Bengaluru: ATM ವಾಹನದಿಂದ ಕೋಟಿ ಕೋಟಿ ದೋಚಿದ್ದ ಖದೀಮರು ಕೊನೆಗೂ ಲಾಕ್ – ಪಕ್ಕಾ ಪ್ಲಾನ್​ ಮಾಡಿದವರು ಮಾಡಿದ್ರು ಅದೊಂದು ತಪ್ಪು !

Share the Article

Bengaluru : ಬೆಂಗಳೂರಲ್ಲಿ ಮಟ ಮಟ ಮಧ್ಯಾಹ್ನಕೋಟಿ ಕೋಟಿ ಹಣ ತುಂಬಿಕೊಂಡು ಎಟಿಎಂಗೆ ಹಾಕಲು ಹೋಗುತ್ತಿದ್ದ ವಾಹನವನ್ನ ತಡೆದಿದ್ದ ಕದೀಮರು ಆರ್​​.ಬಿ.ಐ ಅಧಿಕಾರಿಗಳು ಅಂತ ಹೇಳಿಕೊಂಡು ಸಿಬ್ಬಂದಿಗಳನ್ನ ಯಾಮಾರಿಸಿ ಬರೋಬ್ಬರಿ 7 ಕೋಟಿಯನ್ನ ಕದ್ದು ಎಸ್ಕೇಪ್​ ಆಗಿದ್ರು. ಇದೀಗ ಈ ರಾಬರ್ಸ್ ಅನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಲೂಟಿ ಮಾಡಲು ಪಕ್ಕ ಪ್ಲಾನ್ ಮಾಡಿದ್ದ ಈ ಕಳ್ಳರು ಮಾಡಿದ್ದು ಅದೊಂದೇ ತಪ್ಪು!! ಹಾಗಿದ್ರೆ ಈ ದರೋಡೆಕೋರರು ತಗ್ಲಾಕಿಕೊಂಡಿದ್ದೇಗೆ..?

ಈ ಕಳ್ಳರು ಕಳ್ಳತನಕ್ಕೆ ಬಳಸಿದ್ದು ಮೂರು ಕಾರು.. ಒಂದು ಕಾರಿನಲ್ಲಿ ಡೈರಿ ಸರ್ಕಲ್​ನಲ್ಲಿ ಬಂದು ಹಣ ಕದ್ದರೆ.. ಎಸ್ಕೇಪ್​ ಆಗುವಾಗ ಮಾರ್ಗ ಮಧ್ಯೆ ಮತ್ತೊಂದು ಕಾರಿಗೆ ಹಣವನ್ನ ವರ್ಗಾವಣೆ ಮಾಡಲಾಗುತ್ತೆ.. ಮೂರನೇ ಕಾರನ್ನ ಕಳ್ಳರು ರಾಜ್ಯವನ್ನ ದಾಟೋಕೆ ಬಳಸುತ್ತಾರೆ.. ಆದ್ರೆ ಮೂರೂ ಕಾರಿನ ಮಾಹಿತಿ ಸಿಕ್ಕ ಪೊಲೀಸರು ಆ ಕಾರುಗಳ ಹಿಂದೆ ಬಿದ್ದರು.. ವಿಶೇಷವಾಗಿ ಅವರು ಹೋಗುತ್ತಿದ್ದ ಮಾರ್ಗದ ಸಿಸಿ ಕ್ಯಾಮರಾಗಳ ಮೇಲೆ ನಿಗಾ ಇಟ್ಟು ಬಲೆ ಬೀಸಿದರು. ಆಗಲೇ ನೋಡಿ ಕಳ್ಳರ ಪಿನ್​ ಟು ಪಿನ್​ ಇನ್ಫಾರ್ಮೇಷನ್​ ಸಿಗೋದು.. ಎಲ್ಲಾ ಮಹಿತಿಯನ್ನ ಪಡೆದು ಕೊನೆಗೆ ತಿರುಪತಿಯಲ್ಲಿ ಖದೀಮರನ್ನ ಲಾಕ್​ ಮಾಡಿದ್ರು. ಎಲ್ಲರಿಗೂ ಬಲೆ ಬೀಸಿದ್ರು.

Comments are closed.