NHRC: ರಾಜ್ಯದಲ್ಲಿ ‘ಸ್ಲೀಪರ್ ಬಸ್’ ಸೇವೆ ಸ್ಥಗಿತ?

Share the Article

NHRC: ಸ್ಲೀಪರ್ ಬಸ್ಗಳಲ್ಲಿ ದಿನದಿಂದ ದಿನಕ್ಕೆ ಆಗುತ್ತಿರುವ ಅಪಘಾತಗಳನ್ನು, ಅಗ್ನಿ ಅವಘಡಗಳನ್ನು ಗಮನಿಸಿರುವ ಸರ್ಕಾರ ದೇಶಾದ್ಯಂತ ಸ್ಲೀಪರ್ ಬಸ್ ಗಳನ್ನು ಬ್ಯಾನ್ ಮಾಡಬೇಕೆಂದು ಚಿಂತನೆ ನಡೆಸಿದೆ ಎಂದು ವರದಿಗಳಾಗಿತ್ತು. ಈ ಬೆನ್ನಲ್ಲೇ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC) ಸ್ಲೀಪರ್ ಬಸ್‌ ಗಳ ಕುರಿತು ನಿರ್ದೇಶನಗಳನ್ನು ನೀಡಿದ್ದು, ಈ ನಿಯಮಗಳನ್ನು ಪಾಲಿಸದಿದ್ದರೆ ಸ್ಲೀಪರ್ ಬಸ್ ಗಳನ್ನು ಸ್ಥಗಿತಗೊಳಿಸುವುದಾಗಿ ಎಚ್ಚರಿಕೆ ನೀಡಿದೆ.

ಹೌದು, ಸುರಕ್ಷತಾ ಮಾನದಂಡಗಳನ್ನು ಉಲ್ಲಂಘಿಸುವ ಎಲ್ಲಾ ಸ್ಲೀಪರ್ ಕೋಚ್ ಬಸ್‌ಗಳನ್ನು ರಸ್ತೆಗಳಿಂದ ತೆಗೆದುಹಾಕುವಂತೆ ಆಯೋಗದ ಅಧ್ಯಕ್ಷ ಪ್ರಿಯಾಂಕ್ ಕನೂಂಗೊ ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಿದ್ದಾರೆ. ಸ್ಲೀಪರ್ ಬಸ್ ಅಪಘಾತಗಳು ಮತ್ತು ಸಾವುಗಳ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಆಯೋಗದ ನಿರ್ಧಾರ ತೆಗೆದುಕೊಳ್ಳಲಾಗಿದೆ. 

ಸ್ಲೀಪರ್ ಬಸ್ ಅಪಘಾತಗಳು ಮತ್ತು ಉಲ್ಲಂಘನೆಗಳಲ್ಲಿ ತಕ್ಷಣ ಕ್ರಮ ತೆಗೆದುಕೊಳ್ಳುವ ಕಾರ್ಯವನ್ನು ರಾಜ್ಯ ಆಯೋಗಗಳಿಗೆ ವಹಿಸಲಾಗಿದೆ. 2025 ರಲ್ಲಿ ಸ್ಲೀಪರ್ ಬಸ್ ಅಪಘಾತಗಳಲ್ಲಿ 200 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಸುರಕ್ಷತಾ ಮಾನದಂಡಗಳ ಉಲ್ಲಂಘನೆಯೇ ಕಾರಣ ಎಂದು ಕಂಡುಬಂದಿದೆ. ಕೇಂದ್ರ ರಸ್ತೆ ಸಾರಿಗೆ ಸಚಿವಾಲಯವು 2024 ರಲ್ಲಿ AIS-118 ಮಾನದಂಡಗಳನ್ನು ಜಾರಿಗೆ ತಂದಿತು, ಆದರೆ ಇವುಗಳನ್ನು ಅನುಸರಿಸುತ್ತಿಲ್ಲ. ಹೀಗಾಗಿ ಈ ನಿಯಮಗಳನ್ನು ಪಾಲಿಸದಿದ್ದರೆ ಇನ್ನು ಮುಂದೆ ಸ್ಲೀಪರ್ ಬಸ್ಗಳನ್ನು ಬ್ಯಾನ್ ಮಾಡಲಾಗುವುದು ಎಂಬುದಾಗಿ ಆಯೋಗ ತಿಳಿಸಿದೆ.

ಭಾರತದಲ್ಲಿ ಸ್ಲೀಪರ್ ಬಸ್‌ಗಳನ್ನು ಹೆಚ್ಚಾಗಿ ದೂರದ ಪ್ರಯಾಣಕ್ಕಾಗಿ, ವಿಶೇಷವಾಗಿ ರಾತ್ರಿಯಲ್ಲಿ ಬುಕ್ ಮಾಡಲಾಗುತ್ತದೆ. ಆದಾಗ್ಯೂ, ಓವರ್‌ಲೋಡ್, ಕಳಪೆ ನಿರ್ವಹಣೆ, ವೇಗ ಮತ್ತು ಸುರಕ್ಷತಾ ಮಾನದಂಡಗಳ ನಿರ್ಲಕ್ಷ್ಯದಿಂದಾಗಿ, ಅವು ಹೆಚ್ಚಾಗಿ ಅಪಘಾತಗಳಿಗೆ ಬಲಿಯಾಗುತ್ತವೆ. ನಿರ್ಲಕ್ಷ್ಯ ಮತ್ತು ಅಜಾಗರೂಕತೆಯಿಂದ ಸ್ಲೀಪರ್ ಬಸ್ ಅಪಘಾತಗಳಲ್ಲಿ ಜನರ ಸಾವು ಭಾರತೀಯ ಸಂವಿಧಾನದ 21 ನೇ ವಿಧಿ (ಜೀವನದ ಹಕ್ಕು) ಅನ್ನು ಉಲ್ಲಂಘಿಸುತ್ತದೆ. ಈ ವರ್ಷ ಸಂಭವಿಸಿದ ಹಲವಾರು ಸ್ಲೀಪರ್ ಬಸ್ ಅಪಘಾತಗಳ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC) ಈ ನಿರ್ದೇಶನಗಳನ್ನು ನೀಡಿದೆ.

Comments are closed.