Gujarat : ಅಮ್ಮನ ಆಸೆ ಈಡೇರಿಸಲು ಇಡೀ ಊರಿನ ರೈತರ ಸಾಲ ತೀರಿಸಿದ ಉದ್ಯಮಿ!!

Share the Article

Gujarat : ಸ್ವರ್ಗಸ್ಥರಾದ ತನ್ನ ತಾಯಿಯ ಆಸೆಯನ್ನು ಈಡೇರಿಸಲು ಉದ್ಯಮಿಯೊಬ್ಬರು ತನ್ನ ಇಡೀ ಊರಿನ ರೈತರ ಸಾಲವನ್ನು ತೀರಿಸಿದ್ದಾರೆ.

ಹೌದು, ಗುಜರಾತ್​ನ ಅಮ್ರೇಲಿ ಜಿಲ್ಲೆಯ ಉದ್ಯಮಿ ಬಾಬುಭಾಯ್ ಜೀರಾವಾಲ (Babubhai Jirawala)ಅಮರೇಲಿ ಜಿಲ್ಲೆಯ ಸವರಕುಂಡ್ಲ ತಾಲೂಕಿನ ಜೀರಾ ಗ್ರಾಮದ ಬಾಬುಭಾಯ್ ಜೀರಾವಾಲ ಅವರು ಒಟ್ಟು 290 ರೈತರನ್ನು ಸಾಲಮುಕ್ತರನ್ನಾಗಿಸಿದ್ದಾರೆ.

ಅವರು ಸ್ವರ್ಗಸ್ಥರಾದ ತನ್ನ ತಾಯಿಯನ್ನು ಖುಷಿಪಡಿಸಲು ತಮ್ಮ ಊರಿನ ಎಲ್ಲಾ ಜನರ ಬ್ಯಾಂಕ್ ಸಾಲವನ್ನು ತೀರಿಸಿದ್ದು, 30 ವರ್ಷಗಳಿಂದ ಬ್ಯಾಂಕಿಗೆ ಊರಿನ ಜನರು ಅಡಮಾನವಾಗಿ ಇಟ್ಟಿದ್ದ ಜಮೀನು ಪತ್ರವನ್ನು ಅವರಿಗೆ ಮರಳಿ ಸಿಗುವಂತೆ ಮಾಡಿದ್ದಾರೆ.

ತಮ್ಮ ಊರಿನ ಜನರು ಸಾಲದ ಕಾರಣದಿಂದ ಕಷ್ಟಪಡುವುದನ್ನು ಕಂಡು ಬಾಬುಭಾಯ್ ಜೀರಾವಾಲ ಅವರ ತಾಯಿ ಸದಾ ಕೊರಗುತ್ತಿದ್ದರಂತೆ. ತಮ್ಮ ಬಳಿ ಇರುವ ಒಡವೆಗಳನ್ನು ಮಾರಿಯಾದರೂ ಊರಿನವರ ಸಾಲ ತೀರಿಸಬೇಕೆಂಬುದು ಅವರ ಆಸೆಯಾಗಿತ್ತು. ಇದು ಸಾಧ್ಯವಾಗುವಷ್ಟರಲ್ಲಿ ಅವರು ಸ್ವರ್ಗಸ್ಥರಾಗಿ ಹೋಗಿದ್ದರು. ಇದೀಗ ಬಾಬುಭಾಯ್ ಜೀರಾವಾಲ ಅವರು ತಮ್ಮ ತಾಯಿಯ ಆಸೆಯನ್ನು ಈಡೇರಿಸಿದ್ದಾರೆ. ಅವರ ಪುಣ್ಯತಿಥಿಯಂದೇ ಊರಿನವರ ಆ ಸಾಲವನ್ನು ಒಮ್ಮೆಗೇ ತೀರಿಸಿದ್ದಾರೆ.

Comments are closed.