Parappana agrahara: ಪರಪ್ಪನ ಅಗ್ರಹಾರದಲ್ಲಿ 15 ಮೊಬೈಲ್ ಪತ್ತೆ: ಇಬ್ಬರ ವಿರುದ್ಧ ದೂರು ದಾಖಲು!

Parappana agrahara: ಪರಪ್ಪನ ಅಗ್ರಹಾರ ಜೈಲಿನಲ್ಲಿ (Parappana Agrahara) ಫೋನ್ (Mobile Phone) ಪತ್ತೆಯಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರು ಖೈದಿಗಳ ವಿರುದ್ಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ (FIR) ದಾಖಲಾಗಿದೆ.

ಸಾಗರ್ ಅಲಿಯಾಸ್ ರಾಕೀಬುಲ್ ಇಸ್ಲಾಂ ಮತ್ತು ಮುನಿರಾಜ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ.
ಪರಪ್ಪನ ಅಗ್ರಹಾರದ ಬಿ ಬ್ಯಾರಕ್ ನ 5ನೇ ಕೊಠಡಿಯಲ್ಲಿ ಮೊಬೈಲ್ ಫೋನ್ ಗಳು ಪತ್ತೆಯಾಗಿತ್ತು.ಪರಪ್ಪನ ಅಗ್ರಹಾರದಲ್ಲಿ ಫೋನ್ ಬಳಕೆ, ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ಆರೋಪದ ಬೆನ್ನಲ್ಲೇ ಜೈಲು ಅಧಿಕಾರಿಗಳು ಬ್ಯಾರಕ್ ಗಳ ಮೇಲೆ ದಿಢೀರ್ ದಾಳಿ ನಡೆಸಿದ್ದು, ಈ ವೇಳೆ ಫೋನ್ ಗಳು ಪತ್ತೆಯಾಗಿದೆ. ದಾಳಿಯ ವೇಳೆ 15 ಮೊಬೈಲ್ ಫೋನ್, 11 ಸಿಮ್ ಕಾರ್ಡ್, 3 ಚಾರ್ಜರ್ ಗಳು, 3 ಇಯರ್ ಬಡ್ಸ್ ಪತ್ತೆಯಾಗಿದ್ದು, ಖೈದಿಗಳು ಹಾಸಿಗೆ, ದಿಂಬು, ಕಿಟಕಿ ಗೋಡೆ ಒಳಭಾಗದಲ್ಲಿ ಹಾಗೂ ಬಟ್ಟೆಗಳು ಇಡುವ ಕಮಾನುಗಳ ಅಡಿಯಲ್ಲಿ ಮೊಬೈಲ್ ಇಟ್ಟುಕೊಂಡಿದ್ದರು.ಪತ್ತೆಯಾದ ಎಲ್ಲ ಮೊಬೈಲ್ ಫೋನ್ ಗಳು ಆಂಡ್ಯಾಯ್ಡ್ ಪೋನ್ ಗಳು ಎಂದು ತಿಳಿಸಲಾಗಿದ್ದು, ಪತ್ತೆಯಾದ ಎಲ್ಲಾ ವಸ್ತುಗಳನ್ನು ಜೈಲರ್ ಪರಮೇಶ್ವರ್ ಪೊಲೀಸರಿಗೆ ನೀಡಿ ದೂರು ದಾಖಲಿಸಿದ್ದಾರೆ.
Comments are closed.