Ration Card: APL ಗೆ ವರ್ಗಾವಣೆ ಆದವರಿಗೆ ಪುನಃ BPL ಕಾರ್ಡ್ ವಿತರಣೆ – ಸರ್ಕಾರದಿಂದ ನಿರ್ಧಾರ

Share the Article

 

Ration Card: ಇಂದು ರೇಷನ್ ಕಾರ್ಡ್ ಬಹು ಮುಖ್ಯ ದಾಖಲೆಗಳಲ್ಲಿ ಒಂದಾಗಿದೆ. ಸರ್ಕಾರದ ಯೋಜನೆಗಳಿಂದ ಹಿಡಿದು ಇತರ ಕಚೇರಿ ಕೆಲಸಗಳಲ್ಲಿಯೂ ಇದು ಮಹತ್ವದ ಪಾತ್ರವಹಿಸುತ್ತದೆ. ಒಟ್ಟಿನಲ್ಲಿ ಒಂದು ಕುಟುಂಬದ ಅಗತ್ಯತೆಗಳನ್ನು ಪೂರೈಸಲು ಇದು ಬೇಕೇ ಬೇಕು.  ಅದರಲ್ಲೂ ಬಿಪಿಎಲ್ ಕಾರ್ಡಿಗೆ ತುಂಬಾ ಮಹತ್ವವಿದೆ.

ಇಂದು ಅನೇಕ ಅನರ್ಹರು ಬಿಪಿಎಲ್ ಕಾರ್ಡ್ ಪಡೆಯುವ ಮೂಲಕ ನಿಜವಾಗಲೂ ಅರ್ಹರಾಗಿರುವವರ ಅವಕಾಶವನ್ನು ಕಿತ್ತುಕೊಳ್ಳುತ್ತಿದ್ದಾರೆ. ಆದರೆ ಇದೀಗ ಸರ್ಕಾರ ಇಂಥವರ ರೇಷನ್ ಕಾರ್ಡ್ ಅನ್ನು ರದ್ದು ಮಾಡಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಅನೇಕ ಅನರ್ಹರ ಬಿಪಿಎಲ್ ಕಾರ್ಡ್ ರದ್ದು ಆಗಿ ಅವರಿಗೆ ಎಪಿಎಲ್ ಕಾರ್ಡ್ ದೊರೆತಿದೆ. ಇದರ ನಡುವೆ ಕೆಲವು ಅರ್ಹರ ಬಿಪಿಎಲ್ ಕಾರ್ಡ್ ಕೂಡ ರದ್ದಾಗಿದೆ. ಹೀಗಾಗಿ ಸರ್ಕಾರ ಇವುಗಳ ಕುರಿತು ಪರಿಶೀಲನೆ ನಡೆಸಿ, ಅರ್ಹರಾಗಿದ್ದರೂ ಕೂಡ ಅವರಿಗೆ ಎಪಿಎಲ್ ಕಾರ್ಡ್ ದೊರೆತಿದ್ದರೆ ಅದನ್ನು ರದ್ದುಪಡಿಸಿ ಮತ್ತೆ ಬಿಪಿಎಲ್ ಕಾರ್ಡ್ ವಿತರಿಸಲು ಮುಂದಾಗಿದೆ.

 ಈ ಕುರಿತಾಗಿ ಆಹಾರ ಸಚಿವ ಮುನಿಯಪ್ಪ ಅವರು ಮಾಹಿತಿ ನೀಡಿದ್ದು ಅರ್ಹರು ಒಂದು ವೇಳೆ ಬಿಪಿಎಲ್ ನಿಂದ ಎಪಿಎಲ್ ಗೆ ವರ್ಗಾವಣೆಯಾಗಿದ್ದರೆ ಸಂಬಂಧಿಸಿದ ತಾಲೂಕಿನಲ್ಲಿ ತಹಸೀಲ್ದಾರರಿಗೆ ಭೇಟಿ ಮಾಡಿ ಮನವಿ ಸಲ್ಲಿಸಬೇಕು. ಅವರು ಪರಿಶೀಲನೆ ನಡೆಸಿ ಪುನಃ ಬಿಪಿಎಲ್ ಕಾರ್ಡ್ ವಿತರಿಸಲು ಕ್ರಮ ವಹಿಸುವರು ಎಂದರು.

Comments are closed.