Home News Adhar Card: ಆಧಾರ್ ಕುರಿತು 3 ಹೊಸ ನಿಯಮ ಜಾರಿ- ಈಗಲೇ ಎಚ್ಚೆತ್ತು ಗಮನಿಸಿ !!

Adhar Card: ಆಧಾರ್ ಕುರಿತು 3 ಹೊಸ ನಿಯಮ ಜಾರಿ- ಈಗಲೇ ಎಚ್ಚೆತ್ತು ಗಮನಿಸಿ !!

Hindu neighbor gifts plot of land

Hindu neighbour gifts land to Muslim journalist

Adhar Card: ಆಧಾರ್ ಕಾರ್ಡ್ ಎಂಬುದು ಪ್ರತಿಯೊಬ್ಬ ಭಾರತೀಯನ ಗುರುತಿನ ಚೀಟಿ ಇದ್ದಂತೆ. ಸರ್ಕಾರದ ಯಾವುದೇ ಪ್ರಯೋಜನವನ್ನು ಪಡೆಯಲು ಈ ಆಧಾರ್ ಕಾರ್ಡ್(Adhar card) ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಇದೀಗ ಈ ಆಧಾರ್ ಕಾರ್ಡ್ ವಿಚಾರವಾಗಿ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರವು ಮೂರು ನಿಯಮಗಳನ್ನು ಜಾರಿಗೊಳಿಸಿದೆ.

ಆಧಾರ್ ಅಪ್ಡೇಟ್ಸ್ ಸರಳೀಕರಣ
ಆಧಾರ್ ಹೊಂದಿರುವವರು ಹೆಸರು, ವಿಳಾಸ, ಜನ್ಮ ದಿನಾಂಕ ಮತ್ತು ಮೊಬೈಲ್ ಸಂಖ್ಯೆ ಇನ್ನಿತರ ವೈಯಕ್ತಿಕ ವಿವರಗಳನ್ನು ಸಂಪೂರ್ಣವಾಗಿ ಆನ್‌ಲೈನ್‌ನಲ್ಲಿಯೇ ಕೂತಲ್ಲೆ ಬದಲಾಯಿಸಬಹುದು, ಅಪ್ಡೇಟ್ ಮಾಡಬಹುದು. ಇದು ಕಚೇರಿಗೆ ಅಲೆಯುವುದನ್ನು ತಪ್ಪಿಸುತ್ತದೆ. ನೀವೇನಾದರು ಬೆರಳ ಗುರುತು (ಫಿಂಗರ್‌ಪ್ರಿಂಟ್‌), ಐರಿಸ್ ಸ್ಕ್ಯಾನ್‌ಗಳು, ಫೋಟೋ ಬದಲಾಯಿಸಬೇಕಾದರೆ ಮಾತ್ರವೇ ಅಧಿಕೃತ ಆಧಾರ್ ಸೇವಾ ಕೇಂದ್ರಕ್ಕೆ ಭೇಟಿ ನೀಡಬೇಕು.

ಆಧಾರ್ ಬದಲಾವಣೆಗಳಿಗೆ ಹೊಸ ಶುಲ್ಕ
ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ ಸಂಸ್ಥೆಯು ಆಧಾರ್ ಅಪ್ಡೇಟ್ ಮಾಡಲು ಇದುವರೆಗೂ ಉಚಿತ ಅವಕಾಶವನ್ನು ಕಲ್ಪಿಸಿ. ಆದರೆ ಇನ್ನೂ ವಿಳಾಸ ಬದಲಾವಣೆಗೆ ರೂ. 75 ವೆಚ್ಚ, ಆದರೆ ಬಯೋಮೆಟ್ರಿಕ್ ಅಪ್ಡೇಟ್‌ಗೆ 125 ರೂಪಾಯಿ ಶುಲ್ಕ, ಆನ್‌ಲೈನ್ ದಾಖಲೆ ನವೀಕರಣಕ್ಕೆ 2026 ರ ಜೂನ್ 14ವರೆಗೆ ಉಚಿತವಾಗಿದೆ. ಬಳಿಕ ಶುಲ್ಕ ಅನ್ವಯವಾಗುತ್ತದೆ. 5-7 ರಿಂದ 15-17 ವರ್ಷ ವಯಸ್ಸಿನ ಮಕ್ಕಳು ಉಚಿತ ಬಯೋಮೆಟ್ರಿಕ್ ಅಪ್ಡೇಟ್‌ಗೆ ಅವಕಾಶ ಇದೆ.

ಆಧಾರ್‌ಗೆ ಪಾನ್ ಕಾರ್ಡ್ ಲಿಂಕ್ ಕಡ್ಡಾಯ
ನಿಮ್ಮ ಪಾನ್‌ ಕಾರ್ಡ್‌ ಅನ್ನು ಆಧಾರ್ ಕಾರ್ಡ್ ಜೊತೆಗೆ ಲಿಂಕ್ ಮಾಡುವುದು ಕಡ್ಡಾಯಗೊಳಿಸಲಾಗಿದೆ. ಇಲ್ಲವಾದರೆ 2026 ಜನವರಿಯಿಂದ ತಮ್ಮ ಪಾನ್ ಕಾರ್ಡ್ ನಿಷ್ಕ್ರಿಯವಾಗುವ ಸಾಧ್ಯತೆ ಇದೆ. 2025 ಡಿಸೆಂಬರ್ 31ರೊಳಗೆ ಎರಡೂ ಗುರುತಿನ ಚೀಟಿಗಳನ್ನು ಲಿಂಕ್ ಮಾಡಬೇಕು. ಬ್ಯಾಂಕ್, ಇತರ ಹಣಕಾಸು ಸಂಸ್ಥೆಗಳು OTP, ವೀಡಿಯೊ ಕರೆಗಳು ಹಾಗೂ ವೈಯಕ್ತಿಕ ಆಧಾರ್ ದೃಢೀಕರಣ ಮೂಲಕ ಸರಳವಾಗಿ ಇ-ಕೆವೈಸಿ ಆಯ್ಕೆ ಅನುಸರಿಸುವಂತೆ ತಿಳಿಸಲಾಗಿದೆ.