IPL-2026 : ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ IPL-2026 ಪಂದ್ಯ ಉದ್ಘಾಟನೆ!!

IPal-2026: ಕ್ರಿಕೆಟ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಈ ಬಾರಿ ಬೆಂಗಳೂರಿನಲ್ಲೇ IPL ಪಂದ್ಯ ಉದ್ಘಾಟನೆಗೊಳ್ಳಲಿದೆಯಂತೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಮೈಸೂರಿನಲ್ಲಿ ಈ ಬಗ್ಗೆ ತಿಳಿಸಿದ್ದಾರೆ.

ಹೌದು, ಮೈಸೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಕೆಎಸ್ ಸಿ ಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ‘ಬೆಂಗಳೂರಿನಲ್ಲೇ ಐಪಿಎಲ್ ಪಂದ್ಯ ಉದ್ಘಾಟನೆಗೊಳ್ಳಲಿದೆ. ಉದ್ಘಾಟನಾ ಪಂದ್ಯ ದಿನಾಂಕ ಶೀಘ್ರ ನಿಗದಿ ಮಾಡಲಾಗುತ್ತದೆ ಈ ಸಂಬಂಧ ನಾನು ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿಕೆ ಶಿವಕುಮಾರ್ ಅವರ ಜೊತೆ ಮಾತನಾಡಿದ್ದು ಅವರು ಸಹ ಸಂಪುಟದಲ್ಲಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಬೆಂಗಳೂರಿನಲ್ಲೇ ಐಪಿಎಲ್ ಪಂದ್ಯ ಉದ್ಘಾಟನೆಗೊಳ್ಳಲಿದೆ ಎಂದರು.
ಅಲ್ಲದೆ ಆರ್‌ಸಿಬಿ ಚಾಂಪಿಯನ್ ಆಗಿರುವುದರಿಂದ ತವರು ನೆಲದಲ್ಲಿಯೇ ಉದ್ಘಾಟನಾ ಪಂದ್ಯ ನಡೆಯಬೇಕು. ಆರ್‌ಸಿಬಿ ಸಂಭ್ರಮಾಚರಣೆಯಲ್ಲಿ ಉಂಟಾದ ಕಾಲ್ತುಳಿತ ಪ್ರಕರಣದಿಂದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಂತರರಾಷ್ಟ್ರೀಯ ಹಾಗೂ ಐಪಿಎಲ್ ಪಂದ್ಯಗಳನ್ನು ಮತ್ತೆ ಆಯೋಜಿಸುವ ವಾತಾವರಣ ನಿರ್ಮಿಸುವುದು ಸುಲಭವಿರಲಿಲ್ಲ. ರಾಜ್ಯ ಸರ್ಕಾರದ ಬೆಂಬಲ ಅಗತ್ಯವಿತ್ತು. ಈ ಬಗ್ಗೆ ಬಿಸಿಸಿಐ ಜೊತೆಯೂ ಮಾತನಾಡಲಾಗಿದೆ’ ಎಂದು ಹೇಳಿದರು.
ಕಳೆದ IPL ಟ್ರೋಫಿ ಗೆದ್ದ ಆರ್‌ಸಿಬಿ (RCB) ತಂಡ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ವಿಜಯೋತ್ಸವ ಆಚರಿಸುವ ವೇಳೆ ಕಾಲ್ತುಳಿತವಾಗಿ 11 RCB ಅಭಿಮಾನಿಗಳು ಮೃತಪಟ್ಟಿದ್ದರು. ಇದರಿಂದ ಈ ಬಾರಿಯ ಐಪಿಎಲ್ (IPL) ಪಂದ್ಯಾವಳಿಯ ಪಂದ್ಯಗಳು ಬೆಂಗಳೂರಿನಲ್ಲಿ ನಡೆಯುವ ಬಗ್ಗೆಯೇ ಅನುಮಾನ ಇತ್ತು. ಪಂದ್ಯ ನಡೆದರೂ ಕಳೆದ ಬಾರಿ ವಿರಾಟ್ ಕೊಹ್ಲಿ ನೋಡಲೆಂದೇ ಅಷ್ಟು ಜನ ಬಂದಿದ್ದರಿಂದ ಈ ಬಾರಿ ಕೊಹ್ಲಿ ಬರುವರೋ ಇಲ್ಲವೋ ಎನ್ನುವ ಅನುಮಾನ ಇತ್ತು. ಈಗ ಅನುಮಾನಗಳಿಗೆ ತೆರೆಬಿದ್ದಿದೆ. ಎಎಸ್ಇಎ ಅಧ್ಯಕ್ಷ ವೆಂಕಟೇಶ ಪ್ರಸಾದ್ ಈ ಕುರಿತು ಗುಡ್ ನ್ಯೂಸ್ ನೀಡಿದ್ದಾರೆ.
Comments are closed.