ಪಾಕಿಸ್ತಾನ ಪರ ಘೋಷಣೆ, 12 ಕೇಸು ದಾಖಲು

Share the Article

ರಾಜ್ಯದಲ್ಲಿ 2023ರಿಂದ ಇಲ್ಲಿಯವರೆಗೆ ಪೊಲೀಸರು ಸ್ವಯಂಪ್ರೇರಿತವಾಗಿ 61,299 ಪ್ರಕರಣ ದಾಖಲಿಸಿದ್ದು, ಇದರಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಕೂಗಿದ 6 ಪ್ರಕರಣಗಳಿವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಪರಿಷತ್‌ಗೆ ತಿಳಿಸಿದರು.

ಬಿಜೆಪಿಯ ಸಿ.ಟಿ. ರವಿ ಪ್ರಶ್ನೆಗೆ ಉತ್ತರಿಸಿ, “ಪೊಲೀಸರು ಸ್ವಯಂ ಪ್ರೇರಿತವಾಗಿ ದಾಖಲಿಸಿದ ದೂರುಗಳಲ್ಲಿ ಯಾವುದೇ ಕೇಸ್ ಹಿಂಪಡೆದಿಲ್ಲ. 3,131 ಪ್ರಕರಣ ತನಿಖಾ ಹಂತದಲ್ಲಿವೆ. ‘ಪಾಕಿಸ್ತಾನ್ ಜಿಂದಾಬಾದ್’ ಕೂಗಿದ ಬಗ್ಗೆ ಸ್ವಯಂ ಪ್ರೇರಿತ ಹಾಗೂ ಬೇರೆ ವ್ಯಕ್ತಿಗಳು ನೀಡಿದ ದೂರಿನ ಮೇರೆಗೆ 6 ಕೇಸ್‌ಗಳಿವೆ. ಈ ಪೈಕಿ 5 ಪ್ರಕರಣಗಳ ಆರೋಪಪಟ್ಟಿ ಸಲ್ಲಿಕೆ ಆಗಿದೆ. 2 ಪ್ರಕರಣಗಳಲ್ಲಿ ‘ಬಿ’ ಹಾಗೂ ಒಂದರಲ್ಲಿ ಸಿ’ ರಿಪೋರ್ಟ್ ಹಾಕಲಾಗಿದೆ. ಒಂದು ಎಫ್‌ಎಸ್‌ಎಲ್ ವರದಿ ಬಾಕಿ ಇದೆ,” ಎಂದು ಹೇಳಿದರು.

Comments are closed.