Pak Team : ಚೇಂಜ್ ಆದ ಪಾಕ್ ಕ್ರಿಕೆಟ್ ಟೀಮ್ ಜೆರ್ಸಿ – ಗ್ರೀನ್ ಇದ್ದದ್ದು ಈಗ ಪಿಂಕ್!!

Pak Team : ಇದುವರೆಗೂ ಹಸಿರು ಬಣ್ಣದ ಜೆರ್ಸಿಯೊಂದಿಗೆ ಕಣಕ್ಕಿಳಿಯುತ್ತಿದ್ದ ಪಾಕಿಸ್ತಾನದ ಕ್ರಿಕೆಟ್ ತಂಡವು ಇದೀಗ ಮೊದಲ ಬಾರಿಗೆ ಗುಲಾಬಿ ಬಣ್ಣದ ಜೆರ್ಸಿಯನ್ನು ಹಾಕಿಕೊಂಡು ಕ್ರೀಡಾಂಗಣದಲ್ಲಿ ಸೆಣೆಸಲು ಸಿದ್ಧವಾಗಿ ನಿಂತಿದೆ..

ಹೌದು, ಪಾಕಿಸ್ತಾನ್ ಮತ್ತು ಸೌತ್ ಆಫ್ರಿಕಾ ನಡುವಣ ಟಿ20 ಸರಣಿಯು ಇಂದಿನಿಂದ (ಅ.28) ಶುರುವಾಗಲಿದೆ. ಮೂರು ಪಂದ್ಯಗಳ ಈ ಸರಣಿಯ ಮೊದಲ ಮ್ಯಾಚ್ನಲ್ಲಿ ಪಾಕಿಸ್ತಾನ್ ತಂಡವು ಪಿಂಕ್ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ.
ಪಾಕಿಸ್ತಾನ್ ತಂಡವು ತನ್ನ ಜೆರ್ಸಿ ಬಣ್ಣ ಬದಲಿಸಲು ಮುಖ್ಯ ಕಾರಣ #PINKtober ಅಭಿಯಾನ. ಅಂದರೆ ಸ್ತನ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಪಾಕಿಸ್ತಾನ್ ಆಟಗಾರರು ಪಿಂಕ್ ಜೆರ್ಸಿಯಲ್ಲಿ ಕಣಕ್ಕಿಳಿಯಲಿದ್ದಾರೆ.
Comments are closed.