Home Latest Sports News Karnataka RCB ಖರೀದಿಸಲು ಉದ್ಯಮಿಗಳ ಪೈಪೋಟಿ – ಯಾರೆಲ್ಲ ರೇಸ್ ನಲ್ಲಿ ಇದ್ದಾರೆ?

RCB ಖರೀದಿಸಲು ಉದ್ಯಮಿಗಳ ಪೈಪೋಟಿ – ಯಾರೆಲ್ಲ ರೇಸ್ ನಲ್ಲಿ ಇದ್ದಾರೆ?

Hindu neighbor gifts plot of land

Hindu neighbour gifts land to Muslim journalist

RCB: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಮಾಲೀಕರಾದ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ (USL) ತಮ್ಮ ಕ್ರಿಕೆಟ್ ತಂಡದ ಮೇಲೆ ದೊಡ್ಡ ನಿರ್ಧಾರ ಕೈಗೊಂಡಿದೆ. ಅಂದರೆ ಆರ್‌ಸಿಬಿಯನ್ನು ಅಧಿಕೃತವಾಗಿ ಮಾರಾಟಮಾಡಲು ಸಿದ್ದ ಮಾಡಿದೆ. ಇದನ್ನೆಲ್ಲ ತಂಡವನ್ನು ಖರೀದಿಸಲು ಸಾಕಷ್ಟು ಉದ್ಯಮಿಗಳು ಮುಗಿಬಿದ್ದಿದ್ದಾರೆ. ಹಾಗಿದ್ದರೆ ರೇಸ್ ನಲ್ಲಿ ಯಾರೆಲ್ಲಾ ಇದ್ದಾರೆ ಗೊತ್ತಾ? ಇಲ್ಲಿದೆ ನೋಡಿ.

ಹೌದು, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿಯ ಹೊಸ ಮಾಲೀಕರು ಯಾರು ಎಂಬ ಕುತೂಹಲ ತೀವ್ರಗೊಂಡಿದೆ. ಈ ಫ್ರಾಂಚೈಸಿಯ ಖರೀದಿಗೆ ಈಗಾಗಲೇ ಹಲವು ಪ್ರಮುಖ ಉದ್ಯಮಿಗಳು ಆಸಕ್ತಿ ತೋರಿದ್ದಾರೆ. ದಿನ ಕಳೆದಂತೆ ಆಸಕ್ತಿದಾರರ ಪಟ್ಟಿ ಉದ್ದವಾಗುತ್ತಿದ್ದು, ಬಿಲಿಯನೇರ್‌ಗಳ ನಡುವೆ ಭರ್ಜರಿ ಪೈಪೋಟಿ ನಡೆಯುವ ಸಾಧ್ಯತೆ ಕಂಡು ಬರುತ್ತಿದೆ.

ಯಾರೆಲ್ಲಾ ರೇಸ್ ನಲ್ಲಿದ್ದಾರೆ?
ಕರ್ನಾಟಕದ ಉದ್ಯಮಿಗಳಾದ ಝೆರೋಧಾ ಕಂಪೆನಿಯ ಸಹ-ಸಂಸ್ಥಾಪಕ ನಿಖಿಲ್ ಕಾಮತ್ ಮತ್ತು ಮಣಿಪಾಲ್ ಎಜುಕೇಶನ್ ಅಂಡ್ ಮೆಡಿಕಲ್ ಗ್ರೂಪ್ (MEMG) ಅಧ್ಯಕ್ಷ ರಂಜನ್ ಪೈ ಅವರು ಆರ್‌ಸಿಬಿ ಫ್ರಾಂಚೈಸಿ ಖರೀದಿಗೆ ಆಸಕ್ತಿ ತೋರಿದ್ದಾರೆ. ವರದಿ ಪ್ರಕಾರ, ಈ ಇಬ್ಬರು ಉದ್ಯಮಿಗಳು ಆರ್‌ಸಿಬಿ ಫ್ರಾಂಚೈಸಿಯನ್ನು ಕರ್ನಾಟಕದಲ್ಲೇ ಉಳಿಸುವ ಉದ್ದೇಶದಿಂದ ಬಿಡ್ಡಿಂಗ್ ಪ್ರಕ್ರಿಯೆಗೆ ಸಜ್ಜಾಗಿದ್ದಾರೆ.

ನಿಖಿಲ್ ಕಾಮತ್ ಅವರ ಆಪ್ತರಾಗಿರುವ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಆದಾರ್ ಪೂನವಾಲಾ ಕೂಡ ಆರ್‌ಸಿಬಿ ಫ್ರಾಂಚೈಸಿ ಖರೀದಿಗೆ ಆಸಕ್ತಿ ತೋರಿದ್ದಾರೆ. ಹೀಗಾಗಿ ನಿಖಿಲ್ ಕಾಮತ್, ರಂಜನ್ ಪೈ ಮತ್ತು ಆದಾರ್ ಪೂನವಾಲಾ ತ್ರಯ ಒಟ್ಟಾಗಿ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಭಾಗವಹಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯ ಸಹ-ಮಾಲೀಕರಾದ ಪಾರ್ಥ್ ಜಿಂದಾಲ್ ಅವರ ಜೆಎಸ್‌ಡಬ್ಲ್ಯೂ ಗ್ರೂಪ್ ಕೂಡ ಆರ್‌ಸಿಬಿ ಫ್ರಾಂಚೈಸಿಗಾಗಿ ಕಣ್ಣು ಹಾಯಿಸಿದೆ. ಪಾರ್ಥ್ ಜಿಂದಾಲ್ ನೇತೃತ್ವದ ಜೆಎಸ್‌ಡಬ್ಲ್ಯೂ ತಂಡ ಈ ಬಾರಿ ಬಲಿಷ್ಠ ಬಿಡ್ಡಿಂಗ್ ಮಾಡಲು ಸಿದ್ಧವಾಗಿದೆ ಎಂದು ವರದಿಯಾಗಿದೆ.

ಜೊತೆಗೆ ದೇವಯಾನಿ ಇಂಟರ್‌ನ್ಯಾಷನಲ್ ಗ್ರೂಪ್ (ರವಿಕಾಂತ್ ಜೈಪುರಿಯಾ) ಮತ್ತು ಅಮೆರಿಕದ ಖಾಸಗಿ ಹೂಡಿಕೆ ಕಂಪೆನಿಯೂ ಆರ್‌ಸಿಬಿ ಫ್ರಾಂಚೈಸಿ ಖರೀದಿಗೆ ಆಸಕ್ತಿ ತೋರಿವೆ. ಈ ಅಮೆರಿಕನ್ ಕಂಪೆನಿ ಪ್ರಸ್ತುತ ಡಿಯಾಜಿಯೊ ಸಂಸ್ಥೆಯೊಂದಿಗೆ ಮಾತುಕತೆ ನಡೆಸುತ್ತಿರುವುದಾಗಿ ವರದಿಯಾಗಿದೆ.