ಕೆರೆಗೆ ಬಿದ್ದ ಕಾರು; ಮಸೀದಿಯ ಮೈಕ್ನಲ್ಲಿ ಕೂಗಿ 7 ಜನರ ಜೀವ ಉಳಿಸಿದ ಇಮಾಮ್, ವೀಡಿಯೋ ವೈರಲ್

ಕೆರೆಗೆ ವಾಹನವೊಂದು ಬಿದ್ದಿದ್ದು, ವಾಹನದಲ್ಲಿದ್ದ ಏಳು ಜನರು ಮುಳುಗುತ್ತಿದ್ದು, ಇವರನ್ನು ರಕ್ಷಿಸಲು ಮುಂಜಾನೆ ಮಸೀದಿಯ ಬೈಕ್ ಬಳಸಿ ಇಡೀ ಗ್ರಾಮಕ್ಕೆ ಎಚ್ಚರಿಕೆ ನೀಡಿದ ಅಸ್ಸಾಂನ ಮುಸ್ಲಿಂ ಧರ್ಮಗುರುವನ್ನು ಇದೀಗ ಹೀರೋ ಎಂದು ಹೊಗಳಲಾಗುತ್ತಿದೆ.

ತಡರಾತ್ರಿ ರಸ್ತೆಯಲ್ಲಿ ತೆರಳುತ್ತಿದ್ದ ಕಾರು ಹೊಂಡಕ್ಕೆ ಬಿದ್ದಿದೆ. ಇದನ್ನು ಗಮನಿಸಿದ ಮಸೀದಿಯ ಇಮಾಮ್ ಮೈಕ್ನಲ್ಲಿ ಕೂಗಿ ಗ್ರಾಂದ ಜನರನ್ನು ಎಚ್ಚರಿಸಿದ್ದಾರೆ. ಕೂಡಲೇ ಜನರು ಸ್ಥಳಕ್ಕೆ ಬಂದಿದ್ದರು ಕಾರಿನಲ್ಲಿದ್ದ ಏಳು ಮಂದಿಯನ್ನು ರಕ್ಷಣೆ ಮಾಡಿದ್ದಾರೆ.
ಈ ಘಟನೆ ಮಂಗಳವಾರ ನಡೆದಿದ್ದು, ಅಸ್ಸಾಂನ ಶ್ರೀಭೂಮಿ ಜಿಲ್ಲೆಯಲ್ಲಿ ಘಟಿಸಿದೆ. ಮುಂಜಾನೆ ನಿಶ್ಯಬ್ದದದಲ್ಲಿ ದೊಡ್ಡ ಅಪಘಾತದ ಶಬ್ದ ಕೇಳಿ ಇಮಾಮ್ ಅಬ್ದುಲ್ ಬಾಸಿತ್ ಹೊರಗೆ ಬಂದು ನೋಡಿದಾಗ ನೀರಿನಲ್ಲಿ ಹೆಡ್ಲೈಟ್ ಹೊಳೆಯುವುದು ಕಂಡಿದೆ. ಕೂಡಲೇ ಅಪಾಯದ ಅರಿವನ್ನು ಅರಿತು ಮಸೀದಿಯ ಧ್ವನಿವರ್ಧಕವನ್ನು ಬಳಸಿ ಗ್ರಾಮಸ್ಥರಲ್ಲಿ ತುರ್ತು ಸಹಾಯಕ್ಕೆ ಮನವಿ ಮಾಡಿದರು.
ನೆರೆಹೊರೆಯ ನಿವಾಸಿಗಳು ನಿಮಿಷಗಳಲ್ಲಿ ಓಡಿ ಬಂದು ಕೆರೆಗೆ ಹಾರಿ ಕಾರಿನ ಕಿಟಕಿಗಳನ್ನು ಒಡೆದು, ವಾಹನವು ಸಂಪೂರ್ಣ ನೀರಿನಲ್ಲಿ ಮುಳುಗುವ ಮೊದಲು ಏಳು ಪ್ರಯಾಣಿಕರನ್ನು ಹೊರಗೆಳೆದಿದ್ದಾರೆ.
ರಕ್ಷಿಸಲ್ಪಟ್ಟವರೆಲ್ಲರೂ ಹಿಂದೂ ಸಮುದಾಯದವರಾಗಿದ್ದು, ಸಿಲ್ಚಾರ್ನಿಂದ ತ್ರಿಪುರಕ್ಕೆ ಪ್ರಯಾಣ ಮಾಡುತ್ತಿದ್ದರು ಎನ್ನಲಾಗಿದೆ.
Comments are closed.