Davanagere: ಬೈಕ್ ಓಡಿಸುತ್ತಾ ಪ್ರೇಮಿಗಳ ಜಗಳ – ಲೈಟ್ ಕಂಬಕ್ಕೆ ಗುದ್ದಿ ಯುವತಿ ಸಾವು!!

Share the Article

Davangere : ದಾವಣಗೆರೆಯಲ್ಲಿ ಮನಕಲುಕುವ ಘಟನೆ ನಡೆದಿದ್ದು ಪ್ರೇಮಿಗಳಿಬ್ಬರು ಜಗಳವಾಡುತ್ತಾ ಬೈಕ್ ರೈಡ್ ಮಾಡಿದ್ದು, ಪರಿಣಾಮ ಬೈಕ್ ಲೈಟ್ ಕಂಬಕ್ಕೆ ಗುದ್ದಿ ಯುವತಿ ಸ್ಥಳದಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ದಾವಣಗೆರೆಯ ಹೊರ ವಲಯದ ಮಿಟ್ಲಕಟ್ಟೆ ಗ್ರಾಮದ ಬಳಿ ಘಟನೆ ನಡೆದಿದೆ. ಮೃತ ಯುವತಿಯನ್ನು ಪ್ರಿಯಾ (21) ಹಾಗೂ ಗಾಯಗೊಂಡ ಯುವಕನನ್ನು ಯೋಗೇಶ್ ಎಂದು ಗುರುತಿಸಲಾಗಿದೆ. ಕಾಲೇಜು ಮುಗಿದ ಬಳಿಕ ಇಬ್ಬರು ಡಾಬಾ ಕೆ ಹೋಗಿ ಊಟ ಮಾಡಿಕೊಂಡು ಮರಳಿ ಬರುವಾಗ ಈ ದುರ್ಘಟನೆ ಸಂಭವಿಸಿದೆ.

ಪ್ರಾಥಮಿಕ ತನಿಖೆಯಲ್ಲಿ ಬಯಲಾದ ಮಾಹಿತಿ ಪ್ರಕಾರ, ಸಾವಿಗೀಡಾಗಿರುವ ಪ್ರಿಯಾ ಹಾಗೂ ಗಾಯಗೊಂಡಿರುವ ಯೋಗೇಶ್ ನಡುವೆ ಡಾಬಾದಲ್ಲಿ ಜೋರಾಗಿ ಗಲಾಟೆ ಆಗಿತ್ತು. ಈ ಜಗಳ ಅಲ್ಲಿನ ಸಿಸಿ ಕ್ಯಾಮೆರಾದಲ್ಲಿ ಸಹ ಸೆರೆಯಾಗಿತ್ತು. ಈ ಜಗಳ ನಂತರ ಪ್ರಿಯಾ ಆಕೆಯ ಸ್ನೇಹಿತೆ ಜೊತೆ ಒಂದು ಬೈಕ್‌ನಲ್ಲಿ ಹೋಗುತ್ತಿದ್ದರು. ಈ ಸಮಯದಲ್ಲಿ ಬುಲೆಟ್ ಬೈಕ್‌ನಲ್ಲಿ ಯುವತಿಯರನ್ನು ಹಿಂಬಾಲಿಸಿಕೊಂಡ ಹೋದ ಯೋಗೇಶ್‌, ರಸ್ತೆಯ ಮಧ್ಯೆ ನಿಲ್ಲಿಸಿ ಪ್ರಿಯಾಳನ್ನು ತನ್ನ ಬೈಕ್‌ನಲ್ಲಿ ಕೂರಿಸಿಕೊಂಡು ಹೋಗಿದ್ದ. ಈ ಸಮಯದಲ್ಲಿ ಸಹ ಇಬ್ಬರ ನಡುವೆ ಜಗಳ ಆಗಿದೆ ಎನ್ನಲಾಗಿದೆ.

Comments are closed.