ಉಳ್ಳಾಲ: ನಾಯಿ ದಾಳಿಗೆ ವ್ಯಕ್ತಿ ಬಲಿ

Share the Article

Ullala: ಉಳ್ಳಾಲದ ಕುಂಪಲದಲ್ಲಿ ನಾಯಿ ದಾಳಿಗೆ ವ್ಯಕ್ತಿಯೊಬ್ಬರು ಸಾವಿಗೀಡಾಗಿರುವ ಘಟನೆ ಇಂದು (ಶುಕ್ರವಾರ ನ.14) ಮುಂಜಾನೆ ನಡೆದಿದೆ. ಮೃತಪಟ್ಟವರನ್ನು ಕುಂಪಲ ನಿವಾಸಿ ದಯಾನಂದ (60) ಎಂದು ಗುರುತಿಸಲಾಗಿದೆ.

ಗುರುವಾರ (ನ.13) ರಾತ್ರಿ ಅಂಗಡಿಯೊಂದರ ಮುಂದೆ ಮದ್ಯಪಾನ ಮಾಡಿ ಮಲಗಿದ್ದ ದಯಾನಂದ ಅವರ ಮೇಲೆ ಮುಂಜಾನೆ ಕ್ರೂರ ನಾಯಿ ದಾಳಿ ಮಾಡಿದೆ. ನಾಯಿಯ ದಾಳಿಯಿಂದ ತಪ್ಪಿಸಿಕೊಳ್ಳಲು ರಸ್ತೆಯ ಇನ್ನೊಂದು ಕಡೆಗೆ ಓಡಿದ್ದಾರೆ. ಆದರೂ ನಾಯಿ ಬೆನ್ನಟ್ಟಿ ಅವರನ್ನು ಹಿಡಿದು ತೀವ್ರವಾಗಿ ಗಾಯಗೊಳಿಸಿದೆ. ದೇಹದ ಮೇಲೆ ಗಂಭೀರ ಗಾಯವಾಗಿತ್ತು.

ಮೊದಲಿಗೆ ಇದನ್ನು ಸ್ಥಳೀಯರು ಕೊಲೆ ಎಂದು ಭಾವಿಸಿದ್ದರು. ನಂತರ ಸ್ಥಳಕ್ಕೆ ಭೇಟಿ ನೀಡಿದ ವಿಧಿವಿಜ್ಞಾನ ತಜ್ಞರು ಪರಿಶೀಲನೆ ಮಾಡಿ, ನಾಯಿ ದಾಳಿಯಿಂದಲೇ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ಖಚಿತಪಡಿಸಿದ್ದಾರೆ. ನಾಯಿಯ ಪತ್ತೆ ಕಾರ್ಯ ನಡೆದಿದೆ. ಉಳ್ಳಾಲ ಪೊಲೀಸರು ತನಿಖೆ ಮಾಡುತ್ತಿದ್ದಾರೆ.

ಸದ್ಯ ಬೀದಿ ನಾಯಿಯನ್ನು ಪುರಸಭೆ ಸಿಬ್ಬಂದಿಗಳು ಸೆರೆ ಹಿಡಿದಿದ್ದಾರೆ. ಅವಿವಾಹಿತರಾಗಿದ್ದ ದಯಾನಂದ ಅವರು ಕುಡಿತದ ಚಟ ಹೊಂದಿದ್ದು, ರಾತ್ರಿ ವೇಳೆ ಸ್ಥಳೀಯವಾಗಿ ನೇಮ, ಕೋಲ, ಜಾತ್ರೆಗಳಿಗೆ ತೆರಳು ಕುಂಪಲದ ಅಂಗಡಿ ಮುಂಭಾಗ ಮಲಗಿ ಬೆಳಗ್ಗಿನ ವೇಳೆ ಮನೆ ಸೇರುತ್ತಿದ್ದರು.

ಇಂದು ಮುಂಜಾನೆ 3.30 ರ ವೇಳೆಗೆ ಅಂಗಡಿಯೊಂದರ ಮುಂದೆ ದಯಾನಂದ ಇದ್ದಿದ್ದನ್ನು ಅಂಗಡಿ ಮಾಲೀಕ ವಿನೋದ್‌ ನೋಡಿದ್ದಾರೆ. ಪಕ್ಕದ ಅಂಗಡಿಯಲ್ಲಿ ವ್ಯಕ್ತಿಯೊಬ್ಬರ ಕಣ್ಣು ಗುಡ್ಡೆ ದೊರಕಿದೆ. ರಕ್ತಸಿಕ್ತವಾಗಿರೋದು ಕಂಡು ಬಂದಿದೆ.

Comments are closed.