Tirupathi : ತಿರುಪತಿಯಲ್ಲಿ ಇನ್ಮುಂದೆ ಕರ್ನಾಟಕದವರಿಗೆ ವಿಶೇಷ ದರ್ಶನ ವ್ಯವಸ್ಥೆ!!

Share the Article

Tirupathi : ದೇಶದ ಅತ್ಯಂತ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿರುವ ತಿರುಪತಿಯ ತಿರುಮಲದಲ್ಲಿ ಇನ್ನು ಮುಂದೆ ಕರ್ನಾಟಕದ ಭಕ್ತರಿಗೆ ವಿಶೇಷ ದರ್ಶನ ವ್ಯವಸ್ಥೆ ಜಾರಿ ಮಾಡುವ ಕುರಿತು ಮಾತುಕತೆ ನಡೆದಿದೆ.

ಹೌದು, ಶ್ರೀಶೈಲಂನಲ್ಲಿ 5 ಎಕರೆ ನೀಡಲು ನಿರ್ಧಾರ

ವಿಜಯವಾಡದ ರಾಜ್ಯಪಾಲರ ಕಚೇರಿಯಲ್ಲಿ ಶನಿವಾರ ಕರ್ನಾಟಕ ಮತ್ತು ಆಂಧ್ರಪ್ರದೇಶದ ಮುಜರಾಯಿ ಇಲಾಖೆ ಸಚಿವರು ಹಾಗೂ ಅಧಿಕಾರಿಗಳು ಸಭೆಯನ್ನ ಮಾಡಿದ್ದು ತಿರುಮಲದಲ್ಲಿ ರಾಜ್ಯ ಮುಜರಾಯಿ ಇಲಾಖೆಯ ಮನವಿ ಆಧಾರದ ಮೇಲೆ ಜನರಿಗೆ ವಿಶೇಷ ದರ್ಶನಕ್ಕೆ ಅವಕಾಶ ಕೊಡುವ ವಿಚಾರವಾಗಿ ಸಹ ಚರ್ಚೆ ಮಾಡಲಾಗಿದೆ.

ಇನ್ನೂ ಸಭೆಯಲ್ಲಿ ಈಗಾಗಲೇ ಶ್ರೀಶೈಲ ದೇವಸ್ಥಾನದ ಬಳಿ ಕರ್ನಾಟಕಕ್ಕೆ 2 ಎಕರೆ ಕೊಡಲಾಗಿದೆ. ಇದರ ಜೊತೆಗೆ ಇನ್ನೂ ಮೂರು ಎಕರೆ ಕೊಡುವುದಾಗಿ ಭರವಸೆ ಕೊಟ್ಟಿದೆ. ಹಾಗೆಯೇ, ಈ ಹಿಂದೆ ತಿರುಮಲದಲ್ಲಿ ರಾಜ್ಯಕ್ಕೆ ಸುಮಾರು 7 ಎಕರೆ ಜಾಗವನ್ನು 30 ವರ್ಷಕ್ಕೆ ಗುತ್ತಿಗೆ ಕೊಡಲಾಗಿತ್ತು. ಆ ಗುತ್ತಿಗೆ ಅವಧಿಯನ್ನ 99 ವರ್ಷಕ್ಕೆ ವಿಸ್ತರಿಸಲು ನಿರ್ಧಾರ ಮಾಡಲಾಗಿದೆ

Comments are closed.