Intresting Fact: ಮೊದಲ ಬಾರಿ ವಿಮಾನ ಹಾರಾಟಕ್ಕೆ ಸಜ್ಜದಾಗ ಸತ್ತ ಕೋಳಿಗಳನ್ನು ಎಸೆಯುವುದೇಕೆ?


Intresting Fact: ವಿಮಾನ ಹಾರಾಟ ನಡೆಸುವ ಸಂದರ್ಭದಲ್ಲಿ ಸಾಕಷ್ಟು ರೀತಿಯ ಎಚ್ಚರಿಕೆಗಳನ್ನು ವಹಿಸಲಾಗುತ್ತದೆ. ಅದರಲ್ಲೂ ಮೊದಲ ಬಾರಿಗೆ ವಿಮಾನ ಹಾರಾಟ ನಡೆಸುವ ಸಂದರ್ಭದಲ್ಲಿ ಅಂತೂ ಸಾಕಷ್ಟು ಮುನ್ನೆಚ್ಚರಿಕೆಯ ಕ್ರಮಗಳನ್ನು ವಹಿಸಬೇಕಾಗುತ್ತದೆ. ಯಾವುದಾದರೂ ತಾಂತ್ರಿಕ ದೋಷಗಳಿವೆಯೇ ಎಂದು ಕೂಲಂಕುಶವಾಗಿ ಪರಿಶೀಲಿಸಬೇಕಾಗುತ್ತದೆ. ಅವುಗಳಲ್ಲಿ ವಿಮಾನವು (Flight) ಟೇಕ್ ಆಫ್ ಆಗುವ ಮೊದಲು ಸತ್ತ ಕೋಳಿಗಳನ್ನು ಎಂಜಿನ್‌ಗೆ ಏಕೆ ಎಸೆಯುವುದು ಕೂಡಾ ಒಂದು. ಆದರೆ ಹೆಚ್ಚಿನವರಿಗೆ ಹೀಗೆ ಸತ್ತ ಕೋಳಿಗಳನ್ನು ಎಂಜಿನ್ ಒಳಗೆ ಏಕೆ ಎಸೆಯುತ್ತಾರೆ, ಇದು ಎಂತಹ ಪರೀಕ್ಷೆ ಎಂಬುದರ ಬಗ್ಗೆ ಗೊತ್ತಿಲ್ಲ. ಹಾಗಿದ್ರೆ ಈ ಸ್ಟೋರಿ ನಿಮಗಾಗಿ.
ಕೇಳುವುದಕ್ಕೆ ವಿಚಿತ್ರ ಎನಿಸಿದರು ಇದು ಸತ್ಯ. ಜಗತ್ತಿನಲ್ಲಿ ನಡೆಯುವ ಕೆಲವೊಂದು ಆಚರಣೆಗಳು ಕೇಳುವುದಕ್ಕೆ ವಿಚಿತ್ರ ಎನಿಸಿದರು. ಅದರ ಹಿಂದೆ ಕೆಲ ವೈಜ್ಞಾನಿಕ ಕಾರಣಗಳಿರುತ್ತವೆ. ಅದೇ ರೀತಿ ಬಹುತೇಕ ವಿಮಾನಗಳು ಹಾರಾಟಕ್ಕೆ ಸಿದ್ಧವಾಗುವ ಮೊದಲು ಸತ್ತ ಕೋಳಿಗಳನ್ನು ವಿಮಾನಗಳ ಮೇಲೆ ಎಸೆಯಲಾಗುತ್ತದೆ.
ಕೆಲವೊಂದು ಬಾರಿ ವಿಮಾನ ಟೇಕ್ ಆಫ್ ಆಗುವಾಗ ಅಥವಾ ಲ್ಯಾಂಡಿಂಗ್ ಆಗುವಾಗ ಪಕ್ಷಿಗಳು ವಿಮಾನಕ್ಕೆ ಡಿಕ್ಕಿ ಹೊಡೆಯುವ ಸಾಧ್ಯತೆ ಇರುತ್ತದೆ. ಒಂದು ಸಣ್ಣ ಹಕ್ಕಿ ವಿಮಾನಕ್ಕೆ ಡಿಕ್ಕಿ ಹೊಡೆದರೂ ಇದರಿಂದ ದೊಡ್ಡ ಮಟ್ಟದ ಹಾನಿ ಉಂಟಾಗುತ್ತದೆ. ವಿಮಾನ ಟೇಕ್ ಆಫ್ ಅಥವಾ ಲ್ಯಾಂಡಿಂಗ್ ಆಗುವಾಗ ಅದರ ವೇಗ 350 ರಿಂದ 500 ಕಿ.ಮೀ ಇರುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಒಂದು ಸಣ್ಣ ಹಕ್ಕಿ ಡಿಕ್ಕಿ ಹೊಡೆದರೂ ವಿಮಾನ ವಿಂಡ್ ಶೀಲ್ಡ್ ಮುರಿಯುವ ಸಾಧ್ಯತೆ ಇರುತ್ತವೆ, ಇನ್ನೂ ಕೆಲವು ಅಪಾಯಗಳು ಉಂಟಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ವಿಮಾನವು ಹಾರಾಟದ ಸಮಯದಲ್ಲಿ ಪಕ್ಷಿಗಳ ಡಿಕ್ಕಿಯ ಪರಿಣಾಮವನ್ನು ತಡೆದುಕೊಳ್ಳುತ್ತದೆಯೇ ಎಂದು ಪರೀಕ್ಷಿಸಲು ಈ ಚಿಕನ್ ಗನ್ ಪರೀಕ್ಷೆ ನಡೆಸಲಾಗುತ್ತದೆ. 500 ಕಿ.ಮೀ. ವೇಗದಲ್ಲಿ ವಿಮಾನಗಳು ಹಾರುತ್ತಿರುವಾಗ ಈ ಸತ್ತ ಕೋಳಿಗಳನ್ನು ಅವುಗಳ ಮೇಲೆ ಎಸೆಯಲಾಗುತ್ತದೆ.
ಒಂದು ಹಕ್ಕಿ ಎಂಜಿನ್ ಒಳಗೆ ಪ್ರವೇಶಿಸಿದರೆ ಅಥವಾ ಫ್ಲೈಟ್‌ಗೆ ಡಿಕ್ಕಿ ಹೊಡೆದರೆ, ವಿಮಾನದ ಎಂಜಿನ್ ನಿಂತು ಹೋಗುವ, ವಿಮಾನದಲ್ಲಿ ಬೆಂಕಿ ಕಾಣಿಸಿಕೊಳ್ಳುವುದು ಸೇರಿದಂತೆ ಒಂದಷ್ಟು ಅಪಾಯಗಳು ಸಂಭವಿಸುವ ಸಾಧ್ಯತೆ ಇರುತ್ತದೆ. ಅದಕ್ಕಾಗಿಯೇ ಪ್ರಪಂಚದಾದ್ಯಂತ ವಿಮಾನಯಾನ ಕಂಪೆನಿಗಳು ವಿಮಾನ ಹಾರಾಟಕ್ಕೂ ಮುನ್ನ ಫ್ಲೈಟ್ ಎಂಜಿನ್‌ಗೆ ಕೋಳಿಗಳನ್ನು ಎಸೆಯುತ್ತವೆ. ಇದನ್ನು ʼಚಿಕನ್ ಗನ್ ಟೆಸ್ಟ್ʼ ಅಂತ ಕರೆಯುತ್ತಾರೆ.
ಕೋಳಿಗಳನ್ನು ಏಕೆ ಬಳಸಲಾಗುತ್ತದೆ
ಸಾಮಾನ್ಯವಾಗಿ ಈ ಪ್ರಕ್ರಿಯೆಗೆ ಸತ್ತ ಕೋಳಿಗಳನ್ನು ಬಳಸಲಾಗುತ್ತದೆ ಏಕೆಂದರೆ ಅವುಗಳ ಗಾತ್ರ ಮತ್ತು ತೂಕವು ಹದ್ದುಗಳು, ಸೀಗಲ್‌ಗಳಂತಹ ವಿಮಾನಗಳು ಸಾಮಾನ್ಯವಾಗಿ ಎದುರಿಸುವ ಪಕ್ಷಿಗಳಿಗೆ ನಿಕಟವಾಗಿ ಹೊಂದಿಕೆಯಾಗುತ್ತದೆ. ಇದು ಹಕ್ಕಿಯ ಡಿಕ್ಕಿಯ ವಾಸ್ತವಿಕ ಸ್ಥಿತಿಯನ್ನು ಒದಗಿಸುತ್ತದೆ.
ಈ ಪರೀಕ್ಷೆ ಹೇಗೆ ನಡೆಯುತ್ತದೆ?
ವಿಮಾನ ಹಾರಾಟಕ್ಕೂ ಮುನ್ನ, ವಿಮಾನದ ಎಂಜಿನ್, ಕಾಕ್‌ಪಿಟ್ ವಿಂಡ್‌ಶೀಲ್ಡ್ ಮತ್ತು ರೆಕ್ಕೆಗಳನ್ನು ಬಲವಾದ ಚೌಕಟ್ಟಿನಲ್ಲಿ ಇರಿಸಲಾಗುತ್ತದೆ. ನಂತರ ಈ ಎಲ್ಲಾ ಭಾಗಗಳ ಸಾಮರ್ಥ್ಯವನ್ನು ಪರೀಕ್ಷಿಸಲಾಗುತ್ತದೆ. ವಿಮಾನದ ಹಾರಾಟದ ವೇಗಕ್ಕೆ ಹೋಲುವ ವ್ಯವಸ್ಥೆಗಳನ್ನು ಪ್ರಯೋಗಾಲಯದಲ್ಲಿ ಮಾಡಲಾಗುತ್ತದೆ. ನಂತರ ಸತ್ತ ಕೋಳಿ ಅಥವಾ ನಕಲಿ ಹಕ್ಕಿ ಇಲ್ಲವೆ ಜೆಲಾಟಿನ್ ಚೆಂಡುಗಳನ್ನು ಎಸೆದು ಈ ಪರೀಕ್ಷೆಯನ್ನು ಮಾಡಲಾಗುತ್ತದೆ. ಹೀಗೆ ಕೋಳಿಯನ್ನು ಎಂಜಿನ್‌ಗೆ ಎಸೆದ ಬಳಿಕ ಪ್ರತಿ ಕ್ಷಣವನ್ನು ವೀಡಿಯೊದಲ್ಲಿ ಎಚ್ಚರಿಕೆಯಿಂದ ವೀಕ್ಷಿಸಲಾಗುತ್ತದೆ.
Comments are closed.