Central Budget: 2026ಕ್ಕೆ ಭಾನುವಾರದಂದು ಕೇಂದ್ರ ಬಜೆಟ್‌ ಮಂಡನೆ? ಅಂದುಕೊಂಡತೆ ಆದರೆ ಹೊಸ ದಾಖಲೆ ಸೃಷ್ಟಿ

Share the Article

Central Budget : 2026ರಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಈ ಬಾರಿ ಫೆಬ್ರುವರಿ 1ರ ಭಾನುವಾರದಂದು ಬಜೆಟ್‌ ಮಂಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಒಂದು ವೇಳೆ ಇದು ನಿಜವಾದರೆ ಭಾರತದಲ್ಲಿ ಇತಿಹಾಸ ಸೃಷ್ಟಿಯಾಗುತ್ತದೆ.

ಹೌದು, ಯಾಕೆಂದರೆ 2017ರಿಂದಲೂ ಪ್ರತಿವರ್ಷ ಫೆಬ್ರುವರಿ 1ರಂದು ಕೇಂದ್ರ ಬಜೆಟ್ (ಆಯವ್ಯಯ) ಮಂಡನೆ ಮಾಡಲಾಗುತ್ತಿದೆ. ಇದೇ ಸಂಪ್ರದಾಯ 2026ರಲ್ಲೂ ಮುಂದುವರಿದರೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಈ ಬಾರಿ ಫೆಬ್ರುವರಿ 1ರ ಭಾನುವಾರದಂದು ಬಜೆಟ್‌ ಮಂಡಿಸಬೇಕಾಗುತ್ತದೆ. ಈ ವಿಷಯದ ಬಗ್ಗೆ ಅಂತಿಮ ನಿರ್ಧಾರ ಬಾಕಿ ಇದ್ದರೂ, ಸರ್ಕಾರ ದಿನಾಂಕವನ್ನು ಮುಂದೂಡುವ ಸಾಧ್ಯತೆಯಿಲ್ಲ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.

ಅಂದಹಾಗೆ 2017ರಿಂದ ಫೆಬ್ರವರಿ 1ರಂದು ಬಜೆಟ್‌ ಅನ್ನು ಮಂಡಿಸಲಾಗುತ್ತಿದೆ. ಅದಕ್ಕೂ ಮೊದಲು ಜನವರಿ 31ರಂದು ಬಜೆಟ್‌ ಅನ್ನು ಮಂಡಿಸಲಾಗುತ್ತಿತ್ತು. ಸರ್ಕಾರವು ಈ ಸಂಪ್ರದಾಯವನ್ನು ಕೈಬಿಡುವ ಸಾಧ್ಯತೆಯಿಲ್ಲ ಎಂದು ರಿಜಿಜು ತಿಳಿಸಿದ್ದಾರೆ. ಸಂಸದೀಯ ವ್ಯವಹಾರಗಳ ಸಂಪುಟ ಸಮಿತಿಯು ಸೂಕ್ತ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ.

ಇನ್ನು ಸಾಮಾನ್ಯವಾಗಿ ಭಾನುವಾರ ಸರ್ಕಾರಿ ರಜೆ. ಅಂದು ಯಾವುದೇ ಅಧಿಕೃತ ಕಾರ್ಯಕ್ರಮಗಳು ಇರುವುದಿಲ್ಲ. ಆದರೆ ನಿಗದಿತ ದಿನಾಂಕದಂದೇ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್‌ ಬಜೆಟ್‌ ಮಂಡನೆ ಮಾಡಲು ಮುಂದಾಗಿದ್ದಾರೆ.ಹಾಗೊಂದು ವೇಳೆ ತಮ ತೀರ್ಮಾನದಂತೆ ನಡೆದುಕೊಂಡರೆ, ಸ್ವತಂತ್ರ ಭಾರತದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಕೇಂದ್ರ ಸರ್ಕಾರವು ಭಾನುವಾರವೇ ಬಜೆಟ್‌ ಮಂಡನೆ ಮಾಡಿದ ದಾಖಲೆಯನ್ನು ನಿರ್ಮಿಸಲಿದೆ. ಏಕೆಂದರೆ ಇದುವರೆಗೂ ಭಾನುವಾರ ಬಜೆಟ್‌ ಮಂಡನೆ ಮಾಡಿದ ನಿದರ್ಶನಗಳಿಲ್ಲ.

Comments are closed.