Bangalore: ವಾಕಿಂಗ್‌ಗೆ ಹೋಗಿದ್ದ ಮಹಿಳೆಗೆ ಖಾಸಗಿ ಅಂಗ ತೋರಿಸಿ ಅಸಭ್ಯ ವರ್ತನೆ ಮಾಡಿದ ವ್ಯಕ್ತಿ

Bangalore: ನಾಯಿ ಜೊತೆ ವಾಕಿಂಗ್ ಹೋಗಿದ್ದ ಮಹಿಳೆಯರಿಗೆ ವ್ಯಕ್ತಿಯೊಬ್ಬ ಅಸಭ್ಯ ವರ್ತನೆ ಮಾಡಿ ಲೈಂಗಿಕ ಕಿರುಕುಳ ನೀಡಲು ಯತ್ನ ಮಾಡಿದ್ದಾನೆ.

33 ವರ್ಷದ ಮಹಿಳೆಯೊಬ್ಬರು ಇಂದಿರಾನಗರ ನಿವಾಸಿಯಾಗಿದ್ದು, ಇದೀಗ ಈ ಕುರಿತು ಇಂದಿರಾನಗರ ಠಾಣೆ ಪೊಲೀಸರಿಗೆ ದೂರನ್ನು ನೀಡಿದ್ದಾರೆ. ಇವರು ಇತ್ತೀಚೆಗೆ ನಾಯಿಯನ್ನು ಕರೆದುಕೊಂಡು ದೊಮ್ಮಲೂರು ಎರಡನೇ ಹಂತದ ಐದನೇ ಮುಖ್ಯ ರಸ್ತೆಗೆ ವಾಕಿಂಗ್ ಕರೆದುಕೊಂಡು ಹೋಗಿದ್ದರು. ಈ ವೇಳೆ ಹಿಂದಿನಿಂದ ಅಪರಿಚಿತ ವ್ಯಕ್ತಿ ಕರೆದಿದ್ದು, ಹಿಂದಿರುಗಿ ನೋಡಿದಾಗ 30 ವರ್ಷದ ವ್ಯಕ್ತಿ ತನ್ನ ಖಾಸಗಿ ಅಂಗ ಕೈಯಲ್ಲಿ ಹಿಡಿದು ಅಸಭ್ಯವಾಗಿ ವರ್ತಿಸಿದ್ದಾನೆ.
ಮಹಿಳೆ ಆತಂಕಗೊಂಡಿದ್ದು, ತನ್ನ ಮನೆಗೆ ಓಡಿ ಹೋಗಿದ್ದು, ತನ್ನ ಸಹೋದರಿ ಜೊತೆ ಚರ್ಚಿಸಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿದ ಪೊಲೀಸರು ಸಿಸಿ ಕ್ಯಾಮೆರಾಗಳ ಪರಿಶೀಲನೆ ಮಾಡಿ ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.
Comments are closed.