Gadag: 6 ಗಂಟೆ ಆಪರೇಷನ್ ನಡೆದರೂ ವ್ಯಕ್ತಿ ಸಾವು – ಅಂತ್ಯಕ್ರಿಯ ವೇಳೆ ಮರಳಿ ಬಂತು ಜೀವ!!

Gadaga: ಆಸ್ಪತ್ರೆಯಲ್ಲಿ ವೈದ್ಯರು ಸತ್ತಿದ್ದಾರೆ ಎಂದು ತಿಳಿಸಿದ ವ್ಯಕ್ತಿಗಳು ಅಂತ್ಯಕ್ರಿಯ ವೇಳೆ ಎದ್ದು ಕುಳಿತಂತಹ ಅನೇಕ ಘಟನೆಗಳನ್ನು ನಾವು ನೋಡಬಹುದು. ಅಂತೆಯೇ ಇದೀಗ ಗದಗದಲ್ಲಿ ಇಂಥದ್ದೇ ಒಂದು ಬಲು ಅಪರೂಪದ ಘಟನೆ ನಡೆದಿದೆ.

ಹೌದು, ಗದಗ ಜಿಲ್ಲೆಯ ಬೆಟಗೇರಿಯಲ್ಲಿ ನಿವಾಸಿ 38 ವರ್ಷದ ನಾರಾಯಣ ಹೊನ್ನಲ್ ಪಿತ್ತಕೋಶ ಸಮಸ್ಯೆಯಿಂದ ಬಳಲುತ್ತಿದ್ದರು ಅವರನ್ನು ಧಾರವಾಡ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಸುಮಾರು 6 ಗಂಟೆಗಳ ಕಾಲ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿದ್ದರು. ಆದರೆ ಶಸ್ತ್ರಚಿಕಿತ್ಸೆ ಫಲಕಾರಿಯಾಗದೇ ನಾರಾಯಣ ಮೃತಪಟ್ಟಿದ್ದರು ಎಂದು ವೈದ್ಯರು ಮಾಹಿತಿ ನೀಡಿದ್ದರು.ಬಳಿಕ ಕುಟುಂಬಸ್ಥರು ಗದಗ ಜಿಲ್ಲೆಯಲ್ಲಿ ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಂಡಿದ್ದರು.
ನಾರಾಯಣ ಅವರ ದೇಹವನ್ನು ಆಸ್ಪತ್ರೆಯಿಂದ ಆಂಬ್ಯುಲೆನ್ಸ್ ಮೂಲಕ ಮನೆಗೆ ತಂದಿದ್ದಾರೆ. ಆದರೆ ಮನೆಗೆ ಬರುತ್ತಿದ್ದಂತೆ ನಾರಾಯಣ ಅವರು ಮತ್ತೆ ಉಸಿರಾಡಿ, ಕಣ್ಣು ಬಿಟ್ಟಿದ್ದಾರೆ. ಇದನ್ನು ಕಂಡು ಕುಟುಂಬಸ್ಥರು ಆಶ್ಚರ್ಯವಾಗಿದ್ದಾರೆ. ಕೂಡಲೇ ಬೆಟಗೇರಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಸದ್ಯ ಚಿಕಿತ್ಸೆ ಮುಂದುವರಿದಿದೆ. ಆದರೆ ಈಗ ಮತ್ತೆ ಹುಟ್ಟಿ ಬಾ, ಆತ್ಮಕ್ಕೆ ಶಾಂತಿ ಸಿಗಲಿ, ರಿಪ್, ಭಾವಪೂರ್ಣ ಶ್ರದ್ಧಾಂಜಲಿ ಅಂತೆಲ್ಲಾ ಹಾಕಿದ್ದ ಬ್ಯಾನರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಿದೆ.
Comments are closed.