Whatsapp: ವಾಟ್ಸ್​ಆ್ಯಪ್‌ನಲ್ಲಿ ಫೇಸ್‌ಬುಕ್ ನಂತೆ ಕವರ್ ಫೋಟೋ ಲಭ್ಯ

Share the Article

 

Whatsapp: ಮೆಸೇಜಿಂಗ್ ಆ್ಯಪ್ ಆದ ವಾಟ್ಸ್​ಆ್ಯಪ್ (WhatsApp) ತನ್ನ ಬಳಕೆದಾರರಿಗೆ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಿದೆ. ಇದರ ಭಾಗವಾಗಿ, ಶೀಘ್ರದಲ್ಲೇ ವಾಟ್ಸ್​ಆ್ಯಪ್‌ನಲ್ಲಿ ಫೇಸ್‌ಬುಕ್ ಮತ್ತು ಲಿಂಕ್ಡ್‌ಇನ್‌ನಂತಹ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಇರುವಂತೆಯೇ, ಬಳಕೆದಾರರು ತಮ್ಮ ಪ್ರೊಫೈಲ್‌ಗೆ ಕವರ್ ಫೋಟೋವನ್ನು ಸೇರಿಸುವ ವೈಶಿಷ್ಟ್ಯವನ್ನು ತರಲು ಸಿದ್ಧತೆ ನಡೆಸುತ್ತಿದೆ.

ಈ ಹೊಸ ವೈಶಿಷ್ಟ್ಯದ ಮೂಲಕ, ವಾಟ್ಸ್​ಆ್ಯಪ್ ಬಳಕೆದಾರರು ತಮ್ಮ ಪ್ರೊಫೈಲ್ ಫೋಟೋ ಜೊತೆಗೆ ಪ್ರೊಫೈಲ್‌ನ ಮೇಲ್ಭಾಗದಲ್ಲಿ ಒಂದು ದೊಡ್ಡ ಚಿತ್ರವನ್ನು ಪ್ರದರ್ಶಿಸಲು ಇನ್ನೊಂದು ಅವಕಾಶವನ್ನು ಪಡೆಯಲಿದ್ದಾರೆ. ಪ್ರಸ್ತುತ ಪ್ರೊಫೈಲ್ ಚಿತ್ರ, ಸ್ಟೇಟಸ್ ಅಪ್‌ಡೇಟ್ಸ್‌ಗಳಂತೆ, ಕವರ್ ಫೋಟೋ ಕೂಡ ಬಳಕೆದಾರರಿಗೆ ತಮ್ಮ ವ್ಯಕ್ತಿತ್ವವನ್ನು ವ್ಯಕ್ತಪಡಿಸಲು ಅಥವಾ ಪ್ರಮುಖ ವಿಷಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಬಳಕೆದಾರರು ತಮ್ಮ ಇಚ್ಛೆಗೆ ಅನುಗುಣವಾಗಿ, ಈ ಕವರ್ ಫೋಟೋವನ್ನು ಯಾರು ನೋಡಬಹುದು ಎಂಬುದನ್ನು ನಿರ್ಧರಿಸಲು ಪ್ರೈವಸಿ ಸೆಟ್ಟಿಂಗ್ಸ್‌ಗಳಲ್ಲಿ ಆಯ್ಕೆಗಳನ್ನು ನೀಡಲಾಗುತ್ತದೆ:

1. Everyone (ಎಲ್ಲರಿಗೂ): ಈ ಆಯ್ಕೆ ಮಾಡಿದರೆ, ನಿಮ್ಮ ಕಾಂಟ್ಯಾಕ್ಟ್ ಲಿಸ್ಟ್‌ನಲ್ಲಿರುವವರು ಮತ್ತು ಇಲ್ಲದವರು ಸೇರಿದಂತೆ ಎಲ್ಲಾ ವಾಟ್ಸ್​ಆ್ಯಪ್ ಬಳಕೆದಾರರಿಗೆ ನಿಮ್ಮ ಕವರ್ ಫೋಟೋ ಗೋಚರಿಸುತ್ತದೆ.

2. My Contacts (ನನ್ನ ಸಂಪರ್ಕಗಳು): ಈ ಆಯ್ಕೆ ಮಾಡಿದರೆ, ನಿಮ್ಮ ಫೋನ್‌ನ ಕಾಂಟ್ಯಾಕ್ಟ್ ಲಿಸ್ಟ್‌ನಲ್ಲಿರುವ ಸ್ನೇಹಿತರು ಮತ್ತು ಸಂಪರ್ಕಗಳು ಮಾತ್ರ ಕವರ್ ಫೋಟೋವನ್ನು ವೀಕ್ಷಿಸಬಹುದು.

3. Nobody (ಯಾರಿಗೂ ಇಲ್ಲ): ಈ ಆಯ್ಕೆ ಮಾಡಿದರೆ, ಕವರ್ ಫೋಟೋ ಯಾರಿಗೂ ಗೋಚರಿಸುವುದಿಲ್ಲ.

ಕವರ್ ಫೋಟೋ ಸೇರಿಸುವ ಆಯ್ಕೆ ಸದ್ಯದಲ್ಲೇ ವಾಟ್ಸ್​ಆ್ಯಪ್‌ಗೆ ಬರಲಿದ್ದು, ಬಳಕೆದಾರರಿಗೆ ತಮ್ಮ ಪ್ರೊಫೈಲ್ ಅನ್ನು ಇನ್ನಷ್ಟು ಆಕರ್ಷಕವಾಗಿ ಮತ್ತು ವೈಯಕ್ತಿಕವಾಗಿರಿಸಿಕೊಳ್ಳಲು ಅನುವು ಮಾಡಿಕೊಡಲಿದೆ.

Comments are closed.