LPG ಗ್ರಾಹಕರಿಗೆ ಹೊಸ ರೂಲ್ಸ್ – ಮಿಸ್ ಮಾಡಿದ್ರೆ ಈ ತಿಂಗಳಿಂದ ಸಿಗಲ್ಲ ಸಬ್ಸಿಡಿ!!

Share the Article

LPG: ಕೇಂದ್ರ ಸರ್ಕಾರವು ಎಲ್‍ಪಿಜಿ ಗ್ರಾಹಕರಿಗೆ ಹೊಸ ನಿಯಮವನ್ನು ಜಾರಿಗೊಳಿಸಿದ್ದು ಇನ್ನು ಮುಂದೆ ಪ್ರತಿ ವರ್ಷವೂ ಕೂಡ KYC ಮಾಡಿಸಬೇಕೆಂದು ತಿಳಿಸಿದೆ.

ಹೌದು, ಹೌದು ಎಲ್ಪಿಜಿ ಗ್ರಾಹಕರು ಇನ್ನು ಮುಂದೆ ಪ್ರತಿ ವರ್ಷವೂ ಕಡ್ಡಾಯವಾಗಿ ಕೆ ವೈ ಸಿ ಮಾಡಿಸಬೇಕೆಂದು ಕೇಂದ್ರ ಸರ್ಕಾರವು ಖಡಕ್ಕಾಗಿ ಸೂಚನೆ ನೀಡಿದೆ. ಒಂದು ವೇಳೆ ಯಾರು ಮಾಡಿಸುವುದಿಲ್ಲವೋ ಅಂತವರ ಸಬ್ಸಿಡಿಗೆ ಕತ್ತರಿ ಹಾಕುವ ಚಿಂತನೆಯನ್ನು ಕೂಡ ನಡೆಸಿದೆ. ಇನ್ನು ಈ ನಿಯಮ ಇದೆ ವರ್ಷದಿಂದ ಜಾರಿಗೆ ಬರುವುದಾಗಿ ತೈಲ ಕಂಪನಿಗಳು ಕೂಡ ಘೋಷಿಸಿದೆ.

ಗ್ರಾಹಕರ ಖಾತೆಗೆ ಬರುವ ಸಬ್ಸಿಡಿ ಹಣವನ್ನು ಪಡೆಯುವುದನ್ನು ಮುಂದುವರೆಸಬೇಕಿದ್ದಲ್ಲಿ 2025-26ರ ಹಣಕಾಸು ವರ್ಷಕ್ಕೆ ಸಂಬಂಧಿಸಿದಂತೆ ಮಾ. 31ರೊಳಗೆ ಇ-ಕೆವೈಸಿ ಕಡ್ಡಾಯವಾಗಿ ಪೂರ್ಣಗೊಳಿಸಬೇಕು. ಹಾಗಿದ್ದಲ್ಲಿ ಮಾತ್ರ ಸಬ್ಸಿಡಿ ಹಣ ಸಿಗುತ್ತದೆ. ಹೀಗಾಗಿ ಫಲಾನುಭವಿಗಳು ತಾವು ಬಳಸುವ ಗ್ಯಾಸ್ ಕಂಪನಿಯನ್ನು ಸಂಪರ್ಕಿಸಿ ದೃಢೀಕರಣ ಮಾಡಿಸಬಹುದು ಎನ್ನಲಾಗಿದೆ.

Comments are closed.