LPG ಗ್ರಾಹಕರಿಗೆ ಕೇಂದ್ರದಿಂದ ಭರ್ಜರಿ ಗುಡ್ ನ್ಯೂಸ್ – ಬೆಲೆ ವಿಚಾರದಲ್ಲಿ ಬಿಗ್ ರಿಲೀಫ್!!

Share the Article

LPG: ಪ್ರತಿ ತಿಂಗಳು ಎಲ್‌ಪಿಜಿ ಸಿಲಿಂಡರ್ ದರ ಏರಿಕೆ ಮತ್ತು ಹೇಳಿಕೆಯಾಗುತ್ತದೆ. ಅದರಲ್ಲೂ ಗೃಹಬಳಕೆಯ ಸಿಲಿಂಡರ್ ದರ ಅನೇಕ ಕುಟುಂಬಗಳಿಗೆ ದೊಡ್ಡ ಹೊರೆಯಾಗಿದೆ. ಆದರೆ ಇದೀಗ ಕೇಂದ್ರ ಸರ್ಕಾರವು ಎಲ್ಪಿಜಿ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದ್ದು, ಬೆಲೆ ವಿಚಾರದಲ್ಲಿ ಬಿಗ್ ರಿಲೀಫ್ ಕೊಡಲಿದೆ ಎಂದು ವರದಿಯಾಗಿದೆ.

ಭಾರತದ ಸಾರ್ವಜನಿಕ ವಲಯದ ತೈಲ ಕಂಪನಿಗಳು ಎಲ್‌ಪಿಜಿಯನ್ನು ವಿದೇಶದಿಂದ ಆಮದು ಮಾಡಿಕೊಳ್ಳಲು ಮುಂದಾಗಿವೆ ಎಂದು ವರದಿಯಾಗಿದೆ. ಇದರಿಂದ ಎಲ್‌ಪಿಜಿ ಬಳಕೆದಾರರಿಗೆ ಏನೆಲ್ಲ ಅನುಕೂಲವಾಗಬಹುದು? ನೋಡೋಣ ಬನ್ನಿ.

ಭಾರತದ ಸಾರ್ವಜನಿಕ ವಲಯದ ತೈಲ ಕಂಪನಿಗಳು ಈಗ ಅಮೆರಿಕದ ಗಲ್ಫ್ ಕರಾವಳಿಯಿಂದ ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್‌ಪಿಜಿ) ಆಮದು ಮಾಡಿಕೊಳ್ಳುವ ಒಂದು ವರ್ಷದ ಒಪ್ಪಂದವನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸಿವೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ. ಈ ಬಗ್ಗೆ ತಮ್ಮ ಎಕ್ಸ್‌ ಖಾತೆಯಲ್ಲಿ ಮಾಹಿತಿ ನೀಡಿರುವ ಅವರು, 2026ರ ಒಪ್ಪಂದದಂತೆ ವರ್ಷಕ್ಕೆ ಅಮೇರಿಕಾದ ಗಲ್ಫ್ ಕರಾವಳಿಯಿಂದ ಭಾರತವು ವಾರ್ಷಿಕವಾಗಿ ಸುಮಾರು 2.2 ಮಿಲಿಯನ್ ಟನ್‌ಗಳಷ್ಟು ಎಲ್‌ಪಿಜಿ ಆಮದು ಮಾಡಿಕೊಳ್ಳಲಿದೆ. ಇದು “ಭಾರತೀಯ ಮಾರುಕಟ್ಟೆಗೆ ಯುಎಸ್ ಎಲ್‌ಪಿಜಿಯ ಮೊದಲ ರಚನಾತ್ಮಕ ಒಪ್ಪಂದ ಎಂದಿದ್ದಾರೆ.

ಅಲ್ಲದೆ ಭಾರತದ ಜನರಿಗೆ ಸುರಕ್ಷಿತ ಹಾಗು ಕೈಗೆಟುಕುವ ದರಕ್ಕೆ ಎಲ್‌ಪಿಜಿ ಸರಬರಾಜುಗಳನ್ನು ಒದಗಿಸುವ ನಮ್ಮ ಪ್ರಯತ್ನದಲ್ಲಿ ನಮ್ಮ ಎಲ್‌ಪಿಜಿ ಸೋರ್ಸಿಂಗ್ ಅನ್ನು ವೈವಿಧ್ಯಗೊಳಿಸುತ್ತಿದ್ದೇವೆ. ಈ ಒಪ್ಪಂದದಂತೆ 2.2 ಮಿಲಿಯನ್ ಟನ್‌ಗಳಷ್ಟು ಎಲ್‌ಪಿಜಿ ಆಮದು ಭಾರತದ ವಾರ್ಷಿಕ ಆಮದಿನ ಶೇ 10ರಷ್ಟಿರುತ್ತದೆ ಎಂದು ಹೇಳಿದ್ದಾರೆ. ಈ ಬೆಳವಣಿಗೆಯು ಎಲ್‌ಪಿಜಿ ದರದಲ್ಲಿ ಗಣನೀಯವಾಗಿ ಇಳಿಕೆಯನ್ನು ತರಬಹುದು ಎನ್ನಲಾಗಿದೆ.

Comments are closed.