದಾಗ ಹುಡುಗನಿಗೆ ಯಾವುದೇ ರೀತಿಯ ಮಾನಸಿಕ ಸಮಸ್ಯೆಗಳು ಇಲ್ಲ ಎಂಬುದು ತಿಳಿದಿದೆ. ಹಾಗಿದ್ದರೆ ಇದು ಯಾಕೆ ಹೀಗಾಯಿತು ಎಂದು ವೈದ್ಯರು ನೋಡಿದಾಗ ಇದು ವಿದೇಶಿ ಭಾಷಾ ಸಿಂಡ್ರೋಮ್ (FLS) ಎಂದು ಗುರುತಿಸಿದರು. ಈ ಸ್ಥಿತಿಯಲ್ಲಿ ರೋಗಿಗಳು ಇದ್ದಕ್ಕಿದ್ದಂತೆ ಮತ್ತು ಅನೈಚ್ಛಿಕವಾಗಿ ತಮ್ಮ ಮಾತೃಭಾಷೆಯ ಬದಲಿಗೆ ಬೇರೆ ಭಾಷೆಯನ್ನು ಮಾತನಾಡಲು ಶುರು ಮಾಡುತ್ತಾರೆ ಎಂದು ಅವರು ಹೇಳಿದ್ದಾರೆ.