Crime: ತಾಯಿ ಜೊತೆ ಮಲಗಿದ್ದ ಮಗು ಕದ್ದೊಯ್ದ ಮಹಿಳೆ ಬಂಧನ

Share the Article

Crime: ಆರು ತಿಂಗಳ ಗಂಡು ಮಗುವನ್ನು ಕದ್ದಯ್ಯುತ್ತಿದ್ದ ಮಹಿಳೆಯನ್ನು ರೈಲ್ವೇ ಪೊಲೀಸರು ಬಂಧಿಸಿ ಮಗುವನ್ನು ಪೋಷಕರಿಗೆ ಒಪ್ಪಿಸಿದ್ದಾರೆ.

ಬುಧವಾರ ರಾತ್ರಿ ಮಗುವಿನೊಂದಿಗೆ ಪೋಷಕರು ರೈಲ್ವೆ ನಿಲ್ದಾಣದ ಪ್ಲಾಟ್ ಫಾರಂ ಬಳಿ ಮಲಗಿದ್ದರು. ಈ ವೇಳೆ ಮಹಿಳೆಯೊಬ್ಬಳು ಮಗುವನ್ನು ಕದ್ದುಕೊಂಡು ಹೋಗಿದ್ದಳು.

ನಿದ್ರೆಯಿಂದ ಪೋಷಕರು ಎಚ್ಚರಗೊಂಡ ಮೇಲೆ ಮಗು ಕಾಣೆಯಾಗಿರುವುದು ಗೊತ್ತಾಗಿದೆ. ತಾಯಿಯ ಆಕ್ರಂದನ ಕಂಡ ರೈಲ್ವೆ ಪೊಲೀಸರು ವಿಚಾರಿಸಿದ್ದಾಗ ವಿಚಾರ ಬೆಳಕಿಗೆ ಬಂದಿದೆ.

ತಕ್ಷಣವೇ ಪೊಲೀಸರು ಸಿಸಿಟಿವಿ ಪರಿಶೀಲನೆ ನಡೆಸಿದಾಗ ನಡು ವಯಸ್ಸಿನ ಮಹಿಳೆ ಮಗುವನ್ನು ಅಪಹರಿಸಿದ್ದು ಗೊತ್ತಾಗಿದೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಮಹಿಳೆಯನ್ನು ಪತ್ತೆ ಹಚ್ಚಿದ್ದಾರೆ. ಹಾಸನ ಮೂಲದ 50 ವರ್ಷದ ನಂದಿನಿಯನ್ನು ಬಂಧಿಸಿದ ಪೊಲೀಸರು ಮಗುವನ್ನು ಪೋಷಕರಿಗೆ ಒಪ್ಪಿಸಿದ್ದಾರೆ.

Comments are closed.