ಅವಳಿ ಮಕ್ಕಳಿಗೆ ಜನ್ಮ ನೀಡಿದ ಯುವತಿ, ಆಶ್ಚರ್ಯ ಅಂದ್ರೆ ಇಬ್ಬರು ಮಕ್ಕಳ ಅಪ್ಪ ಕೂಡಾ ಬೇರೆ ಬೇರೆ!!

Share the Article

ಬ್ರೆಜಿಲ್: 19 ವರ್ಷದ ಯುವತಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಆದರೆ ಈ ಅವಳಿ ಮಕ್ಕಳಿಗೆ ತಂದೆ ಕೂಡಾ ಅವಳಿ ಅಂದ್ರೆ ನಂಬುತ್ತೀರಾ? ಈ ಇಬ್ಬರು ಮಕ್ಕಳಿಗೆ ಒಂದೇ ತಾಯಿ ಇದ್ದರೂ, ಅವರಿಗೆ ಬೇರೆ ಬೇರೆ ತಂದೆ ಇರುವುದು ಕಂಡುಬಂದಿದೆ. ಡಿಎನ್‌ಎ ಪರೀಕ್ಷೆಯಲ್ಲಿ ಅಪರೂಪದ ವಿಷಯ ಬಹಿರಂಗವಾಗಿದೆ. ಕಿಲಾಡಿ ಲೇಡಿಯ ಕೃತ್ಯ ಜಗಜ್ಜಾಹೀರಾಗಿದೆ.

ಒಂದೇ ದಿನದಲ್ಲಿ ಕೆಲವು ಗಂಟೆಗಳ ಅಂತರದಲ್ಲಿ ಇಬ್ಬರು ಜನರೊಂದಿಗೆ ಆಕೆ ದೈಹಿಕ ಸಂಭೋಗ ನಡೆಸಿದ್ದರಿಂದ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗುತ್ತದೆ. ಮಹಿಳೆಯ ದೇಹವು ಒಂದೇ ಸಮಯದಲ್ಲಿ ಎರಡು ಮೊಟ್ಟೆಗಳನ್ನು ಬಿಡುಗಡೆ ಮಾಡಿದ್ದು , ಒಬ್ಬರ ನಂತರ ಒಬ್ಬರು ಗಂಡುಗಳ ವೀರ್ಯವು ಆಕೆಯ ಎರಡು ಮೊಟ್ಟೆಗಳನ್ನು ವೀರ್ಯದಿಂದ ಫಲವತ್ತಾಗಿಸಿದಾಗ ಈ ತೀರಾ ಅಪರೂಪದ ವೈದ್ಯಕೀಯ ವಿಸ್ಮಯ ನಡೆಯುತ್ತದೆ. ಹೀಗಾಗಿ, ಅವಳಿ ಮಕ್ಕಳಿಗೆ ತಂದೆಗಳು ವಿಭಿನ್ನ ತಂದೆಯರು ಪಿತರಾಗಿದ್ದಾರೆ.

ಇದು ವೈದ್ಯಕೀಯ ಇತಿಹಾಸದಲ್ಲಿ ಅಪರೂಪದ ಸ್ಥಿತಿಯಾಗಿದ್ದು, ಇದನ್ನು ಹೆಟೆರೊಪಿಟರ್ನಲ್ ಸೂಪರ್ಫೆಕಂಡೇಶನ್ ಎಂದು ಕರೆಯಲಾಗುತ್ತದೆ. ಅಂದಹಾಗೆ ಈಘಟನೆ 2022ರಲ್ಲಿ ಬ್ರೆಜಿಲ್ ನ ಗೋಯಾಸ್ ರಾಜ್ಯದ ಮಿನೈರೋಸ್ ನಗರದಲ್ಲಿ ನಡೆದಿತ್ತು. ಇಂಥಹಾ ಅಪರೂಪದ ವೈದ್ಯಕೀಯ ವಿದ್ಯಮಾನ ಈತನಕ ಕೇವಲ 20 ಮಾತ್ರ ನಡೆದಿದ್ದಾಗಿ ವರದಿಯಾಗಿದೆ.

Comments are closed.