ಸಾಲು ಸಾಲು ರಜೆಯ ಕಾರಣ, 8,9,10 ತರಗತಿಗಳ ಶೈಕ್ಷಣಿಕ ಅವಧಿ ಕಡಿತ

Holiday: ಸಾಲು ಸಾಲು ರಜೆಗಳ ಕಾರಣದಿಂದ ವಿದ್ಯಾರ್ಥಿಗಳ ಪಾಠದ ಸಮಯ ಕಡಿಮೆಯಾಗಿದೆ. ಇದನ್ನು ಸರಿದೂಗಿಸಲು ಶಿಕ್ಷಣ ಇಲಾಖೆ ಹೊಸ ಸುತ್ತೋಲೆಯನ್ನು ಹೊರಡಿಸಿದೆ.

8 ಪೂರ್ಣ ದಿನಗಳು, 2 ಅರ್ಧ ದಿನಗಳು ಒಟ್ಟು 66 ಅವಧಿಗಳು ಲಾಸ್ ಆಗಿದೆ. ಇದನ್ನ ಸರಿಪಡಿಸಲು ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. 8, 9 ಹಾಗೂ 10ನೇ ತರಗತಿಗಳಿಗೆ ವಿಶೇಷ ತರಗತಿ ನಡೆಸುವ ಬಗ್ಗೆ ಸುತ್ತೋಲೆ ಹೊರಡಿಸಲಾಗಿದ್ದು, 2025–26ನೇ ಸಾಲಿನಲ್ಲಿ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಶೈಕ್ಷಣಿಕ ಕ್ಯಾಲೆಂಡರ್ ಕೊಂಚ ಬದಲಾವಣೆ ಮಾಡಿದ್ದು, ಪಾಠದ ಸಮಯ ಮತ್ತು ದಿನಾಂಕಗಳ ಬಗ್ಗೆ ಮಾಹಿತಿ ನೀಡಿದೆ.
ಶೈಕ್ಷಣಿಕ ಸಮೀಕ್ಷೆಯಿಂದ 8 ಪೂರ್ತಿ ದಿನ, ಜೊತೆಗೆ 2 ಅರ್ಧ ದಿನಗಳ ಅವಧಿ ಕಡಿತವಾಗಿದೆ. 8 ಪೂರ್ಣ ದಿನಗಳು: 8×7=56 ಕ್ಲಾಸ್ಗಳು. 2 ಅರ್ಧ ದಿನಗಳು: 2×5 = 10 ಕಾಸ್ಲ್ಗಳು, ಒಟ್ಟು: 66 ಕಾಸ್ಲ್ಗಳು ಕಡಿತವಾಗಿವೆ. ಹೀಗಾಗಿ 8, 9 ಹಾಗೂ 10ನೇ ತರಗತಿಗೆ 2026 ಜನವರಿ 24 ತನಕ ಹೆಚ್ಚುವರಿ ತರಗತಿ ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದು, ಶಾಲೆಗಳಲ್ಲಿ ಹಬ್ಬ, ರಜೆ, ಸರ್ಕಾರಿ ಕಾರ್ಯಕ್ರಮಗಳಿಗೆ ಅನುಗುಣವಾಗಿ ಪಾಠ ಸಮಯದ ಮಾರ್ಪಾಡು ಮಾಡಿಕೊಳ್ಳುವಂತೆ ಸಲಹೆ ನೀಡಲಾಗಿದೆ. ಶಾಲೆಯ ಅವಧಿಗೂ ಮೊದಲು ಅಥವಾ ನಂತರ ಒಂದು ಹೆಚ್ಚುವರಿ ತರಗತಿ ನಡೆಸುವಂತೆ ಸೂಚನೆ ನೀಡಿದ್ದು ಶಾಲೆಗಳು ಈ ಬಗ್ಗೆ ಸಿದ್ಧತೆ ನಡೆಸಿವೆ.
Comments are closed.