Silver loan: ಚಿನ್ನ ಮಾತ್ರವಲ್ಲ, ಇನ್ಮುಂದೆ ಬೆಳ್ಳಿಯ ಮೇಲು ಪಡೆಯಬಹುದು ಸಾಲ – ಎಷ್ಟು ಬೆಳ್ಳಿಗೆ ಎಷ್ಟು ಹಣ ಸಿಗುತ್ತೆ?

Share the Article

Silver loan: ಏನಾದರೂ ಹಣದ ಎಮರ್ಜೆನ್ಸಿ ಇದ್ದ ಸಂದರ್ಭದಲ್ಲಿ ಮನೆಯಲ್ಲಿರುವ ಚಿನ್ನವನ್ನು ಬ್ಯಾಂಕಿಗೆ ಇಟ್ಟು ಗೋಲ್ಡ್ ಲೋನ್ ಪಡೆಯುತ್ತೇವೆ. ಇದುವರೆಗೂ ಚಿನ್ನವನ್ನು ಮಾತ್ರ ಬ್ಯಾಂಕಿನಲ್ಲಿಟ್ಟು ಹಣ ಪಡೆಯಬಹುದಿತ್ತು. ಆದರೆ ಇದೀಗ ಬೆಳ್ಳಿಯನ್ನು ಕೂಡ ಬ್ಯಾಂಕಿನಲ್ಲಿಟ್ಟು ಬೆಳ್ಳಿ ಸಾಲವನ್ನು ಪಡೆಯಬಹುದು. ಈ ಕುರಿತಾಗಿ ಆರ್ಬಿಐ ಸುತ್ತೋಲೆಯನ್ನು ಹೊರಡಿಸಿದೆ. ಹಾಗಿದ್ರೆ ಬೆಳ್ಳಿಯ ಮೇಲೆ ಎಷ್ಟು ಸಾಲವನ್ನು ಪಡೆಯಬಹುದು? ಆರ್ಬಿಐ ನಿಯಮಗಳು ಏನು ಹೇಳುತ್ತವೆ ನೋಡೋಣ ಬನ್ನಿ.

ಹೌದು, ತುರ್ತು ಹಣದ ಅವಶ್ಯಕತೆ ಎದುರಾದಾಗ ಅನೇಕರು ಬ್ಯಾಂಕುಗಳಲ್ಲಿ ಚಿನ್ನ ಅಡವಿಟ್ಟು ಸಾಲ ಪಡೆಯುತ್ತಾರೆ. ಆದರೆ, ಈಗ ಬೆಳ್ಳಿ ಬೆಲೆ ಕೂಡ ಭಾರೀ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಬೆಳ್ಳಿ ಆಭರಣಗಳ ಮೇಲೂ ಸಾಲ ಪಡೆಯಬಹುದು. ಇತ್ತೀಚೆಗಷ್ಟೇ RBI ಇದರ ಬಗ್ಗೆ ಘೋಷಣೆ ಮಾಡಿದ್ದು, ಇದೀಗ ಮಾರ್ಗಸೂಚಿಗಳನ್ನು ಸಹ ಬಿಡುಗಡೆ ಮಾಡಿದೆ. 2026ರ ಏಪ್ರಿಲ್ 1 ರಿಂದ ಬೆಳ್ಳಿ ಸಾಲದ ನಿಯಮಗಳು ಜಾರಿಗೆ ಬರಲಿವೆ. 

ಎಷ್ಟು ಬೆಳ್ಳಿಯನ್ನು ಒತ್ತೆ ಇಡಬಹುದು.?
ರಿಸರ್ವ್ ಬ್ಯಾಂಕ್ ಸುತ್ತೋಲೆಯ ಪ್ರಕಾರ, ಒಬ್ಬ ಗ್ರಾಹಕರಿಗೆ ನೀಡಲಾಗುವ ಎಲ್ಲಾ ಸಾಲಗಳಿಗೆ ಮೇಲಾಧಾರವಾಗಿ ಅಡವಿಟ್ಟ ಆಭರಣಗಳ ಒಟ್ಟು ತೂಕವು ಈ ಕೆಳಗಿನ ಮಿತಿಗಳನ್ನು ಮೀರಬಾರದು.

  • ಚಿನ್ನದ ಆಭರಣಗಳು : 1 ಕಿಲೋಗ್ರಾಂಗಿಂತ ಹೆಚ್ಚಿಲ್ಲ.
  • ಬೆಳ್ಳಿ ಆಭರಣಗಳು : 10 ಕಿಲೋಗ್ರಾಂಗಳಿಗಿಂತ ಹೆಚ್ಚಿಲ್ಲ 
  • ಚಿನ್ನದ ನಾಣ್ಯಗಳು : 50 ಗ್ರಾಂ ಮೀರಬಾರದು.
  • ಬೆಳ್ಳಿ ನಾಣ್ಯಗಳು : 500 ಗ್ರಾಂ ಮೀರಬಾರದು.

ಎಷ್ಟು ಸಾಲದ ಮೊತ್ತವನ್ನ ಪಡೆಯುತ್ತೀರಿ?

ಸಾಲದ ಮೊತ್ತವು ಸಾಲ-ಮೌಲ್ಯ (LTV) ಅನುಪಾತವನ್ನು ಅವಲಂಬಿಸಿರುತ್ತದೆ. ಇದರರ್ಥ ನೀವು ಅಡವಿಟ್ಟ ಚಿನ್ನ ಅಥವಾ ಬೆಳ್ಳಿಯ ಮೇಲೆ ನೀವು ಎಷ್ಟು ಹಣವನ್ನ ಎರವಲು ಪಡೆಯಬಹುದು. ಚಿನ್ನ ಅಥವಾ ಬೆಳ್ಳಿಯ ಮೌಲ್ಯದ ಪ್ರತಿ 100 ರೂ.ಗೆ ನೀವು ಎಷ್ಟು ಸಾಲ ಪಡೆಯಬಹುದು ಎಂಬುದನ್ನು ಇದು ತೋರಿಸುತ್ತದೆ. ಸಾಲದ ಮೊತ್ತವು 2.5 ಲಕ್ಷ ರೂ.ಗಳವರೆಗೆ ಇದ್ದರೆ, ಗರಿಷ್ಠ LTV 85 ಪ್ರತಿಶತ. ಇದರರ್ಥ ನೀವು ನಿಮ್ಮ ಚಿನ್ನ ಅಥವಾ ಬೆಳ್ಳಿಯ ಮೌಲ್ಯದ 85 ಪ್ರತಿಶತದವರೆಗೆ ಎರವಲು ಪಡೆಯಬಹುದು.

RBI ನಿಯಮಗಳು:

ಸಾಲಕ್ಕೆ ಮೌಲ್ಯದ ಅನುಪಾತ (LTV): ಅಡವಿಟ್ಟ ಬೆಳ್ಳಿಯ ಮೌಲ್ಯದ ಮೇಲೆ ಎಷ್ಟು ಸಾಲ ಪಡೆಯಬಹುದು ಎಂಬುದನ್ನು ಎಲ್‌ಟಿವಿ (ಲೋನ್ ಟು ವ್ಯಾಲ್ಯೂ ರೇಶಿಯೋ) ತಿಳಿಸುತ್ತದೆ. ಇದು ಸಾಲದ ಮೊತ್ತವನ್ನು ಅವಲಂಬಿಸಿ ಬದಲಾಗುತ್ತದೆ:

ಮರುಪಾವತಿ ಮತ್ತು ವಿಳಂಬ ಶುಲ್ಕ

ಸಾಲವನ್ನು ಮರುಪಾವತಿ ಮಾಡಿದ ನಂತರ, ಅದೇ ದಿನ ಅಥವಾ ಗರಿಷ್ಠ 7 ಕೆಲಸದ ದಿನಗಳೊಳಗೆ ಸಾಲದಾತನು ಅಡವಿಟ್ಟ ಆಭರಣಗಳು ಅಥವಾ ಇತರ ವಸ್ತುಗಳನ್ನು ಸಾಲಗಾರನಿಗೆ ಹಿಂತಿರುಗಿಸಬೇಕು.

ಸಾಲದಾತರಿಂದ ವಿಳಂಬವಾದರೆ, ಗಡುವು ಮೀರಿದ ಪ್ರತಿ ದಿನಕ್ಕೆ ₹5,000 ದಂತೆ ಸಾಲಗಾರನಿಗೆ ಪರಿಹಾರವನ್ನು ಪಾವತಿಸಬೇಕಾಗುತ್ತದೆ.

ಸಾಲಗಾರನು ಸಾಲವನ್ನು ಸಮಯಕ್ಕೆ ಸರಿಯಾಗಿ ಮರುಪಾವತಿಸಲು ವಿಫಲವಾದರೆ, ಸಾಲದಾತನು ಅಡವಿಟ್ಟ ವಸ್ತುಗಳನ್ನು ಹರಾಜು ಹಾಕಬಹುದು. ಆದರೆ, ಹರಾಜಿಗೆ ಮೊದಲು ಆ ಸಾಲಗಾರನಿಗೆ ನೋಟಿಸ್ ನೀಡಬೇಕಾಗುತ್ತದೆ.

Comments are closed.