BBK-12 : ಬಿಗ್ ಬಾಸ್ ಗೆಲ್ಲೋದು ಗಿಲ್ಲಿ ಅಲ್ಲ, ಇವರೇ ಈ ಸಲದ ವಿನ್ನರ್ – ಖ್ಯಾತ ಜ್ಯೋತಿಷ್ಯಿಯಿಂದ ಅಚ್ಚರಿ ಭವಿಷ್ಯ


BBK-12 : ಬಿಗ್ ಬಾಸ್ ಕನ್ನಡ ಸೀಸನ್ 12 70 ದಿನಗಳನ್ನು ಪೂರೈಸಿ ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದೆ. ಮನೆಯೊಳಗಿರುವ ಕೆಲವು ಸ್ಪರ್ಧಿಗಳು ಅನೇಕರ ನೆಚ್ಚಿನ ಕಂಟೆಸ್ಟೆಂಟ್ಗಳಾಗಿದ್ದಾರೆ. ಅದರಲ್ಲೂ ಗಿಲ್ಲಿ ನಟ ಎಂದರೆ ನಾಡಿನ ಜನತೆಗೆ ಅಚ್ಚುಮೆಚ್ಚು. ಅವರ ಕಾಮಿಡಿ ಮಾತುಗಳಿಗಾಗಿ ಜನರು ಕಾದು ಕೂತಿರುತ್ತಾರೆ. ಅಷ್ಟೇ ಅಲ್ಲದೆ ಗಿಲ್ಲಿ ನಟನೆ ಬಿಗ್ ಬಾಸ್ ವಿನ್ನರ್ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ ಇದೀಗ ಖ್ಯಾತ ಜ್ಯೋತಿಷ್ಯ ಒಬ್ಬರು ಭವಿಷ್ಯ ನುಡಿದಿದ್ದು, ಬಿಗ್ ಬಾಸ್ ಗೆಲ್ಲುವುದು ಗಿಲ್ಲಿ ಅಲ್ಲ, ಈ ವ್ಯಕ್ತಿಯೇ ಈ ಸಲದ ವಿನ್ನರ್ ಆಗುತ್ತಾರೆ ಎಂದು ಹೇಳಿಕೆ.

ಹೌದು, ಪ್ರಶಾಂತ್ ಕಿಣಿ ಅವರು ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ‘ಗಿಲ್ಲಿ ಫಿನಾಲೆ ತಲುಪುತ್ತಾರೆ’ ಎಂದು ಅವರು ಅಕ್ಟೋಬರ್ನಲ್ಲಿ ಭವಿಷ್ಯ ನುಡಿದಿದ್ದರು. ಈಗ ಅದೇ ಟ್ವೀಟ್ನ ರೀ ಟ್ವೀಟ್ ಮಾಡಿಕೊಂಡು, ‘ಗಿಲ್ಲಿ ಅವರು ಬಿಗ್ ಬಾಸ್ ವಿನ್ ಆಗಲ್ಲ’. ‘ಈ ಬಾರಿಯ ಬಿಗ್ ಬಾಸ್ ಗೆಲ್ಲೋದು ಮಹಿಳಾ ಸ್ಪರ್ಧಿ’ ಎಂದಿದ್ದಾರೆ.
ಸಧ್ಯ ಪ್ರಶಾಂತ್ ಕಿಣಿ ಅವರ ಭವಿಷ್ಯ ಗಿಲ್ಲಿ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಸದ್ಯ ಗಿಲ್ಲಿ ಅಭಿಮಾನಿಗಳು ‘ನಿಮ್ಮ ಭವಿಷ್ಯವನ್ನು ಸುಳ್ಳು ಮಾಡಿ ತೋರಿಸುತ್ತೇವೆ’ ಎಂದು ಹೇಳಿದ್ದಾರೆ. ಹೀಗೆ ಪ್ರಶಾಂತ್ ಕಿಣಿ ಟ್ವೀಟ್ಗೆ ಫ್ಯಾನ್ಸ್ ನಾನಾ ರೀತಿಯ ಕಮೆಂಟ್ ಮಾಡಿದ್ದಾರೆ

Comments are closed.