ಬಿಹಾರ: ಕನಿಷ್ಠ, ಗರಿಷ್ಠ ಮತದಾರ ಹೆಸರು ಕೈಬಿಟ್ಟ ಕ್ಷೇತ್ರಗಳಲ್ಲಿ ಕೂಡಾ ಬಿಜೆಪಿ ಜಯ

Share the Article

ಹೊಸದಿಲ್ಲಿ: ಬಿಹಾರದಲ್ಲಿ ನಡೆದ ಮತದಾರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ ಐಆರ್) ಮೂಲಕ ಅತೀ ಹೆಚ್ಚು ಮತ್ತು ಅತೀ ಕಡಿಮೆ ಮತದಾರರ ಹೆಸರು ಕೈ ಬಿಡಲಾದ ವಿಧಾನಸಭೆ ಕ್ಷೇತ್ರಗಳಲ್ಲಿ ಕೂಡಾ ಬಿಜೆಪಿ ಗೆಲುವು ಸಾಧಿಸಿದೆ.

ಚುನಾವಣಾ ಆಯೋಗದ ಡಾಟಾ ಪ್ರಕಾರ ಗೋಪಾಲ್‌ಗಂಜ್ ಕ್ಷೇತ್ರದಲ್ಲಿ ರಾಜ್ಯದಲ್ಲೇ ಅತ್ಯಧಿಕ ಅಂದರೆ, ಬರೋಬ್ಬರಿ 56,793 ಮತದಾರರ ಹೆಸರನ್ನು ಕೈಬಿಡಲಾಗಿತ್ತು. ಅದೇ ದರ್ಭಂಗಾದಲ್ಲಿ ಅತೀ ಕಡಿಮೆ ಅಂದರೆ ಕೇವಲ 2,859 ಹೆಸರುಗಳನ್ನಷ್ಟೇ ಕೈಬಿಡಲಾಗಿತ್ತು. ಈ 2 ಕ್ಷೇತ್ರಗಳಲ್ಲಿ ಕೂಡಾ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಅದೇ ರೀತಿ ಮತದಾರರ ಪಟ್ಟಿಗೆ ಗರಿಷ್ಠ ಸಂಖ್ಯೆಯ ನೂತನ. ಮತದಾರದಾರರ ಸೇರ್ಪಡೆ 5,434 ಕಂಡಿದ್ದ ನೌತನ್‌ ಕ್ಷೇತ್ರದಲ್ಲಿ ಸಹ ಬಿಜೆಪಿ ಗೆದ್ದಿದೆ.

Comments are closed.