Recharge : ಹೊಸ ವರ್ಷಕ್ಕೆ ಏರ್ಟೆಲ್, ಜಿಯೋ ರಿಚಾರ್ಜ್ ಪ್ಲಾನ್ ದರ 20% ಏರಿಕೆ ?!

Share the Article

Recharge : ನೀನು ಕೆಲವೇ ದಿನಗಳಲ್ಲಿ 2026 ರನ್ನು ಜನರು ಸ್ವಾಗತಿಸಲಿದ್ದಾರೆ. ಆದರೆ ಈ ಹೊಸ ವರ್ಷಕ್ಕೆ ಟೆಲಿಕಾಂ ಕಂಪನಿಗಳು ದೇಶದ ಜನತೆಗೆ ದೊಡ್ಡ ಶಾಕ್ ನೀಡಲಿವೆ. ಕೆಲವು ತಿಂಗಳ ಹಿಂದಷ್ಟೇ ರಿಚಾರ್ಜ್ ದರವನ್ನು ಏರಿಸಿ, ಎಲ್ಲಾ ಟೆಲಿಕಾಂ ಕಂಪನಿಗಳು ದೇಶದ ಜನತೆಗೆ ಶಾಕ್ ನೀಡಿದ್ವು. ಇದೀಗ ಈ ಬೆನ್ನಲ್ಲೇ ಮತ್ತೆ ಒಗ್ಗೂಡಿರುವ ಏರ್ಟೆಲ್ ಮತ್ತು ಜಿಯೋ ತಮ್ಮ ರಿಚಾರ್ಜ್ ಪ್ಲಾನ್ ದರವನ್ನು 20% ಏರಿಕೆ ಮಾಡಲು ನಿರ್ಧರಿಸಿವೆ ಎಂದು ವರದಿಗಳು ಹೇಳಿವೆ.

ಹೌದು, ಏರ್ಟೆಲ್ ಮತ್ತು ಜಿಯೋ ಸಂಸ್ಥೆಗಳು ತಮ್ಮ ಪ್ರೀಪೇಯ್ಡ್ ಮತ್ತು ಪೋಸ್ಟ್ ಪೇಯ್ಡ್ ಯೋಜನೆಗಳ ಬೆಲೆಯನ್ನು ಶೇಕಡಾ 20 ರವರೆಗೆ ಹೆಚ್ಚಿಸುವ ನಿರೀಕ್ಷೆಯಿದೆ. ಮೋರ್ಗನ್ ಸ್ಟಾನ್ಲಿ ಪ್ರಕಾರ, ಟೆಲಿಕಾಂ ಕಂಪನಿಗಳು ಸುಂಕವನ್ನು ಶೇಕಡಾ 20 ರಷ್ಟು ಹೆಚ್ಚಿಸುವ ನಿರೀಕ್ಷೆಯಿರುವುದರಿಂದ ಪ್ರೀಪೇಯ್ಡ್ ಮತ್ತು ಪೋಸ್ಟ್ ಪೇಯ್ಡ್ ಯೋಜನೆಗಳಲ್ಲಿ ಮೊಬೈಲ್ ಬಳಕೆದಾರರು ಮುಂದಿನ ವರ್ಷದಿಂದ ರೀಚಾರ್ಜ್ ಗಾಗಿ ಹೆಚ್ಚಿನ ಹಣವನ್ನು ಪಾವತಿಸಬೇಕಾಗಬಹುದು.

ಉತ್ತಮ ಡೇಟಾ ಬೆಲೆ ನಿಗದಿ, ಪೋಸ್ಟ್‌ ಪೇಯ್ಡ್ ಬಳಕೆದಾರರ ಸಂಖ್ಯೆ ಮತ್ತು ಹೆಚ್ಚಿನ ರೋಮಿಂಗ್ ಬೇಡಿಕೆಯಿಂದಾಗಿ ಏರ್‌ಟೆಲ್‌ನ ARPU-FY26 ರಲ್ಲಿ 260 ರೂ.ಗಳಿಂದ FY28 ರ ವೇಳೆಗೆ 320 ಕ್ಕಿಂತ ಹೆಚ್ಚಾಗಬಹುದು ಎಂದು ವರದಿ ಅಂದಾಜಿಸಿದೆ.

Comments are closed.