Women Assault: ಮಹಿಳೆಯನ್ನು ಅರೆನಗ್ನಗೊಳಿಸಿ, ತಲೆಗೂದಲು ಕತ್ತರಿಸಿ ಖಾರದ ಪುಡಿ ಎರಚಿ ಚಿತ್ರಹಿಂಸೆ ನೀಡಿ ವಿಕೃತಿ

Women Assault: ಮಹಿಳೆಯನ್ನು ಅರೆನಗ್ನಗೊಳಿಸಿ ಖಾರದಪುಡಿ ಎರಚಿ ಚಿತ್ರಹಿಂಸೆ ನೀಡಿದ ಅಮಾನವೀಯ ಘಟನೆಯೊಂದು ಯಾದಗಿರಿ ಜಿಲ್ಲೆ ಹುಣಸಗಿ ತಾಲೂಕಿನ ತಾಂಡಾವೊಂದರಲ್ಲಿ ನಡೆದಿದೆ.

ಕೆಂಭಾವಿ ಠಾಣೆಯಲ್ಲಿ ಈ ಕುರಿತು ದೂರು ದಾಖಲಾಗಿದೆ. ಈ ಸಂಬಂಧ ಇಬ್ಬರ ಬಂಧನವಾಗಿದ್ದು, ಉಳಿದವರ ಶೋಧ ಕಾರ್ಯ ನಡೆಯುತ್ತಿದೆ.
ಅನೈತಿಕ ಸಂಬಂಧದ ಆರೋಪ ಮಾಡಿರುವ ಸಂಬಂಧಿಕರು ಮಹಿಳೆಯ ಮೇಲೆ ರಾಕ್ಷಸ ರೀತಿ ವರ್ತಿಸಿದ್ದಾರೆ. ಅ.16 ರಂದು ಈ ಘಟನೆ ರಾತ್ರಿ 8 ಗಂಟೆಗೆ ನಡೆದಿದೆ. ಮಹಿಳೆ ಪತಿ ಹಾಗೂ ಅಳಿಯನ ಜೊತೆ ಮನೆಯಲ್ಲಿದ್ದ ಸಂದರ್ಭದಲ್ಲಿ ಕಬ್ಬಿಣದ ರಾಡು ಹಿಡಿದು ಮನೆಗೆ ಬಂದ ಸಂಬಂಧಿಕರು ಹಾಗೂ ಗ್ರಾಮದ ಕೆಲವರು ಅವಾಚ್ಯ ಪದಗಳ ನಿಂದನೆ ಮಾಡಿ, ಹಲ್ಲೆ ಮಾಡಿದ್ದಾರೆ. ತಲೆಗೂದಲು ಕತ್ತರಿಸಿ, ಬಟ್ಟೆ ಹರಿದು ಖಾರದ ಪುಡಿ ಎರಚಲಾಗಿದೆ. ನನಗೆ ಜೀವ ಬೆದರಿಕೆ ಇದೆ ಎಂದು ಸಂತ್ರಸ್ತ ಮಹಿಳೆ ದೂರಿದ್ದಾಳೆ.
ಕೆಂಭಾವಿ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ಇಬ್ಬರನ್ನು ಬಂಧನ ಮಾಡಲಾಗಿದೆ, ಉಳಿದವರ ಬಂಧನಕ್ಕೆ ತನಿಖೆ ನಡೆಯುತ್ತಿದೆ
Comments are closed.