Home News UP: ನಿದ್ದೆಯಲ್ಲಿ ಮಗ್ಗಲು ಬದಲಾಯಿಸಿದ ತಂದೆ – ಅಪ್ಪ, ಅಮ್ಮನ ನಡುವೆ ಸಿಕ್ಕಿ 26 ದಿನದ...

UP: ನಿದ್ದೆಯಲ್ಲಿ ಮಗ್ಗಲು ಬದಲಾಯಿಸಿದ ತಂದೆ – ಅಪ್ಪ, ಅಮ್ಮನ ನಡುವೆ ಸಿಕ್ಕಿ 26 ದಿನದ ಮಗು ಸಾವು

Hindu neighbor gifts plot of land

Hindu neighbour gifts land to Muslim journalist

UP: ರಾತ್ರಿ ಮಲಗಿದ ಸಂದರ್ಭದಲ್ಲಿ ತಂದೆ ಮಗ್ಗಲು ಬದಲಾಯಿಸಿ ಮಲಗಿದ ಕಾರಣ ಅಪ್ಪ, ಅಮ್ಮನ ನಡುವೆ ಸಿಕ್ಕಿದ 26 ದಿನದ ಹಸು ಗೋಸು, ಮೃತಪಟ್ಟಿರುವಂತಹ ಅಘಾತಕಾರಿ ಘಟನೆ ಎಂದು ಬೆಳಕಿಗೆ ಬಂದಿದೆ.

ಹೌದು, ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯ ಸಿಹಾಲಿ ಜಾಗೀರ್ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ನಿದ್ದೆಯ ಅಮರಿನಲ್ಲಿದ್ದ ತಂದೆ ಮಗ್ಗಲು ಬದಲಿಸಿ ಮಗುವಿನ ಮೇಲೆ ಹೊರಳಿದ್ದಾನೆ. ಇದರ ಪರಿಣಾಮ ಒಂದು ತಿಂಗಳು ಕೂಡ ತುಂಬದ ಮಗು ಮಲಗಿದ್ದ ತಂದೆ-ತಾಯಿ ನಡುವೆ ಸಿಲುಕಿ ಸಾವನ್ನಪ್ಪಿದೆ.

ಸದ್ದಾಂ ಅಬ್ಬಾಸಿ (25) ಮತ್ತು ಅವರ ಪತ್ನಿ ಅಸ್ಮಾ ಮೊದಲ ಮಗು ಅದಾಗಿತ್ತು. ಸೂಫಿಯಾನ್ ಎಂದು ಅದಕ್ಕೆ ನಾಮಕರಣವನ್ನು ಮಾಡಲಾಗಿತ್ತು. ಶನಿವಾರ ರಾತ್ರಿ ದಂಪತಿ ಮಲಗುವ ಮುನ್ನ ಮಗುವನ್ನು ಹಾಸಿಗೆಯ ಮೇಲೆ ತಮ್ಮ ಮಧ್ಯೆ ಮಲಗಿಸಿಕೊಂಡಿದ್ದರು. ರಾತ್ರಿ ಹಾಲು ಕುಡಿಸಲು ತೊಟ್ಟಿಲಿನ ಬಳಿ ಹೋಗಬೇಕಾಗುತ್ತದೆ ಎಂದು ಆ ಮಹಿಳೆ ಮಗುವನ್ನು ಪಕ್ಕದಲ್ಲೇ ಮಲಗಿಸಿಕೊಂಡಿದ್ದರು. ಆ ಮಗುವಿನ ತಂದೆ ರಾತ್ರಿ ತಿಳಿಯದೆ ಮಗ್ಗುಲು ಬದಲಾಯಿಸಿದ್ದರಿಂದ 26 ದಿನಗಳ ಮಗು ಅವರ ದೇಹದ ಕೆಳಗೆ ಸಿಕ್ಕಿಹಾಕಿಕೊಂಡಿತು.

ಬಳಿಕ ಭಾನುವಾರ ಬೆಳಿಗ್ಗೆ ಅಸ್ಮಾ ಮಗುವಿಗೆ ಹಾಲುಣಿಸಲು ಎಚ್ಚರವಾದಾಗ ಮಗು ಪ್ರತಿಕ್ರಿಯಿಸದಿರುವುದನ್ನು ಕಂಡರು. ತಕ್ಷಣ ಮಗುವಿನ ತಂದೆ ಸದ್ದಾಂ ಆ ಮಗುವನ್ನು ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ವೈದ್ಯರು ಮಗು ಮೃತಪಟ್ಟಿದೆ ಎಂದು ಘೋಷಿಸಿದ್ದಾರೆ. ಇನ್ನು ಮಗು ಹುಟ್ಟಿದಾಗಿನಿಂದ ಬಹಳ ದುರ್ಬಲವಾಗಿತ್ತು. ಆ ಮಗುವಿಗೆ ಉಸಿರಾಟದ ತೊಂದರೆಯಿತ್ತು. ನಂತರ ಕಾಮಾಲೆಯಿಂದ ಬಳಲುತ್ತಿತ್ತು ಎಂದು ಸಂಬಂಧಿಕರು ತಿಳಿಸಿದ್ದಾರೆ.