Rajani: ‘ಒಳ್ಳೆಯವರ ಜೊತೆ ಮಲಗಿದ್ರೆ ಒಳ್ಳೊಳ್ಳೆ ಅವಕಾಶಗಳು ಸಿಗುತ್ತೆ’ – ಖ್ಯಾತ ನಟಿ ರಜನಿ ಅಚ್ಚರಿ ಹೇಳಿಕೆ

Share the Article

Rajani: ಒಳ್ಳೆಯರ ಜೊತೆ ಮಲಗಿದರೆ ಒಳ್ಳೊಳ್ಳೆ ಅವಕಾಶಗಳು ದೊರಕುತ್ತವೆ ಎಂದು ಅಮೃತವರ್ಷಿಣಿ ಧಾರಾವಾಹಿಯ ನಟಿ ರಜಿನಿ ಅವರು ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ.

ಚಿತ್ರರಂಗ ಅಥವಾ ಕಿರುತೆರೆ ರಂಗದಲ್ಲಿ ನಟಿಯರ ಮುಗ್ಧ ಮನಸ್ಸುಗಳನ್ನು ಅನೇಕ ವ್ಯಕ್ತಿಗಳು ದುರುಪಯೋಗ ಮಾಡಿಕೊಂಡು ಅವರನ್ನು ಮಂಚಕ್ಕೆ ಕರೆಯುತ್ತಾರೆ. ಕೆಲವೊಮ್ಮೆ ನೇರವಾಗಿ ಆಮಂತ್ರಣ ಕೊಟ್ಟು ಕರೆದರೆ ಮತ್ತೊಮ್ಮೆ ಪರೋಕ್ಷವಾಗಿ ಬರಮಾಡಿಕೊಳ್ಳುತ್ತಾರೆ. ಇನ್ನು ಕೆಲವರು ತಾವಾಗಿಯೇ ಮಂಚವೇರುವುದು ಉಂಟು.

ಹೌದು, ಅಸಲಿಗೆ ಒಂದು ತಿಂಗಳ ಹಿಂದೆ ”ರಾಜೇಶ್ ಗೌಡ” ಅವರ ಯುಟ್ಯೂಬ್ ಚಾನೆಲ್‌ಗೆ ರಜನಿ ಸಂದರ್ಶನ ನೀಡಿದ್ದರು. ಈ ಸಂದರ್ಶನದಲ್ಲಿ ಹಲವಾರು ವಿಚಾರಗಳ ಕುರಿತು ರಜನಿ ಮಾತನಾಡಿದ್ದರು. ತಮಗಾದ ಕಾಸ್ಟಿಂಗ್ ಕೌಚ್ ಅನುಭವ ಹಂಚಿಕೊಂಡಿದ್ದಾರೆ.

ಅಮೃತವರ್ಷಿಣಿ” ಮುಗಿದ ನಂತರ ನನಗೆ ಆಫರ್ಸ್‌ ಬರಲಿಲ್ಲ ಎಂದು ಹೇಳಿರುವ ರಜನಿ, ಆಗ ನಾನು ಸುಮಾರು ಕಡೆ ಟ್ರೈ ಮಾಡಿದೆ, ಅದು ಕೂಡ ವರ್ಕೌಟ್‌ ಆಗಲಿಲ್ಲ. ಇನ್ನೊಂದು ಕಡೆ ನನ್ನ ಪರಿಚಯದವರ ಕಡೆಯಿಂದ ಲುಕ್ ಟೆಸ್ಟ್‌ಗೆ ಹೋಗಿದ್ದೇ,ಅವರು ನನಗೆ ವಿವರಿಸಿದರು. ನೀವು ಕಮಿಟ್‌ಮೆಂಟ್‌ಗೆ ಒಪ್ಪಿಕೊಂಡರೆ, ನಿಮಗೆ ಒಳ್ಳೊಳ್ಳೆ ಪ್ರಾಜೆಕ್ಟ್‌ಗಳು ಸಿಗುತ್ತೆ, ಅಂದರೆ ನೀವು ಕಮಿಟ್ ಆದರೂ ಕೂಡ ಒಳ್ಳೆಯವರ ಜೊತೆ ಕಮಿಟ್‌ ಆಗಬೇಕು. ಖಾಂಜಿ ಪಿಂಜಿ ಅವರ ಜೊತೆ ಆದರೆ ವರ್ಕೌಟ್ ಆಗಲ್ಲ. ಒಳ್ಳೆಯವರ ಜೊತೆ ಕಮಿಟ್ ಆದರೆ ನಿಮಗೆ ಆದರೆ ಒಂದೊಳ್ಳೆ ಸೀರಿಯಲ್‌ ಸಿಗುತ್ತೆ ಎಂದು ಅವರು ಹೇಳಿದರು. ಅದೇ ವಾಸ್ತವ ಎಂದು ಕೂಡ ಹೇಳಿದರು ಎಂದು ಹೇಳಿದ್ದಾರೆ.

Comments are closed.