Bengaluru: ಕಲಬೆರೆಕೆ ಔಷಧಿ ಮಾರಾಟ ಮಾಡಿದ್ರೆ ಜೀವಾವಧಿ ಶಿಕ್ಷೆ: ಸಚಿವ ಸಂಪುಟ ತೀರ್ಮಾನ

Bengaluru: ಕಲಬೆರಕೆಯ ಔಷಧ ಅಥವಾ ಸೌಂದರ್ಯವರ್ಧಕವನ್ನು (Drugs and cosmetics) ಮಾರಾಟ ಮಾಡುವವರಿಗೆ ಜೀವಾವಧಿ ಶಿಕ್ಷೆ(life imprisonment) ವಿಧಿಸಲು ಅವಕಾಶ ಕಲ್ಪಿಸುವ ‘ಔಷಧಗಳು ಮತ್ತು ಸೌಂದರ್ಯವರ್ಧಕಗಳು (ಕರ್ನಾಟಕ ತಿದ್ದುಪಡಿ) ಮಸೂದೆ-2025’ಗೆ (BENGALURU) ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ(state cabinet) ಅನುಮೋದನೆ ನೀಡಲಾಗಿದೆ.

ಬೆಳಗಾವಿ ಅಧಿವೇಶನದಲ್ಲಿ ಈ ಮಸೂದೆಯನ್ನು ಮಂಡಿಸಲಾಗುವುದು ಎಂದು ಸಚಿವ ಹೆಚ್.ಕೆ ಪಾಟೀಲ್ಈ ವೇಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಸಚಿವ ಹೆಚ್.ಕೆಪಾಟೀಲ್ ಅವರು ಕೇಂದ್ರದ ಔಷಧ ಪ್ರಯೋಗಾಲಯಗಳ ಮತ್ತು ಔಷಧ ಮತ್ತು ಸೌಂದರ್ಯವರ್ಧಕಗಳ ಇಲಾಖೆಯ ನಿರ್ದೇಶಕರ ಕೆಲಸ ಕಾರ್ಯಗಳನ್ನು ರಾಜ್ಯ ಸರ್ಕಾರ ನಿಗದಿಪಡಿಸಿದ ಪ್ರಾಧಿಕಾರ ನಿರ್ವಹಿಸಲು ಕೂಡಾ ಮಸೂದೆ ಅವಕಾಶ ಮಾಡಿಕೊಡಲಿದೆ. ಕಲಬೆರಕೆಯ ಔಷಧ ಮತ್ತು ಸೌಂದರ್ಯವರ್ಧಕ ಹೊಂದಿರುವ ಅಪರಾಧಗಳನ್ನು ಜಾಮೀನುರಹಿತ ಅಪರಾಧವೆಂದು ಪರಿಗಣಿಸುವ ಪ್ರಸ್ತಾವವೂ ಮಸೂದೆಯಲ್ಲಿದೆ’ಯಾವ ವ್ಯಕ್ತಿಯಿಂದ ಔಷಧ ಮತ್ತು ಸೌಂದರ್ಯ ವರ್ದಕಗಳನ್ನು ವಶಪಡಿಸಿಕೊಳ್ಳಲಾಗುವುದೊ ಆ ವ್ಯಕ್ತಿಯು ತಾನು ತಪ್ಪು ವ್ಯಾಪಾರದ ಮುದ್ರೆಯುಳ್ಳ ಅಥವಾ ಕಲಬೆರಕೆಯ ಔಷಧ ಅಥವಾ ಸೌಂದರ್ಯ ವರ್ದಕ ಹೊಂದಿಲ್ಲವೆಂದು ಸಾಬೀತುಪಡಿಸುವ ಜವಾಬ್ದಾರಿ ಅವನ ಮೇಲೆಯೇ ಹೊರಿಸುವುದು. ಪ್ರಕರಣ 30ರಡಿಯಲ್ಲಿ ಕೆಲವು ದಂಡಗಳನ್ನು ಜೀವಾವಧಿ ಶಿಕ್ಷೆಗೆ ವಿಸ್ತರಿಸುವುದು ಮತ್ತು ಈ ಅಧಿನಿಯಮದ ಅಡಿಯಲ್ಲಿ ಎಲ್ಲಾ ಅಪರಾಧಗಳನ್ನು ಸನ್ನೆಯ ಅಪರಾಧವೆಂದು ಹಾಗೂ ಜಾಮೀನುರಹಿತ ಅಪರಾಧವೆಂದು ಮಾರ್ಪಾಡಿಸುವುದರ ಬಗ್ಗೆ ತಿಳಿಸಲಾಗಿದೆ.
Comments are closed.