FD ಇಡಲು ಪೋಸ್ಟ್ ಆಫೀಸ್ ಅಥವಾ ಬ್ಯಾಂಕ್ ನಲ್ಲಿ ಯಾವುದು ಬೆಸ್ಟ್?

Share the Article

FD ಬಹಳ ಜನಪ್ರಿಯ ಹೂಡಿಕೆಯ ಮಾರ್ಗವಾಗಿದೆ. ವಿಶೇಷವಾಗಿ ಒಂದು ವರ್ಷದ ಎಫ್‌ಡಿಗಳು ಸುರಕ್ಷತೆ ಮತ್ತು ಲಿಕ್ವಿಡಿಟಿ (Liquidity) ಎರಡನ್ನೂ ಒಟ್ಟಿಗೆ ನೀಡುವ ಕಾರಣ ಅನೇಕರ ಪ್ರಥಮ ಆಯ್ಕೆ ಇದೆ ಆಗಿವೆ. ಪೋಸ್ಟ್ ಆಫೀಸ್ ಮತ್ತು ಬ್ಯಾಂಕುಗಳಲ್ಲೂ ಕೂಡ ಈ ಎಫ್ ಡಿ ಅನ್ನು ಇಡಬಹುದಾಗಿದೆ. ನೀವು ಎಫ್ ಡಿ ಇಡಲು ಯೋಚಿಸುತ್ತಿದ್ದೀರಾ? ಹಾಗಿದ್ದರೆ ಎಫ್ ಡಿ ಇಡಲು ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ಯಾವುದು ಬೆಸ್ಟ್?

 

ಬ್ಯಾಂಕ್‌ vs ಪೋಸ್ಟ್‌ ಆಫೀಸ್‌?

ಬ್ಯಾಂಕ್‌ಗಳು ಮತ್ತು ಅಂಚೆ ಕಚೇರಿಗಳು ಎರಡರಲ್ಲೂ ಎಫ್‌ಡಿ ಯೋಜನೆ ಜಾರಿಯಲ್ಲಿದೆ. ಆದ್ರೆ ಹೂಡಿಕೆದಾರರು ಎಲ್ಲಿ ಹೂಡಿಕೆ ಮಾಡಿದ್ರೆ ಒಳ್ಳೆಯದು ಎಂದು ನೋಡೋದು ಮುಖ್ಯ. ಇನ್ನು ಸಾಮಾನ್ಯವಾಗಿ 5 ವರ್ಷಗಳ ಎಫ್‌ಡಿ 7.4% ಬಡ್ಡಿದರವನ್ನು ನೀಡುತ್ತದೆ, ಆದರೆ ಹಿರಿಯ ನಾಗರಿಕರಿಗೆ 7.9% ಬಡ್ಡಿರಗಳಲ್ಲೂ ಲಭ್ಯವಿದೆ.

 

ಅಂಚೆ ಕಚೇರಿ ಎಫ್‌ಡಿ ಬಡ್ಡಿದರ:

ಅಂಚೆ ಕಚೇರಿಗಳಲ್ಲಿ, ಹೂಡಿಕೆದಾರರಿಗೆ ನಿರ್ದಿಷ್ಟ ಅವಧಿಗಳಲ್ಲಿ 6.9% ರಿಂದ 7.5% ವರೆಗೆ ಬಡ್ಡಿದರ ನೀಡಲಾಗುತ್ತದೆ. ಅಂಚೆ ಕಚೇರಿಯಲ್ಲಿ ಒಂದು ವರ್ಷದ ಎಫ್‌ಡಿಗೆ 6.9% ಬಡ್ಡಿ ಮತ್ತು ಐದು ವರ್ಷಗಳ ಎಫ್‌ಡಿಗೆ 7.5% ಬಡ್ಡಿ ನೀಡಲಾಗುತ್ತದೆ. ಕೆಲವು ಬ್ಯಾಂಕ್‌ಗಳು ತನ್ನ ಐದು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಗೆ ಕೇವಲ 6.5% ಬಡ್ಡಿ ನೀಡುತ್ತದೆ. ಆದರೆ ಅಲ್ಪಾವಧಿಯ ಎಫ್‌ಡಿಗಳಲ್ಲಿ ದೀರ್ಘಾವಧಿಯ ಎಫ್‌ಡಿಗಿಂತಲೂ ಹೆಚ್ಚು ಲಾಭವನ್ನು ಪಡೆಯಬಹುದು. ಈ ಬಗ್ಗೆಯೂ ಗಮನಹರಿಸುವುದು ಮುಖ್ಯ.

 

ಬ್ಯಾಂಕ್‌ಗಳ ಬಡ್ಡಿದರ:

* ದೇಶದ ಅತಿದೊಡ್ಡ ಬ್ಯಾಂಕ್ ಎಂದು ಗುರುತಿಸಿಕೊಂಡಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ನಲ್ಲಿ, Fixed Deposit ಬಡ್ಡಿದರಗಳು ಅವಧಿಗೆ ಅನುಗುಣವಾಗಿ ಬದಲಾಗುತ್ತಿರುತ್ತದೆ.

* ಎಸ್‌ಬಿಐ 1 ವರ್ಷದಿಂದ 2 ವರ್ಷಗಳ ಅವಧಿಗೆ ಸಾಮಾನ್ಯ ಜನರಿಗೆ 6.50% ಬಡ್ಡಿದರ ನೀಡಿದ್ರೆ, ಹಿರಿಯ ನಾಗರೀಕರಿಗೆ 7.00% ಬಡ್ಡಿದರವನ್ನು ನೀಡುತ್ತದೆ.

* ಬ್ಯಾಂಕ್ ಆಫ್ ಬರೋಡಾ ಒಂದು ವರ್ಷಕ್ಕಿಂತ ಹೆಚ್ಚಿನ ಅವಧಿಯ ಎಫ್‌ಡಿಗಳಿಗೆ ಸಾಮಾನ್ಯ ನಾಗರಿಕರಿಗೆ 7.3% ಮತ್ತು ಹಿರಿಯ ನಾಗರಿಕರಿಗೆ 7.8% ಬಡ್ಡಿದರವನ್ನು ನೀಡುತ್ತದೆ ಎಂದು ವರದಿಯಾಗಿದೆ.

* ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಕೂಡಾ ಒಂದು ವರ್ಷದಿಂದ ಎರಡು ವರ್ಷಗಳ ಅವಧಿಗೆ 7.3% ಸಾಮಾನ್ಯ ಜನರಿಗೆ ಮತ್ತು ಹಿರಿಯ ನಾಗರಿಕರಿಗೆ 7.8% ಬಡ್ಡಿದರಗಳನ್ನು ನೀಡುತ್ತದೆ.

Comments are closed.