Viral News: ಕಳೆದುಕೊಂಡಿದ್ದ ಮಾರುತಿ 800 ಕಾರನ್ನು 10 ಲಕ್ಷ ಕೊಟ್ಟು ಖರೀದಿಸಿದ ಮಾಲೀಕ !!

Share the Article

Viral News: ಇಲ್ಲೊಬ್ಬರು ಉದ್ಯಮಿಗೆ ಕೋಟ್ಯಾಂತರ ರೂಪಾಯಿ ಕೊಟ್ಟು ಪ್ರಪಂಚದ ಅತ್ಯಂತ ಲಕ್ಷಣಗಳನ್ನು ಕೊಳ್ಳುವ ತಾಕತ್ತಿತ್ತು. ಆದರೆ ಅವರು ಇದೀಗ ಅದೆಲ್ಲವನ್ನು ಬಿಟ್ಟು ತಾನು ಕಳೆದುಕೊಂಡಿದ್ದ ಮಾರುತಿ 800 ಕಾರನ್ನು ಮತ್ತೆ 10 ಲಕ್ಷ ಕೊಟ್ಟು ಮರಳಿ ಖರೀದಿಸಿದ್ದಾರೆ. ಈ ವಿಚಾರ ಇದೀಗ ಎಲ್ಲಡೆ ವೈರಲ್ ಆಗುತ್ತಿದೆ.

ಹೌದು, ಕಾರು ಪ್ರೇಮಿ ಕಾನ್ಫಿಡೆಂಟ್ ಗ್ರೂಪ್ ಡೆವಲಪರ್, ಚಲನಚಿತ್ರ ನಿರ್ಮಾಪಕರೂ ಆಗಿರುವ ಡಾ. ರಾಯ್ ಚಿರಿಯಂಕಂದತ್ ಜೋಸೆಫ್ ಅವರು ತಮ್ಮ ಮೊಟ್ಟ ಮೊದಲ ಪ್ರೀತಿಯ ಕಾರಾದ ಮಾರುತಿ 800 ಅನ್ನು ಹುಡುಕಿ, ಅದನ್ನು 10 ಲಕ್ಷ ಹಣ ಕೊಟ್ಟು ಮರಳಿ ಪಡೆದಿದ್ದಾರೆ. ಇದರ ವಿಡಿಯೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ವೈರಲ್‌ ಆಗುತ್ತಿದೆ.

ಈ ಕುರಿತಾಗಿ ಸುದೀರ್ಘವಾದ ಪೋಸ್ಟ್ ಹಂಚಿಕೊಂಡಿರುವ ಜೋಸೆಫ್ ಅವರು ‘ನನ್ನ ಮೊದಲ ಕಾರು, ಈ ಮಾರುತಿ 800 ಕೆಂಪು ಕಾರು ಹುಡುಕಲು ನಾನು 10 ಲಕ್ಷ ರೂ. ಆಫರ್ ಮಾಡಿದ್ದೆ. ಸಾಮಾಜಿಕ ಮಾಧ್ಯಮದ ಶಕ್ತಿ, ನನ್ನ ಇನ್‌ಸ್ಟಾಗ್ರಾಮ್ ಸ್ನೇಹಿತರು ಇದನ್ನು ಕಂಡುಕೊಂಡರು !!!. ಇದು ಮಾರುತಿ 800 ಕಾರಿಗಾಗಿ ಅತಿ ಹೆಚ್ಚು ಸಂಭಾವನೆ ಪಡೆದ ಕಾರುಗಳಲ್ಲಿ ಒಂದಾಗಿರಬಹುದು. ಆದರೆ ಮೊದಲ ಕಾರು ಯಾವಾಗಲೂ ಮೊದಲ ಸಾಧನೆಯಾಗಿದೆ. ಈ ಮಾರುತಿ 800, ನಾನು 1994 ರಲ್ಲಿ ನನ್ನ ಸ್ವಂತ ಗಳಿಕೆಯಿಂದ 25 ವರ್ಷ ವಯಸ್ಸಿನವನಾಗಿದ್ದಾಗ ಖರೀದಿಸಿದ್ದೆ. 31 ವರ್ಷಗಳ ಹಿಂದೆ ಮಾರುತಿ 800 ಭಾರತೀಯ ರಸ್ತೆಗಳಲ್ಲಿ ಅತ್ಯುತ್ತಮ ಕಾರುಗಳಲ್ಲಿ ಒಂದಾಗಿತ್ತು. ನಾನು ಅದನ್ನು 1.10 ಲಕ್ಷ ರೂ.ಗೆ ಖರೀದಿಸಿದೆ. 1994 ರಲ್ಲಿ ನನಗೆ ಸರ್ಜಾಪುರದಲ್ಲಿ 2 ಎಕರೆ ಭೂಮಿ ಸಿಕ್ಕಿತ್ತು!. ಇಂದು ಸರ್ಜಾಪುರದಲ್ಲಿರುವ 2 ಎಕರೆ ಭೂಮಿಯ ಬೆಲೆ 20 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ್ದಾಗಿದೆ.

ಇದು ಕಥೆಯ ನೀತಿ.. ನಾನು ಕಾರು ಖರೀದಿಸಿದ ಸಂದರ್ಭ ಒಂದು ಸಣ್ಣ ತುಂಡು ಭೂಮಿಯನ್ನು ಕೂಡಾ ಖರೀದಿಸಿದೆ. ಈಗ ಆ ಭೂಮಿ ಕುಟುಂಬದ ಸಂಪತ್ತಾಗಿದೆ. ಆದರೆ 1997 ರಲ್ಲಿ ಇದೇ ಮಾರುತಿ 800 ಕಾರನ್ನು ಮಾರಿದ್ದೆ. ಈಗ ಅದೇ ನನ್ನ ಮೊದಲ ಕಾರು ನನ್ನ ಬಳಿ ಬಂದಿದೆ. ಆಗಿನ ಕಾಲದಲ್ಲಿ ಭಾರತದ ರಸ್ತೆಯಲ್ಲಿ ಅತ್ಯಂತ ದುಬಾರಿ ಹಾಗೂ ಅತ್ಯುತ್ತಮ ಕಾರು ಎಂದು ಹೆಗ್ಗಳಿಕೆ ಪಾತ್ರವಾಗಿದ್ದ ಅದೇ ಕಾರನ್ನು ಈಗ ನಾನು ಮರಳಿ ಖರೀದಿಸಿದ್ದೇನೆ. ಇದನ್ನು ಹುಡುಕಿ ಕೊಟ್ಟ ಆನಂದ್‌ ಹಾಗೂ ಅನಿಲ್‌ ಅವರಿಗೆ ಹೃತ್ಪೂರ್ವಕ ಧನ್ಯವಾದ ಎಂದು ತಿಳಿಸಿದ್ದಾರೆ.

View this post on Instagram

A post shared by Dr Roy Chiriankandath Joseph (@dr.roy.cj)

Comments are closed.