PM Modi: ಚೀನಾದಲ್ಲಿ ಪ್ರಧಾನಿ ಮೋದಿ ಹತ್ಯೆಗೆ ದೊಡ್ಡ ಸಂಚು – ಕಾರಲ್ಲಿ ಕರೆದೊಯ್ದು ಪಾರು ಮಾಡಿದ ಪುಟಿನ್, ಸ್ಪೋಟಕ ಸತ್ಯ ಬಹಿರಂಗ

PM Modi : ಪ್ರಧಾನಿ ಮೋದಿ ಕಳೆದ ತಿಂಗಳು ಚೀನಾದಲ್ಲಿ ನಡೆದ ಶಾಂಘೈ ಸಹಕಾರ ಸಂಘದ ಸಭೆಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆಗೆ ಸಂಚು ನಡೆಸಲಾಗಿತ್ತು ಎಂಬ ಸ್ಫೋಟಕ ಮಾಹಿತಿ ಈಗ ಬಹಿರಂಗವಾಗಿದೆ. ಅಮೆರಿಕದ ಗುಪ್ತಚರ ಸಂಸ್ಥೆ CIA ವಿರುದ್ಧ ಇಂಥಹದ್ದೊಂದು ಆರೋಪ ಕೇಳಿಬರುತ್ತಿದ್ದು, ಅನೇಕ ಮಾಧ್ಯಮಗಳು ಈ ಕುರಿತಾಗಿ ವರದಿ ಮಾಡಿದೆ.

ಹೌದು, ಚೀನಾದಲ್ಲಿ ಪ್ರಧಾನಿ ಮೋದಿ ಹತ್ಯೆಗೆ ಭಾರೀ ಸಂಚು ನಡೆದಿತ್ತು ಎಂಬ ವಿಚಾರ ಇದೀಗ ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ಕಾರಣ ಢಾಕಾದಲ್ಲಿ ನಿಯೋಜಿಸಲಾಗಿದ್ದ ಅಮೆರಿಕದ ವಿಶೇಷ ಪಡೆಗಳ ಅಧಿಕಾರಿ ಟೆರೆನ್ಸ್ ಅರ್ವೆಲ್ಲೆ ಜಾಕ್ಸನ್ ಆಗಸ್ಟ್ 31 ರಂದು ಶವವಾಗಿ ಪತ್ತೆಯಾಗಿರುವುದು!! ಈ ವ್ಯಕ್ತಿಯನ್ನು ಅಮೆರಿಕ ಮ್ಯಾನ್ಮಾರ್ ನಲ್ಲಿ ಅರಾಕನ್ ಆರ್ಮಿಗೆ ಬಾಂಗ್ಲಾ ನೆರವು ನೀಡಲು ನಿಯೋಜಿಸುವ ನೆಪದಲ್ಲಿ ಸಕ್ರಿಯವಾಗಿರಿಸಿತ್ತು. ಈ ನಿಗೂಢ ಸಾವು ಸಿಐಎ ಹೆಜ್ಜೆಗುರುತು ಹಾಗೂ ಚೀನಾದಲ್ಲಿ ಮೋದಿ ಹತ್ಯೆಯ ಸಂಚಿನ ಯೋಜನೆಯನ್ನು ಬಿಚ್ಚಿಡುತ್ತಿದೆ ಎನ್ನಲಾಗಿದೆ.
ಚೀನಾದ ನೆಲದಲ್ಲಿ ಭಾರತದ ಪ್ರಧಾನಿಯನ್ನು ಹತ್ಯೆ ಮಾಡಿದರೆ, ಶಾಶ್ವತವಾಗಿ ಚೀನಾ- ಭಾರತವನ್ನು ದೂರ ಮಾಡುವ ಮತ್ತು ಭಾರತದಲ್ಲಿ ಈಗಿನ ದೃಢ ಸರ್ಕಾರವನ್ನು ತೆಗೆದು ಅರಾಜಕತೆ ಉಂಟುಮಾಡಿ ತನ್ನ ಮಾತು ಕೇಳುವ ಸರ್ಕಾರವನ್ನು ಸ್ಥಾಪಿಸಬಹುದು ಎಂಬುದು ಈ ಯೋಜನೆಯ ಹಿಂದಿನ ಲೆಕ್ಕಾಚಾರವಾಗಿತ್ತು. ಆದರೆ ರಷ್ಯಾ- ಭಾರತ ಜಂಟಿಯಾಗಿ ಈ ಲೆಕ್ಕಾಚಾರವನ್ನು ತಲೆಕೆಳಗೆ ಮಾಡಿದವು ಎಂದು ಹೇಳಲಾಗುತ್ತಿದೆ. ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡಲು ಬಂದಿದ್ದ ಏಜೆಂಟ್ ಅತ್ಯಂತ ನಿಗೂಢವಾಗಿ ಬಾಂಗ್ಲಾದೇಶದ ಹೊಟೆಲ್ನ’ಲ್ಲಿ ಸಾವಿಗೀಡಾಗಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಇದಕ್ಕೆ ಪೂರಕವೆಂಬಂತೆ ಚೀನಾದಲ್ಲಿ ನಡೆದ ಕೆಲವು ಘಟನೆಗಳು ಹೊಂದಾಣಿಕೆಯಾಗುತ್ತಿವೆ. ಪ್ರಧಾನಿ ಮೋದಿ ಇದ್ದ ಹೊಟೆಲ್ ಗೆ ರಷ್ಯಾ ಅಧ್ಯಕ್ಷ ಪುಟಿನ್ ದಿಢೀರ್ ಭೇಟಿ ನೀಡಿದ್ದು, ಯಾರಿಗೂ ಯವತ್ತೂ ಕಾಯದ ಪುಟಿನ್ ಮೋದಿಗಾಗಿ ಕಾದು ಅವರನ್ನು ತಮ್ಮ ಕಾರಿನಲ್ಲೇ ಶೃಂಗಸಭೆ ನಡೆಯುತ್ತಿದ್ದ ಸ್ಥಳಕ್ಕೆ ಒಟ್ಟಿಗೆ ಕರೆದೊಯ್ದಿದ್ದು, ಇವೆಲ್ಲವೂ ಹತ್ಯೆಯ ಸಂಚನ್ನು ವಿಫಲಗೊಳಿಸಿದ್ದ ಪ್ರತಿತಂತ್ರದ ಭಾಗವೆಂದು ವಿಶ್ಲೇಷಿಸಲಾಗುತ್ತಿದೆ.
ಇಷ್ಟೇ ಅಲ್ಲದೆ, ನವದೆಹಲಿಯಲ್ಲಿ ನಡೆದ ಸೆಮಿಕಾನ್ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದ್ದ ಮೋದಿ ಈ ಭಾಷಣದಲ್ಲಿ ಒಗಟಾಗಿ ಮಾತನಾಡಿದ್ದರು. “ನಾನು ಚೀನಾಕ್ಕೆ ಹೋಗಿದ್ದರಿಂದ ನೀವು ಚಪ್ಪಾಳೆ ತಟ್ಟುತ್ತಿದ್ದೀರಾ ಅಥವಾ ನಾನು ಹಿಂತಿರುಗಿದ್ದರಿಂದ ನೀವು ಚಪ್ಪಾಳೆ ತಟ್ಟುತ್ತಿದ್ದೀರಾ?” ಎಂದು ಪ್ರಧಾನಿ ಮೋದಿ ಗೂಢಾರ್ಥದಲ್ಲಿ ಕೇಳಿದ್ದರು. ವಿಶ್ಲೇಷಕರ ಪ್ರಕಾರ, ಪ್ರಧಾನಿ ಮೋದಿಯವರ ಈ ನಿಗೂಢ ಹೇಳಿಕೆಗಳು ಗಂಭೀರ ಸಂದೇಶವಾಗಿತ್ತು. ಇದು ಪ್ರಧಾನಿ ಎದುರಿಸುತ್ತಿರುವ ಜೀವ ಬೆದರಿಕೆಗಳ ಬಗ್ಗೆ ಸಂದೇಶಗಳನ್ನು ಒಳಗೊಂಡಿತ್ತು ಎಂದು ಹೇಳಲಾಗುತ್ತಿದೆ.
Comments are closed.