Crime: ಕುಖ್ಯಾತ ಮನೆಗಳ್ಳನ ಬಂಧನ: 65.79 ಲ.ರೂ. ಮೌಲ್ಯದ ಚಿನ್ನಾಭರಣ ವಶ

Share the Article

Crime: ಕುಖ್ಯಾತ ಮನೆಕಳ್ಳನೊಬ್ಬನನ್ನು ಬಂಧಿಸಿ, 65,79,720 ಮೌಲ್ಯ ಚಿನ್ನಾಭರಣಗಳನ್ನು ಉಡುಪಿ ನಗರ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಉಡುಪಿ ಸಮೀಪದ ಕುಕ್ಕೆಹಳ್ಳಿ ಗ್ರಾಮದ ಕುಕ್ಕಿಕಟ್ಟೆ ನಿವಾಸಿ ಸುಕೇಶ ನಾಯ್ಕ(37) ಬಂಧಿತ ಆರೋಪಿ.

ಉಡುಪಿಯ 76 ಬಡಗುಬೆಟ್ಟು ಗ್ರಾಮದ ಒಳಕಾಡು ಶಾರದಾಂಬಾ ದೇವಸ್ಥಾನದ ಗೋಪುರದ ರೋಸ್ ವಿಲ್ಲಾದ ಶೈಲಾ ವಿಲ್ಲೆ ಮೀನಾ (53) ಅವರು ನವೆಂಬರ್ 30ರಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿತ್ತು. ಅವರು ಬೆಳಗ್ಗೆ ಚರ್ಚ್‌ಗೆ ಹೋಗುವ ಸಲುವಾಗಿ ಆಭರಣಗಳನ್ನು ಧರಿಸಲು ಮಲಗುವ ಕೋಣೆಯ ಕಪಾಟನ್ನು ತೆರೆದಾಗ ಸುಮಾರು 548.31 ಗ್ರಾಂ ಚಿನ್ನಾಭರಣಗಳು ಮತ್ತು ಮೊಬೈಲ್ ಫೋನ್ ಕಳುವಾಗಿರುವುದು ಪತ್ತೆಯಾಗಿದೆ. ಅವರ ದೂರಿನ ಆಧಾರದ ಮೇಲೆ, ಉಡುಪಿ ಪಟ್ಟಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿತ್ತು. ಸೋಮವಾರ ವಿಶೇಷ ತನಿಖಾ ತಂಡ ಸುಕೇಶ್ ನಾಯ್ಕನನ್ನು ಕಿನ್ನಿಮುಲ್ಕಿಯ ಹಿರೇನ್ ಬಾರ್ ಬಳಿ ಬಂಧಿಸಿ ವಿಚಾರಣೆ ನಡೆಸಿದ್ದು, ಆತ ನೀಡಿದ ಮಾಹಿತಿಯಂತೆ ಅಜ್ಜರಕಾಡಿನ ಮನೆಯಿಂದ ಕದ್ದ ಆಭರಣಗಳನ್ನು ಪೊಲೀಸರು ವಶಪಡಿಸಿಕೊಂಡರು.

Comments are closed.