Delhi: ದೆಹಲಿ ದಾಳಿ ಪ್ರತಿಕಾರಕ್ಕೆ ಸೇನೆ ಸಜ್ಜು – ಹೈ ವೋಲ್ಟೇಜ್ ಸಭೆ ಕರೆದ ಪ್ರಧಾನಿ ಮೋದಿ!!

Share the Article

Delhi: ದೆಹಲಿಯ ಕೆಂಪು ಕೋಟೆ ಬಳಿ ನಡೆದ ಕಾರು ತೋಟದಲ್ಲಿ 9 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಪ್ರಕರಣದ ಹಿಂದೆ ಉಗ್ರರ ಕೈವಾಡ ಇದೆ ಎಂದು ತನಿಖೆಗಳು ಶಂಕಿಸುತ್ತಿವೆ. ಹಿನ್ನೆಲೆಯಲ್ಲಿ ದೇಶದ ಜನರ ರಕ್ತ ಕುದಿಯುತ್ತಿದೆ. ಈ ನಡುವೆಯೇ ಪ್ರಧಾನಿ ನರೇಂದ್ರ ಮೋದಿಯವರು ಕೈ ವೋಲ್ಟೇಜ್ ಸಭೆಯನ್ನು ಕರೆದು, ಪ್ರತಿಕಾರಕ್ಕೆ ಸೇನೆಯನ್ನು ಸಜ್ಜುಗೊಳಿಸಿದ್ದಾರೆ ಎನ್ನಲಾಗುತ್ತಿದೆ.

ಹೌದು, ದೆಹಲಿಯ ಪ್ರತಿಷ್ಠಿತ ಕೆಂಪುಕೋಟೆ ಬಳಿ ಕಾರ್‌ ಬಾಂಬ್‌ ಸ್ಫೋಟ ಸಂಭವಿಸಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ಉಗ್ರರ ಹೆಡೆಮುರಿ ಕಟ್ಟಲು ಪಣತೊಟ್ಟಿದೆ. ಬುಧವಾರ ಸಂಜೆ ಪ್ರಧಾನಿ ನರೇಂದ್ರಮೋದಿ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ ನಡೆಯಲಿದೆ. ಸಭೆಗೆ ಮೂರು ಸೇನಾಪಡೆಗಳ ಮುಖ್ಯಸ್ಥರು, ರಾಷ್ಟ್ರೀಯ ಭದ್ರತಾ ಸಲಹೆಗಾರ, ಗುಪ್ತಚರ ವಿಭಾಗ ಸೇರಿದಂತೆ ಎಲ್ಲಾ ಹಿರಿಯ ಅಧಿಕಾರಿಗಳ ಸಭೆ ಕರೆಯಲಾಗಿದೆ.

ಇನ್ನೂ ಈ ಸಭೆಯಲ್ಲಿ ಪ್ರಕರಣ ಕುರಿತಂತೆ ಕೂಲಂಕುಷವಾಗಿ ಮಾಹಿತಿ ಪಡೆಯಲಿರುವ ಪ್ರಧಾನಿ ನರೇಂದ್ರಮೋದಿ ಅವರು ಮುಂದೆ ಕೈಗೊಳ್ಳಬೇಕಾದ ಕಾರ್ಯಾಚರಣೆ ಕುರಿತು ಮಾಹಿತಿ ಪಡೆಯಲಿದ್ದಾರೆ. ಅಲ್ಲದೆ ದಾಳಿಯ ಪ್ರತಿಕಾರಕ್ಕೆ ಏನೆಲ್ಲ ಮಾಡಬಹುದು ಎಂಬುದಾಗಿ ಪ್ರಧಾನಿಯವರು ಸಲಹೆ ನೀಡಲಿದ್ದಾರೆ. ಒಟ್ಟಿನಲ್ಲಿ ಇದು ಆಪರೇಷನ್ ಸಿಂಧೂರ್ 0.2 ಗೆ ನಾಂದಿ ಹಾಡುತ್ತದೆಯಾ ಎಂಬ ಕುತೂಹಲ ಮೂಡಿದೆ.

Comments are closed.