Doctors: 1 ಕಾಂಡೋಮ್‌ನಿಂದ ಹೊರಬಂತು 30 ವರ್ಷಗಳಿಂದ ಹೊಟ್ಟೆಯಲ್ಲಿದ್ದ ಲೈಟ‌ರ್

Share the Article

Doctors: ಕುಡಿದ ಮತ್ತಿನಲ್ಲಿ ಮಾಡಿದ ಎಡವಟ್ಟು ಮೂವತ್ತು ವರ್ಷದ ನಂತರ ಪರಿಣಾಮ ಕಾಣಿಸಿದೆ. ಹೌದು, 30 ವರ್ಷಗಳ ಹಿಂದೆ ನುಂಗಿದ್ದ ಸಿಗರೇಟ್ ಲೈಟಾರ್ (Cigarette lighter) ನ್ನು ಈಗ ವೈದ್ಯರು (Doctors) ಆತನ ಹೊಟ್ಟೆಯಿಂದ ಹೊರತೆಗೆದಿದ್ದಾರೆ.

ಆಶ್ಚರ್ಯ ಅಂದ್ರೆ ಕಾಂಡೋಮ್ ಬಳಸಿಕೊಂಡು ಹೀಗೆ ಲೈಟರ್ ಹೊರತೆಗೆದ ಸುದ್ದಿ ಸದ್ಯ ಇಂಟರ್ನೆಟ್ ನಲ್ಲಿ ವೈರಲ್ ಆಗಿದೆ. ಈ ರೀತಿಯ ಒಂದು ಪ್ರಯೋಗ ವೈದ್ಯಕೀಯ ಇತಿಹಾಸದಲ್ಲಿ ಮೊದಲು ಎಂದು ನಂಬಲಾಗಿದೆ. 30 ವರ್ಷದ ಹಿಂದೆ ಡೆಂಗ್ ಎಂಬ ವ್ಯಕ್ತಿ ಲೈಟರ್ ನುಂಗಿದ್ದು ಕಾಲಕ್ರಮೇಣ ಆತನಿಗೆ ಆಗ್ಗಾಗೆ ಸಣ್ಣದಾಗಿ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತಿತ್ತು. ಹೀಗಾಗಿ ವೈದ್ಯರ ಬಳಿ ಹೋಗಿದ್ದಾರೆ . ಗ್ಯಾಸ್ಟೋಸ್ಕೋಪಿ ಮಾಡಿದಾಗ ಹೊಟ್ಟೆಯಲ್ಲಿ ಕಪ್ಪು ವಸ್ತು ಪತ್ತೆಯಾಗಿದೆ.ಈ ವೇಳೆ ಫೋರ್ಸ್‌ಪ್ಸ್ ಬಳಸಿ ಲೈಟರ್ ಹೊರತೆಗೆಯಲು ಪ್ರಯತ್ನಿಸಿದ್ದಾರೆ. ಆದರೆ ಸಾಧ್ಯವಾಗಿಲ್ಲ. ಹೀಗಾಗಿ ಕಾಂಡೋಮ್ ಬಳಸಿ ಬಾಯಿ ಮೂಲಕ ನಿಧಾನವಾಗಿ ಲೈಟರ್‌ನ್ನು ಹೊರೆತೆಗೆದಿದ್ದಾರೆ.

Comments are closed.