IPL-2026 ಹರಾಜಿಗೆ ದಿನಾಂಕ, ಸ್ಥಳ ಫಿಕ್ಸ್ !!

IPL-2026 : ಐಪಿಎಲ್ 2026ಕ್ಕೆ ಎಲ್ಲಾ 10 ಪ್ರಾಂಚೈಸಿಗಳು ಸಕಲ ಸಿದ್ಧತೆ ನಡೆಸಿದ್ದು, ಈ ಬೆನ್ನಲ್ಲೇ ಇದೀಗ ಐಪಿಎಲ್ ಹರಾಜಿಗೆ ಬಿಸಿಸಿಐ ಮುಹೂರ್ತ ಫಿಕ್ಸ್ ಮಾಡಿದೆ. ಹಾಗಾದ್ರೆ ಯಾವಾಗ ಹಾಗೂ ಎಲ್ಲಿ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿದೆ ನೋಡಿ.

ಐಪಿಎಲ್ ಹರಾಜು ಡಿಸೆಂಬರ್ 16ರಂದು ಅಬುಧಾಬಿಯ ಎತಿಹಾದ್ ಅರೆನಾದಲ್ಲಿ ನಡೆಯಲಿದೆ ಎಂದು ಬಿಸಿಸಿಐ ದೃಢಪಡಿಸಿದೆ. ಸತತ 3ನೇ ವರ್ಷ ವಿದೇಶದಲ್ಲಿ ಐಪಿಎಲ್ ಹರಾಜು ನಡೆಯುತ್ತಿದೆ. ಎಲ್ಲ 10 ಐಪಿಎಲ್ ಫ್ರಾಂಚೈಸಿಗಳು ಮಿನಿ ಹರಾಜಿಗೂ ಮುಂಚಿತವಾಗಿ ಉಳಿಸಿಕೊಂಡ ಮತ್ತು ಬಿಡುಗಡೆ ಮಾಡಿದ ಆಟಗಾರರ ಪಟ್ಟಿಯನ್ನು ಶನಿವಾರ ಪ್ರಕಟಿಸಿವೆ.
49 ವಿದೇಶಿ ಆಟಗಾರರು ಸೇರಿದಂತೆ ಒಟ್ಟು 173 ಆಟಗಾರರನ್ನು ತಂಡಗಳಲ್ಲಿ ಉಳಿಸಿಕೊಳ್ಳಲಾಗಿದೆ. ಒಟ್ಟು 77 ಆಟಗಾರರ ಸ್ಲಾಟ್ ಗಳ ಹರಾಜಿನಲ್ಲಿ ₹ 237.55 ಕೋಟಿ ಸಂಯೋಜಿತ ಹಣ ಲಭ್ಯವಿರುತ್ತದೆ. ಪಂಜಾಬ್ ಕಿಂಗ್ಸ್ 21 ಆಟಗಾರರನ್ನು ಉಳಿಸಿಕೊಳ್ಳಲು ನಿರ್ಧರಿಸಿತು, ಇದು 10 ಫ್ರಾಂಚೈಸಿಗಳಲ್ಲಿ ಅತ್ಯಧಿಕವಾಗಿದೆ. ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಟೈಟಾನ್ಸ್ ತಲಾ 20 ಆಟಗಾರರನ್ನು ಉಳಿಸಿಕೊಂಡಿವೆ. ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 64.3 ಕೋಟಿ ರೂ.
ಯಾವ ತಂಡ ಎಷ್ಟು ಹಣ ಉಳಿಸಿಕೊಂಡಿದೆ?
ಕೆಕೆಆರ್ – 64.3 ಕೋಟಿ ರೂಪಾಯಿ
ಸಿಎಸ್‌ಕೆ – 43.4 ಕೋಟಿ ರೂಪಾಯಿ
ಎಸ್‌ಆರ್‌ಎಚ್ – 25.5 ಕೋಟಿ ರೂಪಾಯಿ
ಎಲ್‌ಎಸ್‌ಜಿ – 22.95 ಕೋಟಿ ರೂಪಾಯಿ
ಡೆಲ್ಲಿ ಕ್ಯಾಪಿಟಲ್ಸ್ – 21.8 ಕೋಟಿ
ಆರ್‌ಸಿಬಿ – 16.4 ಕೋಟಿ ರೂಪಾಯಿ
ಆರ್‌ಆರ್ – 16.05 ಕೋಟಿ ರೂಪಾಯಿ
ಜಿಟಿ – 12.9 ಕೋಟಿ ರೂಪಾಯಿ
ಪಿಬಿಕೆಎಸ್ – 11.5 ಕೋಟಿ ರೂಪಾಯಿ
ಎಂಐ – 2.75 ಕೋಟಿ ರೂಪಾಯಿ
Comments are closed.